ಚಿಕ್ಕಮಗಳೂರು: ತುಂಬು ಗರ್ಭಿಣಿಯಾಗಿದ್ದ ಮಹಿಳಾ ಠಾಣೆಯ ಎಸ್‍ಐ ಹಾಗೂ ಮತ್ತಿಬ್ಬರು ಪೇದೆಗಳಿಗೆ ಠಾಣೆಯಲ್ಲಿ ಸೀಮಂತ ಮಾಡುವ ಮೂಲಕ ಪೊಲೀಸರು ಸಂಭ್ರಮಪಟ್ಟಿದ್ದಾರೆ.
Advertisement
ಜಿಲ್ಲಾ ಕೇಂದ್ರದ ತಾಲೂಕು ಕಚೇರಿ ಆವರಣದಲ್ಲಿರೋ ಮಹಿಳಾ ಠಾಣೆಯ ಎಸ್‍ಐ ನೇತ್ರಾವತಿ ಹಾಗೂ ಮಹಿಳಾ ಪೇದೆಗಳಾದ ರಾಜೇಶ್ವರಿ ಹಾಗೂ ವೇದಾ ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದರು. ಅದರಲ್ಲೂ ಎಸ್‍ಐ ನೇತ್ರಾವತಿ ಗರ್ಭಿಣಿಯಾಗಿದ್ದರೂ ದಿನದ ಬಹುತೇಕ ಸಮಯವನ್ನು ಠಾಣೆಯಲ್ಲೇ ಕಳೆಯುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಸಹದ್ಯೋಗಿಗಳು ಮೂವರಿಗೂ ಹೆರಿಗೆಗೆ ಹೋಗುವ ಮುನ್ನ ಠಾಣೆಯಲ್ಲೇ ಸೀಮಂತ ಮಾಡಬೇಕೆಂದು ಅಂದುಕೊಂಡಿದ್ದರು. ಅದರಂತೆ ಇಂದು ಠಾಣೆಯಲ್ಲಿ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.
Advertisement
Advertisement
ಸಿಬ್ಬಂದಿ ಠಾಣೆಯನ್ನು ತಳಿರು-ತೋರಣಗಳಿಂದ ಅಲಂಕರಿಸಿದ್ದರು. ಠಾಣೆಗೆ ಬಣ್ಣ-ಬಣ್ಣದ ಪೇಪರ್ ಹಾಗೂ ಬಟ್ಟೆಗಳನ್ನು ಕಟ್ಟಿ ನೋಡುಗರಿಗೆ ಇದು ಪೊಲೀಸ್ ಠಾಣೆಯಾ ಎಂದು ಅನುಮಾನ ಮೂಡುವಂತೆ ಬದಲಿಸಿದ್ದರು. ಠಾಣೆಯ ಪ್ರತಿ ಸಿಬ್ಬಂದಿಯೂ ಕೂಡ ತಮ್ಮ ಮನೆಯ ಕಾರ್ಯಕ್ರಮದಂತೆ ಖಾಕಿ ಬಟ್ಟೆ ಬಿಟ್ಟು ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಸಿಬ್ಬಂದಿ ಸುಮಧುರ ಕ್ಷಣದಲ್ಲಿ ಪಾಲ್ಗೊಂಡಿದ್ದರು.
Advertisement
ಹಿಂದೂ ಸಂಪ್ರದಾಯದಂತೆ ತುಂಬು ಗರ್ಭಿಣಿಯರಿಗೆ ಸೀಮಂತ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ನಮ್ಮ ಸಿಬ್ಬಂದಿ ಇಡೀ ದಿನ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದರು. ಹಾಗಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದೇವೆ ಎಂದು ಸಿಬ್ಬಂದಿ ಸಂತಸ ಹಂಚಿಕೊಂಡರು.
ಠಾಣೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದೇ ವೇಳೆ, ಗರ್ಭೀಣಿಯರಿಗೆ ಅಕ್ಷತೆ ಹಾಕಿ ಫಲ- ತಾಂಬೂಲ ನೀಡಿ ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದು ವಿಶೇಷವಾಗಿತ್ತು.