ಎಸ್‍ಐಟಿ ಮುಂದೆ ಯುವತಿ ಹೇಳಿದ್ದೇನು..?

Public TV
2 Min Read
CD LADY

ಬೆಂಗಳೂರು:  ವಿಶೇಷ ತನಿಖಾ ದಳ (ಎಸ್‍ಐಟಿ) ವಿಚಾರಣೆಯ ವೇಳೆ ಸಂತ್ರಸ್ತ ಯುವತಿ ಕೆಲವೊಂದು ರಹಸ್ಯ ವಿಚಾರಗಳನ್ನು ಬಿಚ್ಚಿಟ್ಟಿದ್ದಾಳೆ ಅಂತ ಹೇಳಲಾಗಿದೆ.

ರಮೇಶ್ ಜಾರಕಿಹೊಳಿ ಒಡನಾಟಕ್ಕೆ ಯುವತಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾಳೆ. ಯಾಕಾದ್ರೂ ಇವರ ಸಹವಾಸ ಮಾಡಿದ್ನೋ…? ಕುಟುಂಬ ನಿರ್ವಹಣೆಗಾಗಿ ಕೆಲಸದ ಅವಶ್ಯಕತೆ ಇತ್ತು. ಕೆಲಸಕ್ಕೆ ಸೇರಿಕೊಳ್ಳೋ ಆಸೆಯಿಂದಾಗಿ ಇವರ ಸಹವಾಸ ಮಾಡಿದೆ. ಈಗ ನಾನು ಮೋಸ ಹೋದೆ, ಏಕಾಂಗಿಯಾದೆ ಅನ್ನೋ ನೋವು ಕಾಡ್ತಿದೆ. ನಾನು ಏಕಾಂಗಿ ಆಗಿ ನೋವನ್ನು ಅನುಭವಿಸ್ತಾ ಇದ್ದೇನೆ ಅಂತ ಎಸ್‍ಐಟಿ ಮುಂದೆ ಯುವತಿ ಪಶ್ಚಾತಾಪದ ಮಾತನ್ನಾಡಿದ್ದಾರೆ. ಅಲ್ಲದೆ ಅಪ್ಪ-ಅಮ್ಮನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಅವರ ಜೊತೆ ಮಾತನಾಡಬೇಕು ಅಂತ ಸಂತ್ರಸ್ತ ಯುವತಿ ಕಣ್ಣೀರಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

CD LADY 12121

ಪಬ್ಲಿಕ್ ಟಿವಿ ಮೂಲಗಳಿಗೆ ಸಿಕ್ಕಿರೋ ಮಾಹಿತಿ ಪ್ರಕಾರ ಸೆಕ್ಷನ್ 161 ಅಡಿ ಎಸ್‍ಟಿಐ ಮುಂದೆ ಯುವತಿ ಕೊಟ್ಟಿರೋ ಹೇಳಿಕೆ ಹೀಗಿದೆ.
ಎಸ್‍ಐಟಿ: ರಮೇಶ್ ಜಾರಕಿಹೊಳಿ ಅವರು ನಿಮಗೆ ಹೇಗೆ ಪರಿಚಯ..?
ಯುವತಿ: ಅಣೆಕಟ್ಟು ಚಿತ್ರೀಕರಣ ವಿಷಯದಲ್ಲಿ ಕಳೆದ ಜುಲೈನಲ್ಲಿ ಪರಿಚಯ
ಎಸ್‍ಐಟಿ: ಅವರೇ ನಂಬರ್ ಕೊಟ್ರಾ..?
ಯುವತಿ: ಅವರೇ ನಂಬರ್ ಕೊಟ್ಟು ಯಾರಿಗೂ ಹೇಳ್ಬೇಡ ಅಂದ್ರು. ಮಲ್ಲೇಶ್ವರಂ ಪಿಜಿ ಅಂತ ನಂಬರ್ ಸೇವ್ ಮಾಡಿಸಿದ್ರು
ಎಸ್‍ಐಟಿ: ಬೆಡ್ ರೂಂವರೆಗೆ ಹೋಗಿದ್ದೇಕೆ..?
ಯುವತಿ: ‘ಸಹಕಾರ ನೀಡ್ಬೇಕು’ ಅಂತ ಪೀಡಿಸ್ತಿದ್ರು. 2-3 ಸಲ ದೈಹಿಕ ದೌರ್ಜನ್ಯ ಎಸಗಿದ್ರು
ಎಸ್‍ಐಟಿ: ವಿಡಿಯೋ ಶೂಟ್ ಮಾಡಿದ್ಯಾರು..? ಲೀಕ್ ಮಾಡಿದ್ಯಾರು..?

CD LADY 11
ಯುವತಿ: ಜಾರಕಿಹೊಳಿ ಹಾಗೂ ನನ್ನ ಮೊಬೈಲ್‍ನಲ್ಲಿ ವಿಡಿಯೋ ರೆಕಾರ್ಡ್.. ಜಾರಕಿಹೊಳಿಯೇ ವಿಡಿಯೋ ಬಿಟ್ಟಿದ್ದಾರೆ
ಎಸ್‍ಐಟಿ: ನೀವ್ಯಾಕೆ ವಿರೋಧ ಮಾಡ್ಲಿಲ್ಲ
ಯುವತಿ: ಜಾರಕಿಹೊಳಿ ಪ್ರಭಾವಿ ಆಗಿದ್ದರಿಂದ ಭಯದಿಂದ ವಿರೋಧಿಸಲಿಲ್ಲ
ಎಸ್‍ಐಟಿ: ಶ್ರವಣ್, ನರೇಶ್ ಹೇಗೆ ಪರಿಚಯ..?
ಯುವತಿ: ಶ್ರವಣ್ ನನ್ನ ಕ್ಲಾಸ್‍ಮೆಟ್, ನರೇಶಣ್ಣನ ಪರಿಯಚಿಸಿದ್ರು..!
ಯುವತಿ: ನನ್ನ ನೋವನ್ನ ನರೇಶಣ್ಣನ ಬಳಿ ಹೇಳಿಕೊಂಡೆ
ಯುವತಿ: ಸಾಕ್ಷ್ಯ ಇಲ್ಲದಿದ್ರೆ ಏನೂ ಆಗಲ್ಲ ಅಂದ್ರು. ಅದಕ್ಕೆ ನಾನು ವಿಡಿಯೋ ರೆಕಾರ್ಡ್ ಮಾಡಿದೆ.
ಎಸ್‍ಐಟಿ: ವಿಡಿಯೋ ರಿಲೀಸ್ ಆಯ್ತು..?
ಯುವತಿ: ನಂಗೆ ಗೊತ್ತಿಲ್ಲ. ಒಂದು ಸಿಡಿಯನ್ನ ನರೇಶಣ್ಣನಿಗೂ.. ಮತ್ತೊಂದು ಸಿಡಿಯನ್ನ ಆರ್‍ಟಿ ನಗರದ ಪಿಜಿಯಲ್ಲಿಟ್ಟಿದೆ. ಹೇಗೆ ರಿಲೀಸ್ ಆಯ್ತೋ ಗೊತ್ತಿಲ್ಲ ಎಂದು ಯುವತಿ ಎಸ್‍ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *