ಬೆಂಗಳೂರು: ಐಪಿಎಲ್-2020 ಅಂತಿಮ ಹಂತಕ್ಕೆ ಬಂದು ತಲುಪಿದೆ. ಲೀಗ್ ಹಂತದ ಪಂದ್ಯಗಳು ಮುಗಿದು ಎಲಿಮಿನೇಟರ್ ಮತ್ತು ಫೈನಲ್ ಪಂದ್ಯ ಮಾತ್ರ ಉಳಿದಿವೆ. ಇದರ ಜೊತೆಗೆ ಕರ್ನಾಟಕದ ಆಟಗಾರರು ವಿಶೇಷ ಸಾಧನೆ ಮಾಡಿದ್ದಾರೆ.
ಐಪಿಎಲ್‍ನಲ್ಲಿ ಈ ಬಾರಿ ಕನ್ನಡಿಗರ ಅರ್ಭಟ ಜೋರಾಗಿ ನಡೆದಿದೆ. ಕರ್ನಾಟಕದ ಕೆಎಲ್ ರಾಹುಲ್, ಮನೀಶ್ ಪಾಂಡೆ, ಮಯಾಂಕ್ ಅರ್ಗವಾಲ್ ಮತ್ತು ಯುವ ಆಟಗಾರ ದೇವದತ್ ಪಡಿಕ್ಕಲ್ ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್-2020ಯಲ್ಲಿ ಟಾಪ್ ಆರ್ಡರ್ ನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಕನ್ನಡಿಗರು, ಒಂದೇ ರಾಜ್ಯದ ನಾಲ್ಕು ಬ್ಯಾಟ್ಸ್ ಮನ್‍ಗಳು ಐಪಿಎಲ್ ಟೂರ್ನಿಯಲ್ಲಿ ವೈಯಕ್ತಿಕವಾಗಿ 400ಕ್ಕೂ ಅಧಿಕ ರನ್ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ.
Advertisement
Advertisement
ಈ ಬಾರಿಯ ಐಪಿಎಲ್‍ನಲ್ಲಿ ಸ್ಫೋಟಕವಾಗಿ ಆಡಿದ ಕಿಂಗ್ಸ್ ಇಲೆವೆನ್ ತಂಡದ ನಾಯಕ ಕೆಎಲ್ ರಾಹುಲ್ 14 ಪಂದ್ಯಗಳನ್ನು ಆಡಿ ಒಂದು ಶತಕ 5 ಅರ್ಧಶತಕದ ನೆರವಿನಿಂದ ಭರ್ಜರಿ 670 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಇವರ ಜೊತೆಗೆ ಪಂಜಾಬ್ ತಂಡದಲ್ಲಿ ಆಡುವ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು 11 ಪಂದ್ಯಗಳಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕದ ನೆರವಿನಿಂದ 424 ರನ್ ಸಿಡಿಸಿದ್ದಾರೆ.
Advertisement
Advertisement
ಐಪಿಎಲ್‍ನಲ್ಲಿ ಭರ್ಜರಿ ಫಾರ್ಮ್‍ನಲ್ಲಿ ಕಾಣಿಸಿಕೊಂಡಿದ್ದ ಆರ್ ಸಿಬಿ ಆಟಗಾರ ದೇವದತ್ ಪಡಿಕ್ಕಲ್, ತಾನಾಡಿದ ಮೊದಲ ಐಪಿಎಲ್‍ನಲ್ಲೇ ಕಮಾಲ್ ಮಾಡಿದ್ದಾರೆ. ಇವರು ಕೂಡ 15 ಪಂದ್ಯಗಳನ್ನು ಆಡಿ ಐದು ಅರ್ಧಶತಕ ಸಿಡಿಸಿ 473 ರನ್‍ಗಳಿಂದ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಇದ್ದಾರೆ. ಜೊತೆಗೆ ಮೊದಲ ಐಪಿಎಲ್‍ನಲ್ಲೇ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಇವರ ಜೊತೆಗೆ ಕರ್ನಾಟಕದ ಅನುಭವಿ ಆಟಗಾರ ಸನ್‍ರೈಸರ್ಸ್ ಹೈದರಾಬಾದ್ ತಂಡ ಮನೀಶ್ ಪಾಂಡೆಯವರು ಕೂಡ 15 ಪಂದ್ಯಗಳನ್ನಾಡಿ ಮೂರು ಅರ್ಧಶತಕದ ನೆರವಿನಿಂದ 404 ರನ್ ಸಿಡಿಸಿ ಟೂರ್ನಿಯಲ್ಲಿ ಮುಂದುವರೆಯುತ್ತಿದ್ದಾರೆ.
ಜೊತೆಗೆ ಈ ಟೂರ್ನಿಯಲ್ಲಿ ಇಬ್ಬರು ಕನ್ನಡಿಗಾರದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅವರು ಶತಕ ಸಿಡಿಸಿದ್ದಾರೆ. ಇಡೀ ಟೂರ್ನಿಯಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ ರಾಹುಲ್ 58 ಬೌಂಡರಿ ಸಿಡಿಸಿ ಅತೀ ಹೆಚ್ಚು ಫೋರ್ ಹೊಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ದೇವದತ್ ಪಡಿಕ್ಕಲ್ ಅವರು ಐದು ಅರ್ಧಶತಕ ಸಿಡಿಸಿ ಮೊದಲ ಐಪಿಎಲ್ ಆವೃತ್ತಿಯಲ್ಲೇ ಅತೀ ಹೆಚ್ಚು ಫಿಫ್ಟಿ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ.