ಬೆಂಗಳೂರು: ಇಂದು ವಿಧಾನಸೌಧದಲ್ಲಿ ನಡೆದ ಪ್ರಶಸ್ತಿ ಸಮಾರಂಭದ ವೇಳೆ ಸಿಎಂ ಯಡಿಯೂರಪ್ಪ ಹಾಸ್ಯ ಎಲ್ಲರ ಗಮನ ಸೆಳೆಯಿತು.
ಪ್ರಶಸ್ತಿ ವಿತರಣೆ ವೇಳೆ ಯುವತಿಯ ಗೋಲ್ಡ್ ಕೋಟೆಡ್ ಬಳೆ ಗಮನಿಸಿದ ಸಿಎಂ, ಕೈ ಹಿಡಿದು ಏನಮ್ಮಾ ಈ ಬಳೆ ಚಿನ್ನದ್ದಾ ಅಂತ ಪ್ರಶ್ನಿಸಿದರು. ಯುವತಿ ಚಿನ್ನದ್ದು ಅಲ್ಲ ಅಂದಾಗ ಸಿಎಂ ನಕ್ಕು, ಗೋಲ್ಡ್ ಹಾಕಿಕೊಂಡು ಬರಬೇಕಿತ್ತಾ ಅಲ್ವಾ ಎಂದರು.
Advertisement
Advertisement
ನನ್ನ ಕೈಯಲ್ಲಿ ದೊಡ್ಡ ಬಳೆ ನೋಡಿ ಚಿನ್ನದ್ದಾ ಅಂತ ಕೇಳಿದರು. ಅಲ್ಲ ಅಂದಾಗ ಚಿನ್ನದು ಹಾಕಿಕೊಂಡು ಬರಬೇಕಲ್ವಾ ಎಂದು ಹಾಸ್ಯ ಮಾಡಿದರು. ಎಲ್ಲರಿಗೂ ಸಿಎಂ ಜೊತೆ ಮಾತನಾಡಲು ಅವಕಾಶ ಸಿಗಲ್ಲ. ಇಂದು ಆ ಅವಕಾಶ ಸಿಕ್ಕಿದ್ದಕ್ಕೆ ಪ್ರೌಡ್ ಫೀಲ್ ಆಗುತ್ತಿದೆ. ಅಷ್ಟು ಜನರಲ್ಲಿ ಸಿಎಂ ನನ್ನನ್ನು ಗುರುತಿಸಿ, ಯಾವ ಆಟ ಪ್ರತಿನಿಧಿಸುತ್ತೀಯಾ ಎಂದು ಕೇಳಿದರು. ಸ್ವಿಮಿಂಗ್ ಅಂತಾ ಹೇಳಿದಾಗ ದೇಶಕ್ಕೆ ದೊಡ್ಡ ಹೆಸರು ತರಬೇಕೆಂದು ಹೇಳಿ ಆಶೀರ್ವದಿಸಿದರು ಎಂದು ಕ್ರೀಡಾಪಟು ಖುಷಿ ದಿನೇಶ್ ಹೇಳಿದರು.
Advertisement
Advertisement
ಕ್ರೀಡಾ ಇಲಾಖೆಯಿಂದ 2017, 2018, 2019ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ ಕರ್ನಾಟಕ ಕ್ರೀಡಾರತ್ನ ಮತ್ತು ಕ್ರೀಡಾ ಪೋಷಕ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಇಂದು ಎಲ್ಲ ಸಾಧಕರಿಗೂ ಸಿಎಂ ಯಡಿಯೂರಪ್ಪ, ಸಚಿವ ಆರ್.ಅಶೋಕ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸನ್ಮಾನಿಸಿದರು.