ಚೆನ್ನೈ: 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಅಡುವ ಕನಸು ಕಂಡಿದ್ದ ಶ್ರೀಶಾಂತ್‍ಗೆ ನಿರಾಸೆಯಾಗಿದ್ದು, ಐಪಿಎಲ್ ಹರಾಜು ಪಟ್ಟಿಯಿಂದ ಔಟ್ ಆಗಿದ್ದಾರೆ.
ಫೆಬ್ರವರಿ 18 ರಂದು ಚೆನ್ನೈನಲ್ಲಿ ನಡೆಯುವ ಹರಾಜು ಪ್ರಕ್ರಿಯೆಗೆ 292 ಕ್ರಿಕೆಟಿಗರ ಹೆಸರು ಅಂತಿಮವಾಗಿ ಆಯ್ಕೆಗೊಂಡಿದೆ. ಈ ಪಟ್ಟಿಯಲ್ಲಿ 164 ಭಾರತೀಯ ಆಟಗಾರರಿದ್ದರೆ ಇನ್ನೂಳಿದ 128 ಜನ ವಿದೇಶಿ ಕ್ರಿಕೆಟಿಗರಿದ್ದಾರೆ. ಆದರೆ 164 ಭಾರತೀಯ ಪಟ್ಟಿಯಲ್ಲಿ ಶ್ರೀ ಶಾಂತ್ ಹೆಸರು ಕಾಣಿಸುತ್ತಿಲ್ಲ ಇದರೊಂದಿಗೆ 14ನೇ ಆವೃತ್ತಿ ಐಪಿಎಲ್ ಕನಸು ಭಗ್ನಗೊಂಡಿದೆ.
2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನಿಷೇಧ ಶಿಕ್ಷೆ ಮುಗಿಸಿ ಐಪಿಎಲ್ ಮೂಲಕ ಮತ್ತೆ ಟೀಮ್ ಇಂಡಿಯಾಗೆ ಮರಳುವ ಹುಮ್ಮಸ್ಸಿನಲ್ಲಿದ್ದ ಶ್ರೀಗೆ ಶಾಕ್ ಎಂಬಂತೆ ಹರಾಜಿನ ಅಂತಿಮ ಪಟ್ಟಿಯಿಂದ ಹೊರಬಿಳುವ ಮೂಲಕ ನಿರಾಸೆ ಆಗಿದೆ. ಶ್ರೀ 75 ಲಕ್ಷ ರೂ. ಮೂಲಬೆಲೆಗೆ ತಮ್ಮ ಹೆಸರನ್ನು ಹರಾಜಿಗೆ ನೋಂದಾಯಿಸಿಕೊಂಡಿದ್ದರು. ಆದರೆ ಫ್ರಾಂಚೈಸಿ ಅವರು ಹರಾಜಿನಲ್ಲಿ ಕಾಣಿಸಿಕೊಳ್ಳಬೇಕೆಂಬ ಇರಾದೆ ತೋರದೆ ಇದ್ದ ಹಿನ್ನಲೆ ಅಂತಿಮ ಪಟ್ಟಿಯಿಂದ ಅವರನ್ನು ಕೈ ಬಿಡಲಾಗಿದೆ.
ಈ ಮೊದಲು ಒಟ್ಟು 1,114 ಆಟಗಾರರ ಪಟ್ಟಿ ಸಿದ್ಧವಾಗಿತ್ತು ಈ ಪಟ್ಟಿಯಿಂದ 8 ಫ್ರಾಂಚೈಸಿಗಳ ಆಸಕ್ತಿಯ ಆಟಗಾರರನ್ನು ಗಮನಿಸಿ ಉಳಿದ ಆಟಗಾರರನ್ನು ಕೈ ಬಿಡಲಾಗಿದೆ. ಈ ಪಟ್ಟಿಯಲ್ಲಿ ಒಟ್ಟು 10 ಆಟಗಾರರಿಗೆ 2 ಕೋಟಿ ರೂ. ಮೂಲಬೆಲೆ ನಿಗದಿಯಾಗಿದ್ದು, ಈ ಪಟ್ಟಿಯಲ್ಲಿ ಭಾರತೀಯ ಆಟಗಾರರಾದ ಹರ್ಭಜನ್ ಸಿಂಗ್ ಮತ್ತು ಕೇದಾರ್ ಜಾಧವ್ ಕಾಣಿಸಿಕೊಂಡರೆ ಇನ್ನೂಳಿದ ಆಟಗಾರರಾದ ಸ್ವೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‍ವೆಲ್, ಇಂಗ್ಲೆಂಡ್‍ನ ಜೇಸನ್ ರಾಯ್, ಲಿಯಾಮ್ ಪ್ಲಂಕೆಟ್, ಮಾರ್ಕ್ ವುಡ್, ಸ್ಯಾಮ್ ಬಿಲ್ಲಿಂಗ್ಸ್, ಮೊಯಿನ್ ಅಲಿ, ಶಕೀಬ್ ಅಲ್ ಹಸನ್ ವಿದೇಶಿ ಆಟಗಾರರಾಗಿದ್ದಾರೆ.
ಶ್ರೀಶಾಂತ್‍ರಂತೆ ಅಂತಿಮ ಪಟ್ಟಿಯಲ್ಲಿ ಹೊರಬಿದ್ದ ಇನ್ನೊಬ್ಬ ಆಟಗಾರರಾಗಿ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಕಾಣಿಸಿಕೊಂಡಿದ್ದಾರೆ. ಪೂಜಾರ 50 ಲಕ್ಷ ಮುಖಬೆಲೆ ಹೊಂದಿದ್ದರು. 12 ಆಟಗಾರರೂ 1.5 ಕೋಟಿ ರೂ ಮೂಲಬೆಲೆ ಪಟ್ಟಿಯಲ್ಲಿ ಕಾಣಿಸಿಕೊಂಡರೆ 11 ಜನ ತಲಾ 1 ಕೋಟಿ ರೂ ಮೂಲಬೆಲೆಯೊಂದಿಗೆ ಅಂತಿಮ ಪಟ್ಟಿಯಲ್ಲಿದ್ದಾರೆ. ಫೆಬ್ರವರಿ 18 ನಡೆಯುವ ಹರಾಜಿನಲ್ಲಿ 8 ತಂಡಗಳು 22 ವಿದೇಶಿ ಆಟಗಾರರು ಸಹಿತ ಗರಿಷ್ಠ 61 ಆಟಗಾರರನ್ನು ಖರೀದಿಸಲು ಅವಕಾಶವಿದ್ದು ಯಾರು ಯಾವ ತಂಡದ ಪಾಲಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.