ಬೆಂಗಳೂರು : ಐತಿಹಾಸಿಕ ಏರ್ ಶೋಗೆ ಕ್ಷಣಗಣನೆ ಆರಂಭವಾಗಿದೆ. 13ನೇ ಆವೃತ್ತಿಯ ಏರೋ ಇಂಡಿಯಾ ಅಂತರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ ಕೌಂಟ್‍ಡೌನ್ ಶುರುವಾಗಿದ್ದು, ಫೆ.3 ರಿಂದ 5ರವರೆಗೆ ಯಲಹಂಕದ ಭಾರತೀಯ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿದೆ.
ದೇಶ-ವಿದೇಶಗಳ ಲೋಹದ ಹಕ್ಕಿ ಹಾರಾಟಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು, ಕೋವಿಡ್ ಸೋಂಕಿತ ಭೀತಿಯ ಮಧ್ಯೆಯೂ ಪ್ರದರ್ಶಕರ ಉತ್ಸಾಹ ತೋರಿದ್ದಾರೆ.
Advertisement
Advertisement
14 ದೇಶದ 78 ಪ್ರದರ್ಶಕರು, ಭಾರತೀಯ ಮೂಲದ 523 ಪ್ರದರ್ಶಕರು ಈ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾಗಿಯಾಗಲಿವೆ. ಒಟ್ಟು 601 ಪ್ರದರ್ಶಕರ ನೊಂದಣಿಯಾಗಿದ್ದು, ಈ ಪೈಕಿ 220 ಕಂಪನಿಗಳಿಂದ ವರ್ಚುವಲ್ ಪ್ರದರ್ಶನ ನಡೆಯಲಿದೆ.
Advertisement
Advertisement
2019ರ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾರತೀಯ ಮೂಲದ 238 ಪ್ರದರ್ಶಕರು, 165 ವಿದೇಶಿ ಪ್ರದರ್ಶಕರು ಸೇರಿ ಒಟ್ಟು 403 ಪ್ರದರ್ಶಕರು ಭಾಗಿಯಾಗಿದ್ದರು. 22 ದೇಶಗಳು ಏರೋ ಇಂಡಿಯಾದಲ್ಲಿ ಭಾಗಿಯಾಗಿದ್ದವು. ಆದರೆ ಈ ವರ್ಷ ಕೋವಿಡ್ ಹಿನ್ನಲೆ ಈ ವರ್ಷ 14 ರಾಷ್ಟ್ರಗಳು ಏರೋ ಇಂಡಿಯಾದಲ್ಲಿ ಭಾಗಿಯಾಗಲಿವೆ.