ಮುಂಬೈ: 14ನೇ ಆವೃತ್ತಿಯ ಐಪಿಎಲ್ ಆರಂಭವಾಗಿ ಪಂದ್ಯಗಳು ಒಂದರ ಮೇಲೊಂದರಂತೆ ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಗುತ್ತಿದೆ. ಈ ನಡುವೆ ಐಪಿಎಲ್ ಆರಂಭದ ಮೊದಲ ವಾರದಲ್ಲೇ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬಹುದೊಡ್ಡ ಆಘಾತವೊಂದು ಎದುರಾಗಿದೆ.
Advertisement
ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 12 ರಂದು ಪಂಜಾಬ್ ಕಿಂಗ್ಸ್ ಪರ ಆಡಿತ್ತು. ಈ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಅವರು ಫೀಲ್ಡಿಂಗ್ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದರು. ನಂತರ ಇದೀಗ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತಿಳಿಸಿರುವ ಪ್ರಕಾರ ಸ್ಟೋಕ್ಸ್ ಅವರ ಕೈ ಬೆರಳು ಮುರಿತಕ್ಕೆ ಒಳಗಾಗಿದ್ದು, ಹಾಗಾಗಿ ಬೆನ್ ಸ್ಟೋಕ್ಸ್ ಈ ಬಾರಿಯ ಐಪಿಎಲ್‍ನಿಂದಲೇ ಹೊರ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.
Advertisement
Advertisement
ರಾಜಸ್ಥಾನ್ ರಾಯಲ್ಸ್ ತಂಡದ ಅಮೂಲ್ಯವಾದ ಮತ್ತು ಬೇಡಿಕೆಯ ಆಟಗಾರ ಬೆನ್ ಅವರು ಕೈ ಬೆರಳು ಮುರಿತದಿಂದಾಗಿ ಈ ಸೀಸನ್‍ನ ಐಪಿಎಲ್‍ನಿಂದ ಹೊರಹೋಗಿದ್ದಾರೆ ಎಂದು ಅಧಿಕೃತವಾಗಿ ಸಾಮಾಜಿಕ ಜಾಲತಾಣದ ಮೂಲಕ ಫ್ರಾಂಚೈಸಿ ತಿಳಿಸಿದ್ದು, ಸ್ಟೋಕ್ಸ್ ಗಾಯಗೊಂಡಿದ್ದರು ಕೂಡ ತಂಡದೊಂದಿಗೆ ಟೂರ್ನಿಯ ಅಂತ್ಯದ ವರೆಗೆ ಆಫ್‍ದಿಫೀಲ್ಡ್ ನಲ್ಲಿ ಜೊತೆಗಿರಲಿದ್ದು ಅವರ ಸೇವೆ ಅಗತ್ಯವಿದೆ ಎಂದು ಫ್ರಾಂಚೈಸಿ ತಿಳಿಸಿದೆ.
Advertisement
Ben Stokes has been ruled out of the IPL following a broken finger in last night's game. ????
He will stay with the Royals and support the rest of the group in the upcoming matches. ????#RoyalsFamily | @benstokes38 pic.twitter.com/WVUIFmPLMJ
— Rajasthan Royals (@rajasthanroyals) April 13, 2021
ಬೆನ್ ಸ್ಟೋಕ್ಸ್ ಅವರು ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಗ್ರಿಸ್ ಗೇಲ್ ಬಾರಿಸಿದ ಚೆಂಡನ್ನು ಹಿಡಿಯಲು ಯತ್ನಿಸಿದ ವೇಳೆ ಎಡಗೈ ಬೆರಳಿನ ಮೂಲೆ ಮುರಿತಕ್ಕೆ ಒಳಗಾಗಿತ್ತು. ಆದರೂ ಕೂಡ ಬೆನ್ ಸ್ಟೋಕ್ ರಾಜಸ್ಥಾನ್ ಪರ ಬ್ಯಾಟ್ ಹಿಡಿದು ಆರಂಭಿಕರಾಗಿ ಕಣಕ್ಕಿಳಿದಿದ್ದರು.
ಐಪಿಎಲ್ ಆರಂಭಕ್ಕೂ ಮೊದಲೇ ರಾಜಸ್ಥಾನ ತಂಡದ ಇನ್ನೊರ್ವ ಆಲ್‍ರೌಂಡರ್ ಜೋಫ್ರಾ ಆರ್ಚರ್ ತಂಡದಿಂದ ದೂರ ಉಳಿದಿದ್ದರು ಇದೀಗ ಸ್ಟೋಕ್ಸ್ ಕೂಡ ಹೊರಗುಳಿಯುವಂತಾಗಿದೆ. ಇದರಿಂದ ರಾಜಸ್ಥಾನ್ ತಂಡ ಬಲಿಷ್ಠ ಆಲ್‍ರೌಂಡರ್ ಆಟಗಾರನ್ನು ಕಳೆದುಕೊಂಡಂತಾಗಿದೆ.