– 38 ಲಕ್ಷ ರೂ. ಮೌಲ್ಯದ ವಸ್ತುಗಳು ವಶ
ಕಲಬುರಗಿ: ಐಪಿಎಲ್ ಕ್ರಿಕೆಟ್ ಬುಕ್ಕಿಂಗ್‍ನಲ್ಲಿ ತೊಡಗಿಕೊಂಡಿರುವ ಆರೋಪಿಗಳನ್ನು ಪೊಲೀಸರುವ ಬಂಧಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಸೋಲಾಪುರದ ಅವಂತಿ ನಗರದ ಅತುಲ್ ಸುರೇಶ ಮತ್ತು ಭವಾನಿಪೇಠ ನಿವಾಸಿ ಪ್ರದೀಪ್ ಕಾರಂಜೆ ಎಂದು ಗುರುತಿಸಲಾಗಿದೆ. ಕಲಬುರಗಿಯ ಎಂಬಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಿಬ್ಬರು ಐಪಿಎಲ್ ಕ್ರಿಕೆಟ್ ಬುಕ್ಕಿಂಗ್ ದಂಧೆಯನ್ನು ನಡೆಸುತ್ತಿದ್ದರು. ಬಂಧಿತರಿಂದ ನಗದು ಸೇರಿದಂತೆ 38 ಲಕ್ಷ ರೂ ಮೌಲ್ಯದ ಲ್ಯಾಪ್‍ಟಾಪ್, ಹಾಡ್೯ಡಿಸ್ಕ್, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಅವರ ಪತ್ನಿಗೆ ಸೇರಿದ ಕಾರನ್ನು ಜಪ್ತಿ ಮಾಡಲಾಗಿದೆ.ಬಂಧಿತ ಆರೋಪಿಗಳನ್ನು ಸೋಲಾಪುರ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ.