ದುಬೈ: ಐಪಿಎಲ್ 2020ರ ಆವೃತ್ತಿಯಲ್ಲಿ ಸಣ್ಣ ಬದಲಾವಣೆ ನಡೆಯಲಿದೆ. ಯುಇಎನಲ್ಲಿ ಸೆ.19 ರಿಂದ ನ.10 ವರೆಗೂ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಹಾಗೂ ರನ್ನರ್ ಅಪ್ ತಂಡ ಚೆನ್ನೈ ಮುಖಾಮುಖಿ ಆಗಬೇಕಿತ್ತು. ಆದರೆ ಚೆನ್ನೈ ತಂಡದ 12 ಮಂದಿಗೆ ಕೊರೊನಾ ಪಾಸಿಟಿವ್ ಬಂದ್ ಹಿನ್ನೆಲೆಯಲ್ಲಿ ಶೆಡ್ಯೂಲ್ ಬದಲಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.
Advertisement
2008ರಿಂದ ಐಪಿಎಲ್ ಟೂರ್ನಿ ಆರಂಭವಾಗಿದ್ದು, ಪ್ರತಿ ಟೂರ್ನಿಯ ಆರಂಭದಲ್ಲಿ ಕಳೆದ ಆವೃತ್ತಿಯ ಫೈನಲಿಸ್ಟ್ ತಂಡಗಳು ಮುಖಾಮುಖಿ ಆಗುತ್ತಿದ್ದವು. ಈ ಆವೃತ್ತಿಯ ಸೆ.19 ರಂದು ಮೊದಲ ಪಂದ್ಯ ನಡೆಯಲಿದೆ. ಆದರೆ ಚೆನ್ನೈ ತಂಡದ ವೇಗದ ಬೌಲರ್ ದೀಪಕ್ ಚಹರ್, ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಸೇರಿದಂತೆ ತಂಡದ 10 ಮಂದಿ ಸಿಬ್ಬಂದಿಗೆ ಕೂಡ ಪಾಸಿಟವ್ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಇತರೆ ಆಟಗಾರರ ಕ್ವಾರಂಟೈನ್ ಅವಧಿ ಪೂರ್ಣಗೊಳ್ಳಲು ಮತ್ತೊಂದು ವಾರ ಸಮಯಾವಕಾಶ ಬೇಕಿದೆ. ಚೆನ್ನೈ ತಂಡದ ಹೊರತು ಪಡಿಸಿ ಬೇರಾವುದೇ ತಂಡದ ಆಟಗಾರರಿಗೆ ಕೊರೊನಾ ಸೋಂಕು ಹರಡದಿರುವುದು ಗಮನಾರ್ಹವಾಗಿದೆ.
Advertisement
Advertisement
ಸೆ.19ರ ವೇಳೆಗೆ ಚೆನ್ನೈ ತಂಡ ಪೂರ್ಣ ಪ್ರಮಾಣದಲ್ಲಿ ಕೊರೊನಾದಿಂದ ಚೇತರಿಸಿಕೊಳ್ಳುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಟೂರ್ನಿಯ ಶೆಡ್ಯೂಲ್‍ನಲ್ಲಿ ಸಣ್ಣ ಬದಲಾವಣೆ ಮಾಡಿ ಮೊದಲ ಪಂದ್ಯದಲ್ಲಿ ಆರ್ ಸಿಬಿ ತಂಡವನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಲಾಗಿದೆ. ಇತ್ತ ಎರಡು ದಿನಗಳ ಅವಧಿಯಲ್ಲಿ ಚೆನ್ನೈ ತಂಡದಲ್ಲಿ 12 ಕೊರೊನಾ ಪ್ರಕರಣಗಳು ಪತ್ತೆಯಾಗಿವುದರಿಂದ ಮತ್ತಷ್ಟು ಪಾಸಿಟಿವ್ ಪ್ರಕರಣಗಳು ವರದಿಯಾಗುವ ನಿರೀಕ್ಷೆ ಇದೆ.
Advertisement
They are back! @mipaltan, the defending champions had their first hit in Abu Dhabi! #Dream11IPL pic.twitter.com/AmThvqpVXC
— IndianPremierLeague (@IPL) August 29, 2020