ಎಷ್ಟು ದಿನ ಫ್ರೆಂಡ್ ನೀವು ನನಗೆ: ಚಕ್ರವರ್ತಿ ವಿರುದ್ಧ ರೊಚ್ಚಿಗೆದ್ದ ಶಮಂತ್

Public TV
2 Min Read
shamanth 2

ಪ್ರತಿವಾರ ಬಿಗ್‍ಬಾಸ್ ಮನೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಗೆ ಮನೆಯ ಎಲ್ಲಾ ಸದಸ್ಯರು ಸೇರಿ ಕಳಪೆ ಬೋರ್ಡ್ ಹಾಕುವುದು ನಿಯಮ. ಅದರಂತೆ ಈ ವಾರ ಮನೆಮಂದಿಯೆಲ್ಲಾ ಒಂದೊಂದು ಕಾರಣಗಳನ್ನು ಹೇಳಿ ಚಕ್ರವರ್ತಿ ಚಂದ್ರಚೂಡ್‍ಗೆ ಕಳಪೆ ಬೋರ್ಡ್ ನೀಡಿದ್ದಾರೆ.

shamanth 4 medium

ಈ ಮಧ್ಯೆ ಇಷ್ಟು ದಿನ ಒಳ್ಳೆಯ ಸ್ನೇಹಿತರಾಗಿದ್ದ ಶಮಂತ್ ಹಾಗೂ ಚಕ್ರವರ್ತಿ ನಡುವೆ ಇದೇ ಮೊದಲ ಬಾರಿಗೆ ಜಗಳ ನಡೆದಿದೆ. ಕಳಪೆ ಬೋರ್ಡ್ ನೀಡಲು ಶಮಂತ್ ನೀಡಿದ್ದ ಕಾರಣವನ್ನು ವಿರೋಧಿಸಿದ ಚಕ್ರವರ್ತಿಯವರು, ಕಳಪೆ ಬೋರ್ಡ್ ಹಾಕುವ ಮುನ್ನವೇ ಶಮಂತ್ ನನಗೆ ಮೊದಲೇ ಹೇಳಿದ್ದರು, ನಿಮಗೆ ಕಳಪೆ ಬೋರ್ಡ್ ನೀಡುತ್ತೇನೆ ಎಂದು ದಿವ್ಯಾ ಅರವಿಂದ್ ಜೊತೆ ಮಾತನಾಡುತ್ತಿರುತ್ತಾರೆ.

shamanth 3 medium

ಈ ವೇಳೆ ಶಮಂತ್, ದಿವ್ಯಾ ಉರುಡುಗರವರನ್ನು ನೀವು ಹಿಡಿದು ಕೊಳ್ಳಬಾರದಾಗಿತ್ತು. ನಿಮ್ಮದು ಮಿಸ್‍ಟೇಕ್ ಇದೆ, ಅದು ಬೇಕು, ಬೇಕು ಎಂದು ನೀವು ಮಾಡಿಲ್ಲ. ಇದೊಂದು ತಪ್ಪು ಬಿಟ್ಟರೆ ಬೇರೆ ಏನು ಇಲ್ಲ ಎಂದು ಹೇಳುತ್ತಾರೆ. ಅಲ್ಲದೇ ಇದೇ ವೇಳೆ ಪ್ರಿಯಾಂಕ ವಿಚಾರವಾಗಿ ಮಾತನಾಡಿದ ಚಕ್ರವರ್ತಿಯವರು, ಸಂದರ್ಭ ಬಂದಾಗ ಕೈ ಎತ್ತಿ ಬಿಡುತ್ತೀಯಾ, ಇದೇನಾ ನೀನು ವಿಶ್ವಾಸಕ್ಕೆ ಕೊಡುವ ಗೌರವ, ಮೋಸ ಮಾಡಿ ಬಿಡುತ್ತೀಯಾ, ಸುಳ್ಳು ಹೇಳಿ ನುಣುಚಿಕೊಂಡು ಬಿಡುತ್ತೀಯಾ, ತಪ್ಪಿಗೆ ತಪ್ಪು ಎಂದು ಹೇಳು, ಸರಿಗೆ ಸರಿ ಅಂತ ಹೇಳು, ನೀನು ಯಾವ ಸ್ನೇಹಿತರಿಗೆ ಬೇಕಾದರೂ ಕತ್ತು ಕುಯ್ದುಬಿಡುತ್ತೀಯಾ ಎಂದು ಬೈಯ್ಯುತ್ತಾರೆ.

shamanth 1 medium

ಇದರಿಂದ ರೊಚ್ಚಿಗೆದ್ದ ಶಮಂತ್, ಯಾವುದಕ್ಕೊ, ಯಾವುದೋ ಪದ ಬಳಸಬೇಡಿ. ನಾನು ಕತ್ತು ಕುಯ್ಯುವ ಕೆಲಸ ಮಾಡಿಲ್ಲ. ನಾನು ಇಷ್ಟು ವಾರ ಕಳಪೆ ಹಾಕಿದವರು ಯಾವತ್ತು ಕೂಡ ನನಗೆ ಕತ್ತು ಕುಯ್ದೆ ಎಂದು ಹೇಳಿಲ್ಲ. ಹೇಳಿದ ಕಾರಣವನ್ನು ಸ್ವೀಕರಿಸಿ, ನನ್ನದೇ ಎಲ್ಲೋ ತಪ್ಪು ಇರಬಹುದು ಎಂದು ಸುಮ್ಮನೇ ಆಗಿದ್ದಾರೆ. ನನ್ನನ್ನು ಕಾರಣ ಕೇಳಿದ್ದಾರೆ, ನಾನು ಕಾರಣ ಹೇಳಿದ್ದೇನೆ ಅಷ್ಟೇ. ಕತ್ತು ಕುಯ್ಯೊದು ನಂಬಿಕೆ ದ್ರೋಹ, ಫ್ರೆಂಡ್ಸ್‍ನ ಕಳೆದುಕೊಳ್ಳುವುದು, ನಿಮಗೆ ಇದೆಲ್ಲದರ ಬಗ್ಗೆ ಮಾತನಾಡಲು ಯಾವುದೇ ಹಕ್ಕಿಲ್ಲ. ಎಷ್ಟು ದಿನ ಫ್ರೆಂಡ್ ನೀವು ನನಗೆ, ನನ್ನ ಬಗ್ಗೆ ಏನು ಗೊತ್ತು ನಿಮಗೆ, ಹೇಗೆ ಕತ್ತು ಕುಯ್ದೆ ಎಂದು ಹೇಳುತ್ತೀರಾ. ಕತ್ತು ಕುಯ್ದನಾ ನಾನು ನಿಮಗೆ, ಸುಮ್ಮನೆ ರಾಂಗ್ ಸ್ಟೇಟ್‍ಮೆಂಟ್ ಮಾಡಿ, ಇಲ್ಲದೇ ಇರುವ ಅನಿಸಿಕೆಯನ್ನು ಸೃಷ್ಟಿಸುವುದನ್ನು ಬಿಡಿ ಮೊದಲು, ನಾನು ಏನು ಬೇಕಾದರೂ ಮಾಡುತ್ತೇನೆ. ನಿಮಗೆ ನನ್ನ ಬಗ್ಗೆ ಸಂಪೂರ್ಣವಾಗಿ ಗೊತ್ತಿಲ್ಲ ಎಂದರೆ ಮಾತನಾಡಬಾರದು, ಮಾತನಾಡಬೇಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ತಂದೆಯ ಭಜನೆ ಹಾಡಿಗೆ ಮನಸೋತ ರಾಧಿಕಾ ಪಂಡಿತ್

Share This Article
Leave a Comment

Leave a Reply

Your email address will not be published. Required fields are marked *