ಮುಂಬೈ: ಐಪಿಎಲ್ 2020ರ ಆವೃತ್ತಿಯಲ್ಲಿ ಫಿಕ್ಸಿಂಗ್ ನಡೆಯುತ್ತಿದ್ದೆಯೇ ಎಂಬ ಅನುಮಾನವನ್ನು ಕ್ರಿಕೆಟ್ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಈ ಆರೋಪಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಡುವೆ ಭಾನುವಾರ ನಡೆದ ಪಂದ್ಯಕ್ಕೂ ಮುನ್ನ ಮುಂಬೈ ಫ್ರಾಂಚೈಸಿ ಮಾಡಿದ ವಿವಾದಾತ್ಮಕ ಟ್ವೀಟ್ ಕಾರಣವಾಗಿದೆ.
Advertisement
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಟೂರ್ನಿಯ ಎಲ್ಲಾ ಫ್ರಾಂಚೈಸಿಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ತಮ್ಮ ತಂಡದ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸೋಶಿಯಲ್ ಮೀಡಿಯಾ ವೇದಿಕೆಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿವೆ.
Advertisement
2020ರ ಆವೃತ್ತಿಯ 27ನೇ ಪಂದ್ಯದಲ್ಲಿ ಭಾನುವಾರ ದುಬೈ ಕ್ರೀಡಾಂಗಣದಲ್ಲಿ ಡೆಲ್ಲಿ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್‍ಗಳ ಗೆಲುವನ್ನು ಪಡೆದುಕೊಂಡಿತ್ತು. ಆದರೆ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಅಧಿಕೃತ ಖಾತೆಯಿಂದ ಮಾಡಿರುವ ಟ್ವೀಟ್ ಸದ್ಯ ವಿವಾದಕ್ಕೆ ಕಾರಣವಾಗಿದ್ದು, ಅಭಿಮಾನಿಗಳು ಟ್ರೋಲ್ ಮಾಡಿ ಫಿಕ್ಸಿಂಗ್ ಆರೋಪ ಮಾಡುತ್ತಿದ್ದಾರೆ.
Advertisement
Advertisement
ಟ್ವೀಟ್‍ನಲ್ಲಿ ಏನಿತ್ತು?
ಡೆಲ್ಲಿ ವಿರುದ್ಧದ ಪಂದ್ಯ ಆರಂಭವಾಗುವುದಕ್ಕೂ ಮುನ್ನ ರಾತ್ರಿ 7:38ಕ್ಕೆ ಮುಂಬೈ ಇಂಡಿಯನ್ಸ್ ತಂಡದ ಖಾತೆಯಲ್ಲಿ ಡೆಲ್ಲಿ ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ ಗಳಿಸುವ ಮೊತ್ತದ ಎಷ್ಟು ಎಂದು ಟ್ವೀಟ್ ಮಾಡಿತ್ತು. ಆದರೆ ಕೆಲ ಕ್ಷಣಗಳು ಬಳಿಕ ಆ ಟ್ವೀಟ್ ಡಿಲೀಟ್ ಆಗಿತ್ತು. ಟ್ವೀಟ್‍ನಲ್ಲಿ ಡೆಲ್ಲಿ ತಂಡ ಇನ್ನಿಂಗ್ಸ್ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದೆ ಎಂದು ಬರೆಯಲಾಗಿತ್ತು. ವಿಶೇಷ ಎಂಬಂತೆ ಡೆಲ್ಲಿ ತಂಡ ಇನ್ನಿಂಗ್ಸ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತ್ತು. ಈ ಎರಡು ಮೊತ್ತಗಳು ಸಮೀಪವಿರುವುದರಿಂದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಫ್ರಾಂಚೈಸಿ ತಂಡವೊಂದು ಅನುಮಾನಾಸ್ಪದವಾಗಿ ಟ್ವೀಟ್ ಮಾಡಿರುವ ಕಾರಣ ಇದಕ್ಕೆ ಬಿಸಿಸಿಐ ಅಥವಾ ಐಪಿಎಲ್ ಆಡಳಿತ ಮಂಡಳಿ ಉತ್ತರಬೇಕಾಗುವ ಸಾಧ್ಯತೆ ಇದೆ. ಉಳಿದಂತೆ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಕಳೆದ ಪಂದ್ಯದಲ್ಲಿ ರಿಷಬ್ ಪಂತ್ ಗಾಯಗೊಂಡಿದ್ದ ಕಾರಣ ರಹಾನೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತ್ತು. ಶಿಖರ್ ಧವನ್ ಗಳಿಸಿದ ಅರ್ಧ ಶತಕ ಡೆಲ್ಲಿ ತಂಡದ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಕಾರಣವಾಗಿತ್ತು. ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ ಡಿ ಕಾಕ್, ಸೂರ್ಯ ಕುಮಾರ್ ಯಾದವ್ ಅವರ ಅರ್ಧ ಶತಕದ ನೆರವಿನಿಂದ 2 ಎಸೆತ ಬಾಕಿ ಇರುವಂತೆಯೇ 166 ರನ್ ಸಿಡಿಸಿ ಪಂದ್ಯದಲ್ಲಿ ಗೆಲುವು ಪಡೆದಿತ್ತು.
Almost near to the Fixed score @mipaltan ???????????????????? pic.twitter.com/PwiZltcXjP
— νιgηєѕн (@VickyVjMsd) October 11, 2020