ಅಬುಧಾಬಿ: ಐಪಿಎಲ್ 2020ರ ಪ್ಲೇ ಆಫ್ಸ್, ಫೈನಲ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಭಾನುವಾರ ಬಿಡುಗಡೆ ಮಾಡಿದೆ.
ನವೆಂಬರ್ 5 ರಿಂದ 10ರ ವರೆಗೂ ದುಬೈ ಮತ್ತು ಅಬುಧಾಬಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, ಈ ಕುರಿತ ಅಧಿಕೃತ ಮಾಹಿತಿಯನ್ನು ಐಪಿಎಲ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
Advertisement
Advertisement
ನ.3 ರಂದು ಐಪಿಎಲ್ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ಲೇ ಆಫ್ಸ್, ಫೈನಲ್ ಶೆಡ್ಯೂಲ್ ಬಿಡುಗಡೆಯಾಗಿದ್ದು, ನವೆಂಬರ್ 4ರಂದು ವಿಶ್ರಾಂತಿ ನೀಡಲಾಗಿದೆ. ನ.5 ರಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ದುಬೈ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಎಂದಿನಂತೆ ಅಂಕಪಟ್ಟಿಯಲ್ಲಿ ಮೊದಲ 2 ಸ್ಥಾನಗಳಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡದ ಫೈನಲ್‍ಗೆ ತಲುಪಲಿದೆ.
Advertisement
Advertisement
ನ.6 ರಂದು ಅಬುಧಾಬಿಯಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಅಂಕಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನದಲ್ಲಿರುವ ತಂಡಗಳ ನಡುವೆ ಪಂದ್ಯ ನಡೆಯಲಿದೆ. ನ.7 ವಿಶ್ರಾಂತಿಯ ದಿನವಾಗಿದ್ದು, ನ.8 ರಂದು 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ವೇಳೆ ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಸೋತ ತಂಡ ಹಾಗೂ ಎಲಿಮೆನೇಟರ್ ಪಂದ್ಯದಲ್ಲಿ ಗೆದ್ದ ಪಂದ್ಯಗಳ ನಡುವೆ ಹಣಾಹಣಿ ನಡೆಯಲಿದ್ದು, ಗೆಲುವು ಪಡೆದ ತಂಡ ಫೈನಲ್ ತಲುಪಲಿದೆ.
NEWS – The #Dream11IPL 2020 Playoffs and Final to be played from 5th November to 10th November, 2020 in Dubai and Abu Dhabi.
More details here – https://t.co/8Zyx1hEBx0 pic.twitter.com/eiMqNaQA7b
— IndianPremierLeague (@IPL) October 25, 2020
ನ.9 ವಿಶ್ರಾಂತಿಯ ದಿನವಾಗಿದ್ದು, ಐಪಿಎಲ್ 2020ರ ಫೈನಲ್ ಪಂದ್ಯ ದುಬೈನಲ್ಲಿ ನ.10 ರಂದು ನಡೆಯಲಿದೆ. ಕ್ವಾಲಿಫೈಯರ್ 1 ಮತ್ತು 2 ಪಂದ್ಯಗಳಲ್ಲಿ ಗೆಲುವು ಪಡೆದ ತಂಡಗಳು ಕಪ್‍ಗಾಗಿ ಮುಖಾಮುಖಿ ಆಗಲಿದೆ. ಪ್ಲೇ ಆಫ್ಸ್, ಫೈನಲ್ ಪಂದ್ಯ ರಾತ್ರಿ 7.30ರಿಂದ ಆರಂಭವಾಗಲಿದೆ. ಇತ್ತ ಮಹಿಳಾ ಟಿ20 ಚಾಲೆಂಜ್‍ಗೆ ಶಾರ್ಜಾ ವೇದಿಕೆಯನ್ನು ಫಿಕ್ಸ್ ಮಾಡಲಾಗಿದ್ದು, ಆದ್ದರಿಂದ ಇಲ್ಲಿ ಪ್ಲೇ ಆಫ್ಸ್ ಪಂದ್ಯಗಳನ್ನು ನಿರ್ವಹಿಸುತ್ತಿಲ್ಲ. ಈ ಲೀಗ್ ನವೆಂಬರ್ 4 ರಿಂದ 9ರವರೆಗೂ ನಡೆಯಲಿದೆ.