ದುಬೈ: ಕೊರೊನಾದಿಂದಾಗಿ ಮುಂದೂಡಲ್ಪಟ್ಟ ಐಪಿಎಲ್‍ನ ಎರಡನೇ ಭಾಗವನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್‍ನಲ್ಲಿ ಯುಎಇನಲ್ಲಿ ನಡೆಸಲು ಈಗಾಗಲೇ ಬಿಸಿಸಿಐ ತೀರ್ಮಾನಿಸಿದೆ. ಇದಾದ ಬಳಿಕ ಅಕ್ಟೋಬರ್ 17 ರಿಂದ ಇಲ್ಲೇ ಟಿ20 ವಿಶ್ವಕಪ್‍ನ್ನು ಕೂಡ ನಡೆಸಲು ದಿನಾಂಕ ನಿಗದಿಯಾಗಿದೆ ಎಂದು ವರದಿಯಾಗಿದೆ.
Advertisement
2021ರ ಟಿ20 ವಿಶ್ವಕಪ್‍ನ್ನು ಭಾರತದಲ್ಲೇ ನಡೆಸಬೇಕೆಂದು ಬಿಸಿಸಿಐ ಶತಪ್ರಯತ್ನ ನಡೆಸುತ್ತಿತ್ತು. ಆದರೆ ಕೊರೊನಾದಿಂದಾಗಿ ಭಾರತದಲ್ಲಿ ಟಿ20 ವಿಶ್ವಕಪ್ ನಡೆಸಲು ಕಷ್ಟವಾಗಿರುವುದರಿಂದಾಗಿ ಇದೀಗ ಪಂದ್ಯಗಳು ಯುಎಇಗೆ ಶಿಫ್ಟ್ ಆಗಿದೆ. ಮೂಲಗಳ ಪ್ರಕಾರ ಪಂದ್ಯಗಳ ಆರಂಭ ಮತ್ತು ಫೈನಲ್‍ನ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 17 ರಂದು ಪ್ರಾರಂಭಗೊಂಡು ನವೆಂಬರ್ 14 ರಂದು ಫೈನಲ್ ಪಂದ್ಯ ನಡೆಯುವ ಸಾಧ್ಯತೆಗಳಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
Advertisement
Advertisement
ಈ ಕುರಿತು ಬಿಸಿಸಿಐನಿಂದ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಈ ಹಿಂದೆ ಭಾರತದಲ್ಲಿ ಅಕ್ಟೋಬರ್ ಸಮಯ ಮಳೆಗಾಲವಾಗಿರುವುದರಿಂದ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ ಇದೀಗ ಇದೇ ದಿನಾಂಕದಂದು ಯುಎಇ ಮತ್ತು ಓಮನ್‍ನಲ್ಲಿ ಟಿ20 ಪಂದ್ಯಗಳು ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ
Advertisement
ಒಟ್ಟು 16 ತಂಡಗಳು ಭಾಗವಹಿಸುವ ಈ ಟಿ20 ಕೂಟದ ಮೊದಲ 12 ಪಂದ್ಯಗಳು ಯುಎಇ ಮತ್ತು ಮುಂದಿನ ಪಂದ್ಯಗಳು ಓಮನ್‍ನಲ್ಲಿ ನಡೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ.