ಐಪಿಎಲ್ ಬಳಿಕ ದಕ್ಷಿಣ ಆಫ್ರಿಕಾ ತಂಡದಲ್ಲಿ ಎಬಿಡಿ?

Public TV
2 Min Read
ABD VILLIERS 5

ಚೆನ್ನೈ: ಐಪಿಎಲ್ ಬಳಿಕ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲಿ ತಮ್ಮ ರಾಷ್ಟ್ರೀಯ ತಂಡ ದಕ್ಷಿಣ ಆಫ್ರಿಕಾ ಪರ ಎಬಿಡಿ ವಿಲಿಯರ್ಸ್ ಆಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ABD VILLIERS 1

ಕ್ರಿಕೆಟ್ ಅಂಗಳದಲ್ಲಿ 360 ಡಿಗ್ರಿಯಲ್ಲಿ ಬ್ಯಾಟ್ ಬೀಸುವ ಮೂಲಕ ಬಾಲ್‍ಗಳಿಗೆ ಅಷ್ಟ ದಿಕ್ಕುಗಳನ್ನು ಪರಿಚಯಿಸುವದರಲ್ಲಿ ನಿಸ್ಸಿಮರಾಗಿರುವ, ಕೋಟ್ಯಂತರ ಅಭಿಮಾನಿಗಳ ಪಾಲಿನ ಅಚ್ಚು ಮೆಚ್ಚಿನ ಕ್ರಿಕೆಟರ್ ಎ.ಬಿ.ಡಿವಿಲಿಯರ್ಸ್ ಭಾರತದಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಆರ್‌ಸಿಬಿ ಪರ ಬ್ಯಾಟಿಂಗ್‍ನಲ್ಲಿ ಅಬ್ಬರಿಸುತ್ತಿದ್ದಾರೆ. ವಿಲಿಯರ್ಸ್ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ಮೂರು ವರ್ಷ ಆಗಿದೆ.

ABD VILLIERS 3

2018ರಲ್ಲಿ ವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ನಂತರ ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಫ್ರಾಂಚೈಸಿ ಟಿ20 ಲೀಗ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ನಡೆಯುತ್ತಿರುವ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಆರ್‌ಸಿಬಿ ತಂಡದ ಪರ ಬ್ಯಾಟಿಂಗ್‍ನಲ್ಲಿ ದೂಳೆಬ್ಬೆಸುತ್ತಿರುವುದನ್ನು ನೋಡಿ ಮುಂದಿನ ಟಿ20 ವಿಶ್ವಕಪ್‍ನಲ್ಲಿ ರಾಷ್ಟ್ರೀಯ ತಂಡಕ್ಕಾಗಿ ಆಡುವ ಅವಕಾಶ ಮತ್ತೆ ಬರುವ ನಿರೀಕ್ಷೆ ಇದೆ. ಈ ಕುರಿತು ಈಗಾಗಲೇ ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಷರ್ ಕೂಡ ಮನಸ್ಸು ಮಾಡಿದ್ದಾರೆ ಎಂಬ ವದಂತಿ ಕೂಡ ಹರಿದಾಡುತ್ತಿದೆ.

ಐಪಿಎಲ್‍ಗೂ ಮುಂಚೆ ವಿಲಿಯರ್ಸ್ ಜೊತೆ ಮಾತನಾಡಿರುವ ಬೌಷರ್, ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರಿ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ. ನಂತರ ಮುಂದೆ ರಾಷ್ಟ್ರೀಯ ತಂಡದಲ್ಲಿನ ಕದ ತಾನಾಗಿಯೇ ತೆರೆಯಲಿದೆ. ಎಂದು ಮತ್ತೆ ಪುನರಾಗಮನದ ಕುರಿತು ಸಣ್ಣ ಸುಳಿವೊಂದನ್ನು ನೀಡಿದ್ದಾರೆ.

abd Villiers 7

ಎಬಿಡಿ ಕೂಡ ರಾಷ್ಟ್ರೀಯ ತಂಡದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಬೇಕೆಂಬ ಆಸೆ ಹೊಂದಿದ್ದಾರೆ. ಇದಕ್ಕೆ ಸರಿಯಾಗಿ ಐಪಿಎಲ್‍ನಲ್ಲಿ ತನ್ನ ಬ್ಯಾಟಿಂಗ್ ಕೌಶಲ್ಯ ಹಾಗೂ ಫಿಟ್ನೆಸ್ ಪ್ರೂವ್ ಮಾಡುತ್ತಿದ್ದು, ಆರ್‌ಸಿಬಿ ಮತ್ತು ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಎಬಿಡಿ 76 ರನ್ (34 ಎಸೆತ, 9 ಬೌಂಡರಿ, 3 ಸಿಕ್ಸರ್) ಸಿಡಿಸಿ ಮ್ಯಾಚ್‍ವಿನ್ನಿಂಗ್ ಇನ್ನಿಂಗ್ಸ್ ಒಂದನ್ನು ಕಟ್ಟಿ ಮತ್ತೆ ಅಭಿಮಾನಿಗಳ ಮನಗೆದ್ದಿದ್ದಾರೆ. ಇದು ಸಹಜವಾಗಿಯೇ ರಾಷ್ಟ್ರೀಯ ತಂಡಕ್ಕೂ ಕೂಡ ಇವರ ಆಯ್ಕೆಗೆ ಒಂದು ಅವಕಾಶ ಸಿಕ್ಕಂತಾಗಿದೆ.

ICC T20 World Cup

ಈ ಕುರಿತು ಸ್ವತಃ ಎಬಿಡಿ ಕೂಡ ಮಾತನಾಡಿದ್ದು, ವಿಶ್ವಕಪ್‍ನಲ್ಲಿ ನಾನು ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆಯುವುದು ಅದ್ಭುತ ಎನಿಸಲಿದೆ. ಈಗಾಗಲೇ ತಂಡದಲ್ಲಿ ಯುವ ಆಟಗಾರರು ಸೇರಿಕೊಂಡಿದ್ದಾರೆ. ಇದರೊಂದಿಗೆ ತಂಡದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ನಿರ್ಣಾಯಕವೆನಿಸಿಕೊಳ್ಳುತ್ತದೆ. ಹಾಗೆ ತಂಡದಲ್ಲಿ ಸ್ಥಾನ ಸಿಕ್ಕರೆ ಮತ್ತೆ ಅವಕಾಶ ಬಳಸಿಕೊಳ್ಳಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಐಪಿಎಲ್‍ನಲ್ಲಿ ಉತ್ತಮ ಫಾರ್ಮ್ ಮುಂದುವರಿಸಿರುವ ಎಬಿಡಿ ಮುಂದಿನ ವಿಶ್ವಕಪ್‍ನಲ್ಲಿ ದಕ್ಷಿಣ ಆಫ್ರಿಕಾ ಪರ ಆಡಬೇಕೆಂದು ಅಭಿಮಾನಿಗಳು ಕೂಡ ಬೇಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲವನ್ನು ಗಮನಿಸಿದರೆ ಮುಂದಿನ ಟಿ20 ವಿಶ್ವಕಪ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್ ಮ್ಯಾನ್ ಎಬಿಡಿ ಕಾಣಿಸಿಕೊಂಡರು ಅಚ್ಚರಿಪಡಬೇಕಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *