– 2ನೇ ಸ್ಥಾನದಲ್ಲಿ ಲಿಲ್ಲಿ ಸಿಂಗ್
ಮುಂಬೈ: ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳ ಪಟ್ಟಿ ರಿಲೀಸ್ ಆಗಿದ್ದು, ಬಾಲಿವುಡ್ ನಟ ಸೋನು ಸೂದ್ ಮೊದಲ ಸ್ಥಾನ ಪಡೆದಿದ್ದಾರೆ.
ಹೌದು. ಬ್ರಿಟನ್ ನ ‘ಈಸ್ಟರ್ನ್ ಐ’ ನಿಯತಕಾಲಿಕೆ ಪ್ರಕಟಿಸಿರುವ ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಭಾರತದ ಇಬ್ಬರು ಸೆಲೆಬ್ರಿಟಿಗಳು ಸ್ಥಾನ ಪಡೆದಿದ್ದಾರೆ. ಸೋನು ಸೂದ್ ಮೊದಲ ಸ್ಥಾನದಲ್ಲಿದ್ದರೆ, ಭಾರತೀಯ ಮೂಲದ ಲಿಲ್ಲಿ ಸಿಂಗ್ ಎರಡನೇ ಸ್ಥಾನದಲ್ಲಿದ್ದಾರೆ.
Advertisement
Advertisement
ಸಿನಿಮಾ ಮಾತ್ರವಲ್ಲ, ಲಾಕ್‍ಡೌನ್ ಬಳೀಕದ ಮಾನವೀಯ ಕಾರ್ಯಕ್ರಗಳಿಂದ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಸೋನ್ ಸೂದ್ ಇದೀಗ ಏಷ್ಯಾದ ನಂಬರ್ 1 ಸೆಲೆಬ್ರಿಟಿ ಆಗಿದ್ದಾರೆ. ಈ ಕುರಿತು ಈಸ್ಟರ್ನ್ ಐ ನ ಸಂಪಾದಕ ಅಜರ್ ನಜೀರ್, ಏಷ್ಯಾದ ನಂಬರ್ 1 ಸೆಲೆಬ್ರಿಟಿ ಸ್ಥಾನಕ್ಕೆ ಸೋನು ಸೂದ್ ಅರ್ಹ ವ್ಯಕ್ತಿ. ಕೊರೊನಾ ಸಮಯದಲ್ಲಿ ಅವರು ಮಾಡಿದ್ದಷ್ಟು ಸಹಾಯ ಬೇರೆ ಯಾವ ಸೆಲೆಬ್ರಿಟಿ ಕೂಡ ಮಾಡಿಲ್ಲ ಎಂದು ಬಣ್ಣಿಸಿದ್ದಾರೆ.
Advertisement
Advertisement
ಸೂನ್ ಸೂದ್ ಅವರು ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಕಾರ್ಮಿಕರನ್ನು ಊರಿಗೆ ಕಳುಹಿಸುವುದು, ಬಡವರಿಗೆ ಹಣಕಾಸು, ವಿದ್ಯಾರ್ಥಿಗಳಿಗೆ ಸಹಾಯ, ಶಸ್ತ್ರಚಿಕಿತ್ಸೆಗಳಿಗೆ ಹಣಕಾಸು, ರೈತರಿಗೆ ಸಹಾಯ, ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಹೀಗೆ ಹಲವಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಬ್ರಿಟನ್‍ನ ‘ಜಿನ್ ಹೆರ್ಶೋಲ್ಟ್ ಹ್ಯುಮೆನಿಟೇರಿಯನ್’ ಪ್ರಶಸ್ತಿ ನೀಡಬೇಕು ಎಂದು ಹೇಳಿದ್ದಾರೆ.
ಇನ್ನು ಎರಡನೇ ಸ್ಥಾನದಲ್ಲಿರುವ ಯೂಟ್ಯೂಬರ್ ಲಿಲ್ಲಿ ಸಿಂಗ್ ಭಾರೀ ಜನಪ್ರಿಯರಾಗಿದ್ದು, ಭಾರತ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳಲ್ಲಿ ತಮ್ಮದೇ ಆದ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.
#SonuSood ranked as no. 1 Asian celebrity on the planet by UK based Eastern Eye newspaper for his inspiring philanthropic work throughout the Covid-19 pandemic!#HatsOff @sonu_sood via #TheLastReview pic.twitter.com/LDcHkyKo7a
— Rajasekar (@sekartweets) December 9, 2020