ಶ್ರೀನಗರ: ಗಡಿ ನಿಯಂತ್ರಣ ರೇಖೆಯ ಬಳಿ ಭಯೋತ್ಪಾದಕರು ಮತ್ತು ಭಾರತೀಯ ಯೋಧರ ನಡುವೆ ಎರಡು ಬಾರಿ ಗುಂಡಿನ ಚಕಮಕಿ ನಡೆದಿದ್ದು, ಈ ಘಟನೆಗಳಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಜೊತೆಗೆ ಯೋಧರ ಗುಂಡಿಗೆ ಮೂವರು ಉಗ್ರರು ಬಲಿಯಾಗಿದ್ದಾರೆ.
ಕುಪ್ವಾರಾ ಜಿಲ್ಲೆಯ ಎಲ್‍ಓಸಿ ಬಳಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಓರ್ವ ಆರ್ಮಿ ಆಫೀಸರ್ ಮತ್ತು ಒಬ್ಬರು ಬಿಎಸ್‍ಎಫ್ ಪೇದೆ ಸೇರಿದಂತೆ ಮೂವರು ಭಾರತೀಯ ಯೋಧರು ಸಾವನ್ನಪ್ಪಿದ್ದಾರೆ. ಜೊತೆಗೆ ಎರಡು ದಾಳಿಯಲ್ಲಿ ಮೂವರು ಉಗ್ರರನ್ನು ಯೋಧರು ಗುಂಡಿಕ್ಕಿ ಕೊಂದಿದ್ದಾರೆ.
Advertisement
Advertisement
ಉತ್ತರ ಕಾಶ್ಮೀರದ ಮಚಿಲ್ ಸೆಕ್ಟರ್ ಬಳಿ ರಾತ್ರಿ ಒಂದು ಗಂಟೆಗೆ ಎಲ್‍ಓಸಿ ಬಳಿ ಯಾರೋ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಗಸ್ತು ತಿರುಗುತ್ತಿದ್ದ ಯೋಧರು ಸ್ಥಳಕ್ಕೆ ಹೋದಾಗ ಗುಂಡಿನ ದಾಳಿ ಆರಂಭವಾಗಿದೆ. ಎರಡು ಗಂಟೆಗಳ ಕಾಲ ಗುಂಡಿನ ದಾಳಿ ನಡೆದಿದ್ದು, ಬಿಎಸ್‍ಎಫ್ ಪೇದೆ ಸುದೀಪ್ ಸರ್ಕಾರ್ ಹುತಾತ್ಮರಾಗಿದ್ದಾರೆ. ಜೊತೆಗೆ ಓರ್ವ ಉಗ್ರ ಸಾವನ್ನಪ್ಪಿದ್ದಾನೆ.
Advertisement
Advertisement
ಈ ವೇಳೆ ಸ್ಥಳಕ್ಕೆ ಹೆಚ್ಚುವರಿ ಯೋಧರು ಬಂದಿದ್ದು, ಕಾರ್ಯಚರಣೆ ಮಾಡಿದ್ದಾರೆ. ಆದರೆ ಬೆಳಗ್ಗೆ 10 ಗಂಟೆಗೆ ಮತ್ತೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಓರ್ವ ಆರ್ಮಿ ಆಫೀಸರ್ ಸೇರಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಏಪ್ರಿಲ್‍ನಿಂದ ಇತ್ತೀಚೆಗೆ ನಡೆದ ಎನ್‍ಕೌಂಟರಿನಲ್ಲಿ ಇದು ಬಹುದೊಡ್ಡ ಕಾರ್ಯಚರಣೆ ಎಂದು ಆರ್ಮಿ ಅಧಿಕಾರಿಗಳು ತಿಳಿಸಿದ್ದಾರೆ.