ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಗಾಗಿ ನಗರದ ಪರೀಕ್ಷಾ ಕೇಂದ್ರಗಳಲ್ಲಿ ತಯಾರಿ ನಡೆದಿದೆ. ಅದರಲ್ಲೂ ಬಿಬಿಎಂಪಿ ಸೆಂಟರ್ ಗಳಲ್ಲಿ ಅಗ್ನಿ ಪರೀಕ್ಷೆ ಸಿದ್ಧತೆ ಜೋರಾಗಿಯೇ ಇದೆ.
Advertisement
ಗಂಗಾನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಫ್ರೌಢ ಶಾಲೆಯಲ್ಲಿ ಸರ್ವ ಸಿದ್ಧತೆ ಆಗಿದೆ. ಕೇಂದ್ರದಲ್ಲಿ ಒಟ್ಟಾರೆ 161 ಜನ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ರೆಗ್ಯುಲರ್ ಜೊತೆಗೆ ರಿಪೀಟರ್ ಸಹ ಪರೀಕ್ಷೆ ಬರೆಯಲಿದ್ದಾರೆ.
Advertisement
ಒಂದು ಕೊಠಡಿಗೆ 12 ಜನ ವಿದ್ಯಾರ್ಥಿಗಳು, 12 ಕುರ್ಚಿ ಇದ್ದು, ಒಂದು ಕುರ್ಚಿಗೆ ಒಬ್ಬರೇ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಇನ್ನೂ ಶೀತ, ಜ್ವರ, ಕೆಮ್ಮು ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೆಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಒಟ್ಟಾರೆ 15 ಕೊಠಡಿಗಳು ಪೂರ್ಣ ಸಿದ್ಧವಾಗಿದೆ. ಇಡೀ ಶಾಲೆಗೆ ಎಲ್ಲ ಕೊಠಡಿಗಳಿಗೆ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಕೊರೊನಾ ಮುನ್ನಚ್ಚರಿಕೆಯಾಗಿ ಥರ್ಮಲ್ ಸ್ಕ್ಯಾನ್, ಸ್ಯಾನಿಟೈಜರ್ ಮೂರು ಬಾರಿ ಮಾಡಲಾಗಿದೆ.
Advertisement
Advertisement
ಪರೀಕ್ಷಾ ಸಿಬ್ಬಂದಿ ಎಂದು 15 ಶಿಕ್ಷಕರು, 2 ಹೆಚ್ಚುವರಿ, 2 ಡಿಗ್ರೂಪ್ ನೌಕರರು, 1 ವಾಚ್ ಮ್ಯಾನ್ ಸೇರಿದಂತೆ 20 ಜನರು ಸಿಬ್ಬಂದಿ ಇರಲಿದ್ದಾರೆ. ಎಲ್ಲರ ಮೊಬೈಲ್ ಗಳನ್ನು ಒಬ್ಬ ಅಧಿಕಾರಿ ಹೊರಗೆಯೇ ಪಡೆಯಲಿದ್ದಾರೆ. ಹೀಗೆ ಆಯ್ದ ಉತ್ತರಗಳಲ್ಲಿ ಸರಿ ಉತ್ತರ ಆಯ್ಕೆ ಮಾಡುವ ಪ್ರಶ್ನೆ ಪತ್ರಿಕೆ ಮೊದಲ ಬಾರಿ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ನಾಳೆ ವಿದ್ಯಾರ್ಥಿಗಳು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆಗೆ ಉತ್ತರ ಆಯ್ಕೆ ಮಾಡಬೇಕಾಗುತ್ತದೆ.
ಶನಿವಾರ ಬೆಂಗಳೂರಿನಲ್ಲಿ ಆಯ್ದ ಕೇಂದ್ರಗಳಲ್ಲಿ ಅಣಕು ಪರೀಕ್ಷೆ ನಡೆಸಲಾಯ್ತು. ಖುದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಣಕು ಪರೀಕ್ಷೆ ಪರಿಶೀಲನೆ ಮಾಡಿದ್ರು. ಮಲ್ಲೇಶ್ವರದ 18 ನೇ ಕ್ರಾಸ್ ಪರೀಕ್ಷೆ ಕೇಂದ್ರ, ಪೂರ್ಣಪ್ರಜ್ಞ ಪರೀಕ್ಷಾ ಕೇಂದ್ರ, ಎಂಇಎಸ್ ಶಾಲೆ ಕೇಂದ್ರ ಹಾಗೂ ದಾಸರಹಳ್ಳಿ ಶಾಲೆಯ ಕೇಂದ್ರದ ಪರಿಶೀಲನೆ ನಡೆಸಿದ್ದರು.
ಈ ವೇಳೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಪರೀಕ್ಷೆ ಸಿದ್ಧತೆಗಳು ಮುಕ್ತಾಯವಾಗಿದೆ. ಪರೀಕ್ಷಾ ಕೇಂದ್ರಗಳು, ಪರೀಕ್ಷಾ ಕೊಠಡಿಗಳನ್ನ ಹೆಚ್ಚಳ ಮಾಡಲಾಗಿದೆ. ಪರೀಕ್ಷಾ ಸಿಬ್ಬಂದಿಗೆ ಲಸಿಕೆ 100% ಹಾಕಿಸಲಾಗಿದೆ. ಕೇಂದ್ರಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸಾಮಾಜಿಕ ಅಂತರಕ್ಕೆ ಕ್ರಮವಹಿಸಲಾಗಿದೆ. ವಿದ್ಯಾರ್ಥಿಗಳಿಗೆ ಗೊಂದಲ ಆಗಬಾರದು ಅಂತ ಬಣ್ಣದ ಓಎಂಆರ್ ಶೀಟ್ ಕೊಡಲಾಗ್ತಿದೆ. ಓಎಂಆರ್ ಶೀಟ್ ನಲ್ಲಿ ಫೋಟೋ ಸಮೇತ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಇರಲಿದೆ. ಪರೀಕ್ಷಾ ಕೇಂದ್ರಗಳು ಅತ್ಯಂತ ಸುರಕ್ಷಿತಾ ಕೇಂದ್ರಗಳಾಗಿರಲಿವೆ. ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆ ಬನ್ನಿ. ಪೋಷಕರು ಧೈರ್ಯವಾಗಿ ಮಕ್ಕಳನ್ನ ಕಳುಹಿಸಿ ಅಂತ ಮನವಿ ಮಾಡಿದರು. ಇದನ್ನೂ ಓದಿ:ಮತ್ತಷ್ಟು ‘ಲಾಕ್’ ಸಡಿಲಿಕೆ – ಜುಲೈ 26ರಿಂದ ಕಾಲೇಜ್ ಓಪನ್, ಥಿಯೇಟರ್ ಆರಂಭ!