ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣದಲ್ಲಿ ಕಾಣಿಸಿಕೊಂಡ ಎನ್ನಲಾದ ಯುವತಿಯ ಪೋಷಕರನ್ನ ಎಸ್‍ಐಟಿ ಪತ್ತೆ ಮಾಡಿದೆ. ಸೋಮವಾರ ಯುವತಿ ಪೋಷಕರನ್ನ ಪತ್ತೆ ಎಸ್‍ಐಟಿ ಅವರ ಹೇಳಿಕೆಯನ್ನ ದಾಖಲಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬೆಳಗಾವಿಯಲ್ಲಿ ದೂರು ದಾಖಲಿಸಿದ ಬಳಿಕ ವೀಡಿಯೋ ಹೇಳಿಕೆ ಬಿಡುಗಡೆಗೊಳಿಸಿ ಅಜ್ಞಾತ ಸ್ಥಳದಲ್ಲಿದ್ದರು.
ಪೋಷಕರು ಹೇಳಿದ್ದೇನು?: ನಮ್ಮ ಮಗಳು ಅಪಾಯದಲ್ಲಿದ್ದು, ಬಲವಂತವಾಗಿ ವೀಡಿಯೋ ಮಾಡಿಸಲಾಗಿದೆ. ಸದ್ಯ ಆಕೆ ಎಲ್ಲಿದ್ದಾಳೆ ಅನ್ನೋದು ನಮಗೂ ಗೊತ್ತಿಲ್ಲ. ಮಾರ್ಚ್ 5ರಿಂದ ಮಗಳು ನಮ್ಮ ಮಗಳು ಸಂಪರ್ಕದಲ್ಲಿಲ್ಲ. ಅಪಾಯದಲ್ಲಿರುವ ಮಗಳನ್ನ ಪತ್ತೆ ಮಾಡಿ ಎಂದು ಪೋಷಕರು ಹೇಳಿದ್ದಾರೆ ಎನ್ನಲಾಗಿದೆ.
ವಿಚಾರಣೆಗೆ ಹಾಜರಾಗದ ಹಿನ್ನೆಲೆ ಯುವತಿಗೆ ಎಸ್‍ಐಟಿ ಐದನೇ ಬಾರಿ ನೋಟಿಸ್ ನೀಡಿದೆ. ಯುವತಿಯ ವಾಟ್ಸಪ್, ಇಮೇಲ್ ಮೂಲಕ ಸಹ ನೋಟಿಸ್ ನೀಡಲಾಗಿದೆ. ಆದ್ರೆ ಯುವತಿ ಯಾವುದೇ ನೋಟಿಸ್ ಗೆ ಪ್ರತಿಕ್ರಿಯಿಸಿಲ್ಲ ಎಂದು ತಿಳಿದು ಬಂದಿದೆ. ಸಿಡಿ ಪ್ರಕರಣದಲ್ಲಿ ಕೇಳಿ ಬಂದ ಇನ್ನುಳಿದವರು ಸಹ ಎಸ್‍ಐಟಿ ವಿಚಾರಣೆಗೆ ಹಾಜರಾಗಿಲ್ಲ. ಸಿಡಿ ಗ್ಯಾಂಗ್ ಸದಸ್ಯರು ಒಂದೊಂದು ದಿನ ಒಂದು ಸ್ಥಳದಲ್ಲಿ ವಾಸ್ತವ್ಯ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.