ಯಾದಗಿರಿ: ಬಸವಸಾಗರ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಬಿಟ್ಟ ಪರಿಣಾಮ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಕೃಷ್ಣಾ ನದಿ ತೀರದಲ್ಲಿರುವ ಐತಿಹಾಸಿಕ ಪ್ರಸಿದ್ಧ, ಛಾಯಾಭಗವತಿ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ.
ನಿನ್ನೆ ರಾತ್ರಿಯಿಂದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2,96,080 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ದೇಗುಲದೊಳಗೆ ನೀರು ನುಗ್ಗಿ ಸಂಪೂರ್ಣ ಮುಳುಗಡೆಯಾಗಿದೆ. ಹೀಗಾಗಿ ದೇವಸ್ಥಾನ ಬಳಿ ಯಾರು ತೆರಳದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಹೀಗಿದ್ದರೂ ದೇವಸ್ಥಾನದ ಹೊರ ಭಾಗದ ಎತ್ತರದ ಮೆಟ್ಟಿಲುಗಳ ಮೇಲೆ ದೇವಿಗೆ ಪೂಜೆ ನಡೆಯುತ್ತಿದೆ. ಮೆಟ್ಟಲುಗಳ ಮೇಲೆ ದೇವಿಯ ಮೂರ್ತಿಗೆ ಅರ್ಚಕರು ಪೊಜೆ ಸಲ್ಲಿಸುತ್ತಿದ್ದಾರೆ. ಇದರಿಂದ ಅಪಾಯದ ನಡುವೆ ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದಾರೆ. ಕೃಷ್ಣಾ ನದಿಯ ನೀರು ಸಾಗರದಂತೆ ನೀರು ಹರಿಯುತ್ತಿದ್ದರೂ ನದಿ ತೀರಕ್ಕೆ ತೆರಳಿ ಸ್ನಾನ ಮಾಡಲು ಭಕ್ತರು ಮುಂದಾಗುತ್ತಿದ್ದಾರೆ.