ಬಳ್ಳಾರಿ: ಕನ್ನಡ ರಾಜ್ಯೋತ್ಸವದ ನಿಮಿತ್ತ ಗಣಿನಗರಿ ಬಳ್ಳಾರಿಯ ಏಕಶಿಲಾ ಬೆಟ್ಟದಲ್ಲಿ 65 ಅಡಿ ಉದ್ದದ ಕನ್ನಡ ಬಾವುಟವನ್ನ ಭಾನೆತ್ತರಕ್ಕೆ ಹಾರಿಸಲಾಯಿತು.
ಬಳ್ಳಾರಿಯ ಕೋಟೆ ಮುಖ್ಯದ್ವಾರದ ಬಾಗಿಲ ಎದುರೆ ನವಕರ್ನಾಟಕ ಯುವಶಕ್ತಿ ಸಂಘಟನೆಯ ಮುಖಂಡರಾದ ಸಿದ್ಮಲ್ ಮಂಜುನಾಥ, ಕಪ್ಪಗಲ್ಲು ಚಂದ್ರಶೇಖರ ಆಚಾರ್ ನೇತೃತ್ವದಲ್ಲಿ ಇಂದು ಬೆಳ್ಳಂಬೆಳಗ್ಗೆ ಕನ್ನಡತಾಯಿ ಭುವನೇಶ್ವರಿ ಮಾತೆಗೆ ವಿಶೇಷಪೂಜೆ ಸಲ್ಲಿಸಿದ್ರು. ಬಳೀಕ ಕೋಟೆಯ ಪ್ರವೇಶ ದ್ವಾರದ ಬಳಿಯೇ 65 ಅಡಿ ಉದ್ದದ ಕನ್ನಡ ಧ್ವಜವನ್ನ ಪ್ರದರ್ಶಿಸಿದ್ರು. ಆ ಧ್ವಜವನ್ನು ಹಿಡಿದೇ ಕೋಟೆಯ ಮೇಲಕ್ಕೆ ಸಾಗಿದ್ರು.
ನವಕರ್ನಾಟಕ ಯುವಶಕ್ತಿ ಸಂಘಟನೆಯ ಮುಖಂಡ ಕಪ್ಪಗಲ್ಲು ಚಂದ್ರಶೇಖರ ಆಚಾರ್ ಅವರು ಮಾತನಾಡಿ, 50ನೇ ವರ್ಷದ ಸಂದರ್ಭದಲ್ಲಿ 50 ಅಡಿ ಉದ್ದದ ಧ್ವಜಾರೋಹಣ ಮಾಡಲಾಗಿತ್ತು. ಅಂದಿನಿಂದ ಈವರೆಗೂ ಧ್ವಜಾರೋಹಣ ಮುಂದುವರಿ ಸುತ್ತಾ ಬರಲಾಗಿದೆ. ಈ ಬಾರಿ ಕೂಡ 65 ಅಡಿ ಉದ್ದದ ಕನ್ನಡ ಭಾವುಟವನ್ನು ಹಾರಿಸಲಾಗಿದೆ ಎಂದು ತಿಳಿಸಿದ್ದಾರೆ.