ಚೆನ್ನೈ: 2021ರ ಐಪಿಎಲ್‍ನ ಮೊದಲಾರ್ಧದ ಏಳು ಪಂದ್ಯಗಳಲ್ಲಿ ಸೈಲೆಂಟ್ ಆಗಿದ್ದ ಧೋನಿಯ ಬ್ಯಾಟ್‍ನಿಂದ ಮುಂದಿನ ದ್ವಿತೀಯಾರ್ಧದಲ್ಲಿ ರನ್ ಮಳೆ ಸುರಿಯಲಿದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ದೀಪಕ್ ಚಹರ್ ಭವಿಷ್ಯ ನುಡಿದಿದ್ದಾರೆ.
Advertisement
ಈ ಕುರಿತು ಸ್ಥಳೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ದೀಪಕ್ ಚಹರ್, ಯಾವುದೇ ಬ್ಯಾಟ್ಸ್‌ಮ್ಯಾನ್ 15 ರಿಂದ 20 ವರ್ಷಗಳ ಕಾಲ ಒಂದೇ ರೀತಿ ಬ್ಯಾಟ್ ಬೀಸಲು ಸಾಧ್ಯವಿಲ್ಲ. ಯಾವುದೇ ಆಟಗಾರ ಸ್ಪರ್ಧಾತ್ಮಕ ಕ್ರಿಕೆಟ್‍ನಿಂದ ದೂರ ಸರಿದ ಬಳಿಕ ಮತ್ತೆ ಸ್ಪರ್ಧೆಗಿಳಿದರೆ ಫಾರ್ಮ್ ಕಂಡುಕೊಳ್ಳಲು ಕೆಲ ಸಮಯ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
Advertisement
Advertisement
ಧೋನಿ ಯಾವತ್ತು ಕೂಡ ಫಿನಿಷರ್ ರೋಲ್‍ನ್ನು ನಿಭಾಯಿಸುತ್ತಾರೆ. ಈ ಹಿಂದೆ ಅವರೊಂದಿಗೆ ಆಡಿದಾಗಲೂ ಅವರು ನಿಧಾನವಾಗಿ ಫಾರ್ಮ್ ಕಂಡುಕೊಂಡು ತಂಡಕ್ಕೆ ಜಯ ತಂದುಕೊಟ್ಟಿರುವುದನ್ನು ನೋಡಿದ್ದೇನೆ. ಹಾಗಾಗಿ ಇದೀಗ ಕೊರೊನಾದಿಂದಾಗಿ ಮುಂದೂಡಲ್ಪಟ್ಟಿರುವ ಐಪಿಎಲ್‍ನ ಮುಂದಿನ ಭಾಗದಲ್ಲಿ ಧೋನಿಯ ಬ್ಯಾಟಿಂಗ್‍ನಿಂದ ರನ್ ಮಳೆ ಸುರಿಯಲಿದ್ದು ಬೆಸ್ಟ್ ಪ್ರದರ್ಶನ ನೀಡಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement
14ನೇ ಆವೃತ್ತಿಯ ಐಪಿಎಲ್‍ನ ಮೊದಲಾರ್ಧವು ತಂಡದ ಆಟಗಾರರಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕಿನಿಂದ ಮುಂದೂಡಲ್ಪಟ್ಟಿತ್ತು. ಇದೀಗ ಸೆಪ್ಟಂಬರ್‍ನಲ್ಲಿ ದುಬೈನಲ್ಲಿ ದ್ವಿತೀಯಾರ್ಧ ನಡೆಸುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಧೋನಿ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಚೆನ್ನೈ ಪರ ಏಳು ಪಂದ್ಯಗಳನ್ನು ಆಡಿ ಕೇವಲ 37 ರನ್ ಬಾರಿಸಿದ್ದಾರೆ.