ಮುಂಬೈ: ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿರುವ ಕ್ರಿಕೆಟ್ ಜಾತ್ರೆ ಐಪಿಎಲ್‍ಗೆ ಇನ್ನೇನೂ ಕೆಲವೇ ದಿನಗಳು ಬಾಕಿ ಇದೆ. ಆದರೆ ಈ ಮಧ್ಯೆ ಐಪಿಎಲ್ ನಡೆಯುವ ಮುಂಬೈ ನಗರದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದಾಗಿ ಐಪಿಎಲ್‍ಗೆ ಕರಿ ಛಾಯೆ ಆವರಿಸಿದೆ.
Advertisement
ಈಗಾಗಲೇ ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ಭಾನುವಾರದಿಂದ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಇದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಾಟಗಳಿಗೆ ತೊಡಕಾಗುವ ಭೀತಿ ಎದುರಾಗಿದೆ.
Advertisement
Advertisement
ಮಹಾರಾಷ್ಟ್ರದಲ್ಲಿ ಮಾಡಿರುವ ನೈಟ್ ಕರ್ಫ್ಯೂ ಪ್ರಕಾರ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಜನಸಂಚಾರವನ್ನು ನಿಷೇಧಿಸಿದೆ. ಆದರೆ ವಾಂಖೆಂಡೆ ಕ್ರೀಡಾಂಗಣದಲ್ಲಿ ಏಪ್ರಿಲ್ 10 ರಿಂದ ಪಂದ್ಯಾಟಗಳು ಆರಂಭವಾಗಲಿದ್ದು ಏಪ್ರಿಲ್ 25ರ ವರೆಗೆ ಒಟ್ಟು 10 ಲೀಗ್ ಪಂದ್ಯಾಟಗಳು ಇಲ್ಲಿ ನಡೆಯಲಿದೆ. ಈ ಪಂದ್ಯಾಟಗಳಲ್ಲಿ ಒಂದು ಪಂದ್ಯ ಮಧ್ಯಾಹ್ನ 3.30 ಗಂಟೆಗೆ ಪ್ರಾರಂಭವಾದರೆ ಉಳಿದೆಲ್ಲಾ ಪಂದ್ಯಗಳು ರಾತ್ರಿ 7.30 ಗಂಟೆಯಿಂದ ಪ್ರಾರಂಭವಾಗಿ ತಡರಾತ್ರಿ ವರೆಗೆ ನಡೆಯಲಿದೆ. ಈ ವೇಳೆ ಆಟಗಾರರು, ತರಬೇತಿ ಸಿಬ್ಬಂದಿ, ಮೈದಾನದ ಸಿಬ್ಬಂದಿ, ಪಂದ್ಯಾಟದ ಪ್ರಸಾರ ವಾಹಿನಿಗಳ ಸಿಬ್ಬಂದಿ ಹೀಗೆ ಹಲವು ಜನ ನೈಟ್ ಕರ್ಫ್ಯೂ ನ ಇಕ್ಕಟ್ಟಿಗೆ ಸಿಲುಕುವ ಪರಿಸ್ಥಿತಿ ಎದುರಾಗಿದೆ.
Advertisement
ಈಗಾಗಲೇ ಐಪಿಎಲ್ ಪಂದ್ಯಾಟಗಳಿಗೆ ಪ್ರೇಕ್ಷಕರಿಗೆ ನಿಷೇಧ ಹೇರಲಾಗಿದೆ. ಆದರೆ ಪಂದ್ಯಾಟ ನಡೆಯುವ ವೇಳೆ ಆಟಗಾರರು ಮತ್ತು ಮೈದಾನದ ಇತರ ಸಿಬ್ಬಂದಿ ಈ ನೈಟ್ ನೈಟ್ ಕರ್ಫ್ಯೂ ನಿಂದ ಹೇಗೆ ಪಾರಾಗುವುದು ಎಂಬ ಚಿಂತೆಯಲ್ಲಿದ್ದರೆ, ಇತ್ತ ಮಹಾರಾಷ್ಟ್ರ ಸರ್ಕಾರ ನೈಟ್ ಕರ್ಫ್ಯೂ ಎಷ್ಟುದಿನ ಇರಲಿದೆ ಎಂಬುದನ್ನು ತಿಳಿಸಿಲ್ಲ. ಹಾಗಾಗಿ ಬಿಸಿಸಿಐ ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಿ ಯಾವ ರೀತಿ ಪಂದ್ಯಾಟಗಳನ್ನು ನಡೆಸಬಹುದು, ನೈಟ್ ಕರ್ಫ್ಯೂ ವಿನಾಯಿತಿ ಕೊಡುವುದೇ ಎಂಬುದನ್ನು ಚರ್ಚಿಸಬೇಕಾಗಿದೆ.
ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾಗುತ್ತ ಸಾಗಿದರೆ ವಾಂಖೆಡೆಯಲ್ಲಿ ನಡೆಯುವ ಪಂದ್ಯಾಟಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ಕೂಡ ಚರ್ಚೆಯಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಬಿಸಿಸಿಐ ಮತ್ತು ಮಹಾರಾಷ್ಟ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಐಪಿಎಲ್ ಯಶಸ್ವಿಯಾಗಿ ನಡೆಸಲಿ ಎಂಬುದು ಪ್ರೇಕ್ಷಕರ ಮನದಾಸೆಯಾಗಿದೆ.
14ನೇ ಆವೃತ್ತಿಯ ಐಪಿಎಲ್ ಪಂದ್ಯಾಟಗಳು ಏಪ್ರಿಲ್ 9 ರಿಂದ ಮೇ 30ರ ವರೆಗೆ ಬೆಂಗಳೂರು, ಚೆನ್ನೈ, ದೆಹಲಿ, ಅಹಮದಾಬಾದ್, ಕೋಲ್ಕತ್ತಾ ಹಾಗೂ ಮುಂಬೈ ನಗರಗಳಲ್ಲಿ ನಡೆಯಲಿದೆ.