ದಾವಣಗೆರೆ: ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ಇದೆ. ದಾವಣಗೆರೆಯ 3 ವರ್ಷದ ಬಾಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ ಮಾಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
Advertisement
ನಿನಾದ್ ಗುಪ್ತಾ ಏಷ್ಯಾ ಬುಕ್ ಆಪ್ ರೆಕಾರ್ಡ್ ಪಡೆದುಕೊಂಡಿದ್ದಾನೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯ ನಿವಾಸಿಯಾಗಿದ್ದಾನೆ. ನಿನಾದ್ ಗುಪ್ತಾ ಮೂರು ವರ್ಷ ಹತ್ತು ತಿಂಗಳವನಾಗಿದ್ದಾನೆ. ಈ ಚಿಕ್ಕ ವಯಸ್ಸಿನಲ್ಲೇ ಅತ್ಯಂತ ಹೆಚ್ಚಿನ ಬುದ್ದಿ ಶಕ್ತಿಯನ್ನು ಹೊಂದಿರುವುದರುವ ಬಾಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾನೆ. ಇದನ್ನೂ ಓದಿ: ನನಗೆ ಸ್ವಲ್ಪ ಸಮಯ ಕೊಡಿ, ಸತ್ಯ ಹೊರಗೆ ಬರಲಿದೆ: ದರ್ಶನ್
Advertisement
Advertisement
ದಂತ ವೈದ್ಯರಾದ ಡಾ.ಅಮರ್ ಹಾಗೂ ಡಾ.ಚಂದನ ಅವರ ಪುತ್ರ ನಿನಾದ್ ಗುಪ್ತಾಗೆ ಚಿಕ್ಕ ವಯಸ್ಸಿನಲ್ಲೇ ಅಗಾದವಾದ ಜ್ಞಾಪಕ ಶಕ್ತಿ ಇದ್ದು, ಏನನ್ನಾದರೂ ಒಮ್ಮೆ ಹೇಳಿಕೊಟ್ಟರೆ ಸಾಕು ಅದನ್ನು ನಿದ್ದೆಗಣ್ಣಿನಲ್ಲಿ ಕೂಡ ಪಟಪಟನೆ ಹೇಳುತ್ತಾನೆ. ಈ ಬಾಲಕನ ಅದ್ಭುತ ಸ್ಮರಣಾ ಶಕ್ತಿ ಹೊಂದಿದ್ದು, ಬಾಲಕ ಇಂಡಿಯಾ ಬುಕ್ ಅಫ್ ರೆಕಾಡ್ರ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾಡ್ಸ್ ಬ್ರೇಕ್ ಮಾಡಿದ್ದಾನೆ.
Advertisement
ಬೃಹಸ್ಪತಿ ಹಿಂದೂ ಸಂವತ್ಸರ ಚಕ್ರದ 60 ಸಂವತ್ಸರಗಳನ್ನು ಕೇವಲ 62 ಸೆಕೆಂಡ್‍ಗಳಲ್ಲಿ ಅರಳು ಹುರಿದಂತೆ ಹೇಳುತ್ತಾನೆ. ಇದನ್ನು ಬಾಲಕ ನಿನಾದ್ ತಂದೆ ವೈದ್ಯ ಅಮರ್ ವೀಡಿಯೋ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಕಳುಹಿಸಿದ್ದು, 2021ರ ಏಪ್ರಿಲ್ 2ರಂದು ಹರಿಯಾಣ ರಾಜ್ಯದ ಫರಿದಾಬಾದ್‍ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾಡ್ರ್ಸ್ ನಡೆಸಿದ ಆನ್‍ಲೈನ್ ಕಾರ್ಯಕ್ರಮದಲ್ಲಿ ಆತನ ಸಾಧನೆ ಕಂಡು ಪ್ರಶಸ್ತಿ ನೀಡಲಾಗಿದೆ. ಇದರಿಂದ ಪೋಷಕರು ಮಗನ ಬುದ್ಧಿಶಕ್ತಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ನಿನಾದ್ ಚಿಕ್ಕ ಮಗು ಇದ್ದಾಗಲೇ ಸಾಕಷ್ಟು ಆ್ಯಕ್ಟಿವ್ ಇದ್ದನಂತೆ. ಮನೆಯಲ್ಲಿ ನಿನಾದ್ ಅಜ್ಜಿ ಸಂವತ್ಸರಗಳನ್ನು, ಗಾಯತ್ರಿ ಮಂತ್ರ ಸೇರಿದಂತೆ ಹಲವು ಸ್ತೋತ್ರಗಳನ್ನು ಹೇಳಿಕೊಡುತ್ತಿದ್ದರಂತೆ. ಒಮ್ಮೆ ಹೇಳಿಕೊಟ್ಟಿದ್ದನ್ನು ನೆನಪಿನಲ್ಲಿ ಇಟ್ಟುಕೊಂಡು ನಿರರ್ಗಳವಾಗಿ ನಿನಾದ್ ಹೇಳುತ್ತಿದ್ದನಂತೆ. ಇದನ್ನು ನೋಡಿದ ಬಾಲಕನ ಪೋಷಕರು ಮಗನಿಗೆ ಮನೆಯಲ್ಲಿಯೇ ಅಭ್ಯಾಸ ಮಾಡಿಸತೊಡಗಿದರು. ಬಾಲಕ ನಿನಾದ್ ಗುಪ್ತಾ ಪ್ರಪಂಚದ 196 ರಾಜಧಾನಿ, ಒಂದರಿಂದ 25 ರವರೆಗೆ ಗಣಿತ ಮಗ್ಗಿಗಳನ್ನು ನಿರರ್ಗಳವಾಗಿ ಹೇಳುತ್ತಾನೆ. ಸೌರ ಮಂಡಲದ 30ಕ್ಕೂ ಹೆಚ್ಚು ಕಾಯಗಳ ಹೆಸರು ಹಾಗೂ ಈತನಿಗೆ ಸಂಖ್ಯೆಗಳು ಮತ್ತು ಗಣಿತವೆಂದರೆ ತುಂಬಾ ಇಷ್ಟ. ಈಗಲೇ ನಾಲ್ಕನೇ ತರಗತಿ ಪಠ್ಯದ ಸಾಮಾನ್ಯ ಗಣಿತದ ಲೆಕ್ಕಗಳನ್ನು ಬಿಡಿಸುತ್ತಾನೆ. ಟ್ರಿಲಿಯನ್ , ಬಿಲಿಯನ್‍ಗಳ ಸಂಖ್ಯೆಗಳನ್ನು ಗುರುತಿಸುತ್ತಾನೆ. 3000ವರೆಗಿನ ಸಂಖ್ಯೆಗಳನ್ನು ರೋಮನ್ ಸಂಖ್ಯೆಗಳಾಗಿ ಪರಿವರ್ತಿಸಿ ಹೇಳುತ್ತಾನೆ. ಮಗುವಿನ ಸಾಧನೆಯನ್ನು ವರ್ಲ್ಡ್ ಬುಕ್ ಆಫ್ ರೆಕಾರ್ಡ್‍ಗೆ ಕೂಡ ಕಳುಹಿಸಿದ್ದು, ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ, ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಪೋಷಕರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ಇಂತಹ ಮಕ್ಕಳನ್ನು ನೋಡಿ ಹೇಳಿರುತ್ತಾರೆ. ನಿಜಕ್ಕೂ ನಿನಾದ್ ನ ಅದ್ಭುತ ಜ್ಞಾಪಕ ಶಕ್ತಿ, ಆತನ ಬುದ್ದಿ ಶಕ್ತಿಯನ್ನು ನೋಡಿ ಎಂಥವರು ಕೂಡ ನಿಬ್ಬೇರಗಾಗುವಂತದ್ದಾಗಿದೆ.