– ಕೋಣೆಯೊಳಗೆ ತಾಯಿ- ಮಗಳು ಸಜೀವ ದಹನ
ಹೈದರಾಬಾದ್: 3 ವರ್ಷದ ಮಗಳಿಗೆ ಬೆಂಕಿ ಇಟ್ಟು ತಾನೂ ಬೆಂಕಿ ಹಚ್ಚಿಕೊಂಡು ಅಮ್ಮ, ಮಗಳು ಜೀವಂತ ದಹನವಾಗಿರುವ ಘಟನೆ ಹೈದರಾಬಾದ್‍ನ ಮೆದಕ್ ಜಿಲ್ಲೆಯಲ್ಲಿ ನಡೆದಿದೆ.
ರೇವತಿ(28) ಹಾಗೂ ಆದ್ಯಾಶ್ರೀ(3) ಮೃತರು. ರೇವತಿ ಐದು ವರ್ಷಗಳ ಹಿಂದೆ ಗಟ್ಟಯ್ಯ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಳು. ಇದೀಗ ತಾಯಿ-ಮಗಳು ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟಿದ್ದಾರೆ.
ಪತಿ ಕೆಲಸಕ್ಕೆ ಹೋಗುತ್ತಿದ್ದಂತೆ ಮನೆಯ ಬಾಗಿಲನ್ನು ರೇವತಿ ಮುಚ್ಚಿಕೊಂಡಿದ್ದಾಳೆ. ನಂತರ ಮಗಳ ದೇಹಕ್ಕೆ ಬೆಂಕಿ ಇಟ್ಟಿದ್ದಾಳೆ. ಅದಾದ ನಂತರ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿ-ಮಗಳ ಚೀರಾಟವನ್ನು ನೋಡಿ ನೆರೆಹೊರೆಯವರು ರಕ್ಷಣೆಗೆ ಬಂದಿದ್ದಾರೆ. ಆದರೆ ಬಾಗಿಲು ಲಾಕ್ ಆಗಿರುವುದರಿಂದ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ತಾಯಿ ಮಗಳ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಸಿಕೊಂಡಿದ್ದೇವೆ. ತನಿಖೆ ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.