ಹಾಸನ: ಚನ್ನರಾಯಪಟ್ಟಣದ ಸಬ್ ಇನ್ಸ್‌ಪೆಕ್ಟರ್ ಕಿರಣ್ ಕುಮಾರ್ ಆತ್ಮಹತ್ಯೆಯನ್ನು ಉನ್ನತ ಮಟ್ಟದ ಸಂಸ್ಥೆಯಿಂದ ತನಿಖೆ ನಡೆಸಿ ಸತ್ಯಾಂಶ ಹೊರಬೇಕು. ಹಾಗೂ ಬಿಜೆಪಿ ಹಿಂಬಾಲಕರನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿಯವರು ಆಕ್ರೋಶ ಹೊರಹಾಕಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಚನ್ನರಾಯಪಟ್ಟಣದ ನಗರ ಪೊಲೀಸ್ ಠಾಣೆಯ ಓರ್ವ ಸಬ್ ಇನ್ಸ್ ಪೆಕ್ಟರ್ ಆತ್ಮಹತ್ಯೆ ಘಟನೆ, ಇಡೀ ಜಿಲ್ಲೆಯಲ್ಲಿ ಅಧಿಕಾರಿಗಳು ಎಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ರಾಜಕೀಯ ಒತ್ತಡ, ವೈಯಕ್ತಿಕ ಒತ್ತಡ ಇಲ್ಲವೆ ಮೇಲಾಧಿಕಾರಿಗಳ ಒತ್ತಡಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ. ಒಟ್ಟಾರೆ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜ ಎಂದು ಹೇಳಿದರು.
Advertisement
Advertisement
ಇದು ಜಿಲ್ಲೆಯ ಕೆಳ ಮಟ್ಟದಿಂದ ಮೇಲ್ಮಟ್ಟದ ಅಧಿಕಾರಿಗಳವರೆಗೂ ಈ ರೀತಿಯ ಒತ್ತಡಗಳು ನಡೆಯುತ್ತಿದೆ. ಈ ಸಬ್ ಇನ್ಸ್‌ಪೆಕ್ಟರ್ ಘಟನೆಯನ್ನು ಸರ್ಕಾರವು ಹಗುರವಾಗಿ ಪರಿಗಣಿಸದೇ ಈ ಘಟನೆಯನ್ನು ಉನ್ನತ ಮಟ್ಟದ ಸಂಸ್ಥೆಯಿಂದ ನಿಷ್ಪಕ್ಷಪಾತವಾಗಿ ತನಿಖೆ ಮಾಡಿಸಿ ಸತ್ಯಾಂಶ ಹೊರಬರಬೇಕು. ಇದನ್ನು ಗೃಹ ಇಲಾಖೆಯು ಕಠಿಣವಾಗಿ ಮತ್ತು ತೀವ್ರವಾಗಿ ಪರಿಗಣಿಸಿ ತನಿಖೆ ಮಾಡುವಂತೆ ಒತ್ತಾಯಿಸಿದರು. ಇಲ್ಲಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹೊಸದಾಗಿ ನೇಮಕವಾದ ನಂತರ ಈ ಘಟನೆ ನಡೆದಿದೆ ಎಂದರು. ಇದನ್ನು ಓದಿ: ಚನ್ನರಾಯಪಟ್ಟಣ ಪಿಎಸ್‍ಐ ಆತ್ಮಹತ್ಯೆ- ಉನ್ನತ ಮಟ್ಟದ ತನಿಖೆಗೆ ಎಚ್‍ಡಿಕೆ ಆಗ್ರಹ
Advertisement
ಜೆ.ಸಿ. ಮಾಧುಸ್ವಾಮಿಯವರು ಇಲ್ಲಿ ಜಿಲ್ಲಾ ಮಂತ್ರಿಯಾಗಿ 10 ತಿಂಗಳು ಇದ್ದರು. ಜನಪ್ರತಿನಿಧಿಗಳಿಗೆ ಮತ್ತು ಎಲ್ಲರಿಗೂ ಸ್ಪಂದಿಸುತ್ತಿದ್ದರು. ಇತ್ತೀಚೆಗೆ ಕಳೆದ ಎರಡು ತಿಂಗಳಿನಿಂದ ಹಾಸನ ಜಿಲ್ಲೆಯಲ್ಲಿ ಏನಾಗಿದೆ? ಬಿಜೆಪಿ ಪಕ್ಷದ ಹಿಂಬಾಲಕರು ಸಕಲೇಶಪುರ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿದ ಬಿಜೆಪಿ ಅಭ್ಯರ್ಥಿ ಮತ್ತು ಅವರ ಸಹಚರರು ಕ್ಷೇತ್ರಕ್ಕೆ ಬಂದು ಕೆಳ ಮಟ್ಟದ ಅಧಿಕಾರಿಗಳಿಂದ ಹಿಡಿದು ಮೇಲಿನ ಮಟ್ಟದ ಅಧಿಕಾರಿಗಳವರೆಗೂ ಎಲ್ಲಾ ರೀತಿಯ ಒತ್ತಡವನ್ನು ಹಾಕಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಗುತ್ತಿಗೆ ಕೊಡಬೇಕು. ನಾವು ಹೇಳಿದ ಕೆಲಸವನ್ನೇ ಮಾಡಬೇಕು. ನಮಗೆ ಹೇಳದೇ ಕೆಲಸ ನಿರ್ವಹಿಸುವಂತಿಲ್ಲ ಎಂದೆಲ್ಲ ಕಿರುಕುಳ ನೀಡಿದ್ದಾರೆ ಎಂದು ದೂರಿದರು.
Advertisement
ಈ ಎಲ್ಲ ಬಗ್ಗೆ ಅಧಿಕಾರಿಗಳು ನಮ್ಮ ಬಳಿ ಬಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದಾರೆ. ಹೀಗೆ ಮುಂದುವರಿದರೆ ಜಿಲ್ಲೆಯಲ್ಲಿ ಆಡಳಿತ ನಡೆಯುವುದು ಹೇಗೆ? ಕಾನೂನು ವ್ಯವಸ್ಥೆ ಏನಾಗುವುದು ಎಂದು ಕಿಡಿಕಾರಿದರು.