ಅಬುಧಾಬಿ: ಮಂಗಳವಾರ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಬೌಲರ್ ಡ್ಯಾನಿಯಲ್ ಸ್ಯಾಮ್ಸ್ ಎಸೆದ ವಿಶೇಷ ನೋ ಬಾಲ್ ನೆಟ್ಟಿಗರ ಗಮನ ಸೆಳೆದಿದೆ.
ಡ್ಯಾನಿಯಲ್ ಸ್ಯಾಮ್ಸ್ ಮಂಗಳವಾರ ಐಪಿಎಲ್‍ಗೆ ಪಾದಾರ್ಪಣೆ ಮಾಡಿದರು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮೊದಲನೇ ಓವರ್ ಬೌಲ್ ಮಾಡಿದ ಅವರು ಆ ಓವರಿನ ಮೂರನೇ ಬಾಲಿನಲ್ಲಿ ಬೌಲಿಂಗ್ ಮಾಡುವ ಮುನ್ನ ಆ್ಯಕ್ಷನ್ ವೇಳೆ ಕೈ ತಾಗಿ ಸ್ಟಂಪ್ ಕೆಳಗೆ ಬೀಳಿಸಿದರು. ಇದನ್ನು ಗಮನಿಸಿದ ಅಂಪೈರ್ ಅದನ್ನು ನೋಬಾಲ್ ನೀಡಿದ್ದರು. ನಂತರ ಬಾಲ್ ಫ್ರೀಹಿಟ್ ಆಗಿತ್ತು. ಅದನ್ನು ಕೆಎಲ್ ರಾಹುಲ್ ಅವರು ಸಿಕ್ಸರ್ ಹೊಡೆದರು.
ಫ್ರೀಹಿಟ್ ಕೊಟ್ಟಿದ್ದು, ಯಾಕೆ?
2015ರ ಹಿಂದಿನ ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಕೇವಲ ಬೌಲರ್ ನೋಬಾಲ್ ಗೆರೆಯನ್ನು ದಾಟಿ ಮಾಡಿದ ನೋಬಾಲ್ ಎಸೆತಕ್ಕೆ ಮಾತ್ರ ಫ್ರೀಹಿಟ್ ನೀಡಿಲಾಗಿತ್ತು. ಆದರೆ 2015ರ ಜುಲೈ 5ರಂದು ಐಸಿಸಿಯೂ ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಫ್ರೀಹಿಟ್ ಕೊಡುವ ನಿಯಮವನ್ನು ಬದಲಿಸಿತು. ಈ ನಿಯಮದ ಪ್ರಕಾರ ಬೌಲರ್ ಯಾವುದೇ ರೀತಿಯ ನೋಬಾಲ್ ಮಾಡಿದರೂ ನಂತರದ ಬಾಲ್ ಫ್ರೀಹಿಟ್ ಆಗಿರುತ್ತೆ.
https://twitter.com/faceplatter49/status/1318590656219000834
ಹೀಗಾಗಿ ಬೌಲರ್ ಬೌಲ್ ಮಾಡುವ ಮುಂಚೆ ನಾನ್ ಸ್ಟೈಕ್‍ನಲ್ಲಿರುವ ವಿಕೆಟ್ ಸ್ಟಂಪ್ ಅನ್ನು ಬೀಳಿಸಿದರೆ, ನಿಯಮದ ಪ್ರಕಾರ ಅದು ಕೂಡ ನೋಬಾಲ್ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಹೊಸ ನಿಯಮದಂತೆ ಅಂಪೈರ್ ಡ್ಯಾನಿಯಲ್ ಸ್ಯಾಮ್ಸ್ ಮಾಡಿದ ಬಾಲನ್ನು ನೋಬಾಲ್ ಎಂದು ಸೂಚಿಸಿ, ನಂತರದ ಬಾಲನ್ನು ಫ್ರೀಹಿಟ್ ಎಂದು ಘೋಷಿಸಿದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗಿ ಅಂಪೈರ್ ನಿರ್ಧಾರದ ವಿರುದ್ಧ ಪರ, ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಶಿಖರ್ ಧವನ್ ಶತಕ ಸಿಡಿಸಿ ತಂಡ ಬೃಹತ್ ಮೊತ್ತ ಗಳಿಸಲು ಕಾರಣವಾದರು. ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಗಳಿಸಿದ ಧವನ್ ಪಂದ್ಯದಲ್ಲಿ 61 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ ಗಳೊಂದಿಗೆ 106 ರನ್ ಗಳಿಸಿ ಅಜೇಯರಾಗಿ ಉಳಿದರು. ಡೆಲ್ಲಿ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು.
165 ರನ್ ಗಳ ಮೊತ್ತವನ್ನು ಬೆನ್ನಟ್ಟಿದ್ದ ಕಿಂಗ್ಸ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೊರನ್ ಅರ್ಧ ಶತಕ ಗಳಿಸಿ ಮಿಂಚಿಸಿದರೆ, 13 ಎಸೆತಗಳಲ್ಲಿ 29 ಗಳಿಸಿದ ಗೇಲ್ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರು. ಇದರೊಂದಿಗೆ 19 ಓವರ್ ಗಳಲ್ಲೇ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದ ಪಂಜಾಬ್ ತಂಡ ಗೆಲುವು ಪಡೆಯಿತು. ಈ ಗೆಲುವಿನ ಮೂಲಕ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ.