– ಮೂರು ದಿನಗಳಲ್ಲಿ ಮೂರು ಹತ್ಯೆ
ನವದೆಹಲಿ: ಒಂದೇ ವಾರದಲ್ಲಿ ಸತತವಾಗಿ ಮೂರು ಜನರನ್ನು ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಆರೋಪಿಯನ್ನು ಮೊಹಮ್ಮದ್ ರಾಜಿ(22) ಎಂದು ಗುರುತಿಸಲಾಗಿದೆ. ಈತ ಮೂಲತಃ ಬಿಹಾರ ನಿವಾಸಿಯಾಗಿದ್ದಾನೆ. ಗುರುಗ್ರಾಮದ ಐಎಫ್‍ಸಿ ಏಫ್ ಸಿಒ ಚೌಕ್ ಸಮೀಪ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಈ ಸರಣಿ ಹಂತಕ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾಗ ಸರಿಸುಮಾರು 3,000 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದ್ದಾರೆ. ಅಗ ಆರೋಪಿಯ ಕುರಿತಾದ ಸುಳಿವು ಸಿಕ್ಕಿ ಮೊಹಮ್ಮದ್ ರಾಜಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
Advertisement
ಕೊಲೆಗಾರ ಹೇಳಿದ್ದೇನು?
ನವೆಂಬರ್ 23, 24 ಮತ್ತು 25 ರಂದು ಮೂರು ಜನರನ್ನು ಕೊಂದಿದ್ದೇನೆ. ಮೂವರನ್ನು ಕೊಂದು ಆನಂದಿಸುತ್ತಿದ್ದೆನು. ಅಪರಿಚಿತರನ್ನು ಕೊಂದಿದ್ದೇನೆ. ನಾನು ಚಿಕ್ಕವನಿದ್ದಾಗ ನನಗೆ ಏನು ತೀಳಿಯುವುದಿಲ್ಲವಾಗಿತ್ತು. ಆಗ ನನಗೆ ಜನರು ನೀನು ತುಂಬಾ ದುರ್ಬಲ, ನಿನ್ನಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ನನ್ನನ್ನು ಹಂಗಿಸುತ್ತಿದ್ದರು. ಹೀಗಾಗಿ ನಾನು ಏನು ಬೇಕಾದರೂ ಮಾಡಬಲ್ಲೆ ಎಂಬುದನ್ನು ಜಗತ್ತಿಗೆ ತಿಳಿಸಲು ಈ ಕೃತ್ಯ ಎಸಗಿದ್ದೇನೆ ಎಂಬುದನ್ನು ಆರೋಪಿ ಮೊಹಮ್ಮದ್ ತನಿಖೆಯಲ್ಲಿ ಪೊಲೀಸರ ಬಳಿ ಹೇಳಿದ್ದಾನೆ.
Advertisement
3 ಕೊಲೆಗಳು ಯಾವವು?
ನವೆಂಬರ್ 23 ರಂದು ಗುರುಗ್ರಾಮದ ಲೀಜರ್ ವ್ಯಾಲಿ ಪಾರ್ಕ್‍ನಲ್ಲಿ ವ್ಯಕ್ತಿಯೊಬ್ಬನನ್ನು ಇರಿದು ಕೊಂದಿದ್ದಾನೆ. 24 ರಂದು ಗುರುಗ್ರಾಮ್‍ನ ಸೆಕ್ಟರ್ 40ರಲ್ಲಿ ಸೆಕ್ಯುರಿಟಿ ಗಾರ್ಡ್ ನನ್ನು ಕೊಲೆ ಮಾಡಿದ್ದಾನೆ. ಹಾಗೆಯೇ ಮಾರನೇ ದಿನ 25 ರಂದು ವ್ಯಕ್ತಿಯೊಬ್ಬನ ತಲೆ ಕಡಿದು ಹತ್ಯೆಗೈದಿದ್ದಾನೆ. ಹತ್ಯೆಯಾದ ಮೂರನೇ ವ್ಯಕ್ತಿಯ ಶವ ಚರಂಡಿಯಲ್ಲಿ ಪತ್ತೆಯಾಗಿತ್ತು.
ಮೊಹಮ್ಮದ್ ಈ ಮೂರು ಕೊಲೆ ಮಾತ್ರವಲ್ಲದೇ ದೆಹಲಿ, ಗುರುಗ್ರಾಮ್, ಬಿಹಾರ್‍ಗಳಲ್ಲಿ ಕನಿಷ್ಟ 10 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.