ಜೈಪುರ: 2015ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಟೀನಾ ಡಾಬಿ ಹಾಗೂ ಅವರ ಪತಿ ಅಥರ್ ಖಾನ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಪ್ರೇಮಿಗಳಾಗಿದ್ದ ಇಬ್ಬರು 2018ರಲ್ಲಿ ಮದುವೆಯಾಗಿದ್ದರು. ಈಗ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ಜೈಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
Advertisement
Advertisement
Advertisement
ಕೆಲ ದಿನಗಳ ಹಿಂದೆ ಟೀನಾ ಡಾಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ʼಖಾನ್ʼ ಸರ್ ನೇಮ್ ತೆಗೆದು ಹಾಕಿದ್ದರು. ಅಥರ್ ಖಾನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಟಿನಾ ಅವರನ್ನು ಅನ್‌ಫಾಲೋ ಮಾಡಿದ್ದರು.
Advertisement
ಕಾಶ್ಮೀರ ಮೂಲದವರಾದ ಅಥರ್ ಖಾನ್ ಐಎಎಸ್ ಪರೀಕ್ಷೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಟೀನಾ ಮತ್ತು ಅಥರ್ ತರಬೇತಿ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಲಾರಂಭಿಸಿದ್ದರು ಎನ್ನಲಾಗಿದ್ದು, ಸದ್ಯ ಇಬ್ಬರೂ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಐಎಎಸ್ ಟಾಪರ್ಸ್ ಅಂತರ ಧರ್ಮೀಯ ವಿವಾಹವಾಗಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಖ್ಯಾತ ರಾಜಕೀಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದರು. ಹಿಂದೂ ಮಹಾಸಭಾ ಈ ಮದುವೆಯನ್ನು ಲವ್ ಜಿಹಾದ್‌ಗೆ ಹೋಲಿಸಿ ಟೀಕಿಸಿತ್ತು.
Congratulations Tina Dabi & Athar Amir-ul-Shafi, IAS toppers, batch of 2015, on your wedding!
May your love grow from strength to strength and may you be an inspiration to all Indians in this age of growing intolerance and communal hatred.
God bless you.https://t.co/PPCOHotMFW
— Rahul Gandhi (@RahulGandhi) April 10, 2018