ಬೆಂಗಳೂರು: ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ನಾಲ್ಕು ದಿನ ಪೂರ್ಣಗೊಂಡಿದ್ದು, ಇಷ್ಟು ದಿನದಲ್ಲಿ ಒಬ್ಬರಿಗೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಯಲು ಬಿಗ್‍ಬಾಸ್ ಟಾಸ್ಕ್‍ವೊಂದನ್ನು ನೀಡಿದ್ದರು. ಅದರ ಅನುಸಾರ ಆ್ಯಕ್ಟಿವಿಟಿ ಏರಿಯಾದಲ್ಲಿ ಲೈಕ್ ಹಾಗೂ ಡಿಸ್ ಲೈಕ್ ಬ್ಯಾಡ್ಜ್ ಗಳನ್ನು ಇರಿಸಲಾಗಿತ್ತು. ಅದರಂತೆ ಮನೆಯ ಸದಸ್ಯರು ಸರದಿಯಲ್ಲಿ ಬಂದು ಮನೆಯಲ್ಲಿ ತಾವು ಹೊಂದಿಕೊಳ್ಳುವ ಒಬ್ಬ ಸದಸ್ಯರಿಗೆ ಲೈಕ್ ಬ್ಯಾಡ್ಜ್ ಮತ್ತು ಹೊಂದಿಕೊಳ್ಳಲಾಗದ ಮತ್ತೊಬ್ಬ ಸದಸ್ಯರಿಗೆ ಡಿಸ್ ಲೈಕ್ ಬ್ಯಾಡ್ಜ್ ನೀಡಿ ಅದಕ್ಕೆ ಸೂಕ್ತ ಕಾರಣ ತಿಳಿಸುವಂತೆ ಸೂಚಿಸಿದ್ದರು.
ಈ ವೇಳೆ ಮನೆಯ ಬಹುತೇಕ ಸ್ಪರ್ಧಿಗಳು ನಿರ್ಮಲರ ನಡುವಳಿಕೆಯನ್ನು ವಿರೋಧಿಸಿ, ಅವರು ಯಾರೊಂದಿಗೂ ಬೆರೆಯುತ್ತಿಲ್ಲ. ಎಲ್ಲರೊಂದಿಗೆ ಮಾತನಾಡಬೇಕು ಹೀಗೆ ಹಲವು ಕಾರಣಗಳನ್ನು ನೀಡಿ ಡಿಸ್ ಲೈಕ್ ಬ್ಯಾಡ್ಜ್ ನೀಡಿದರು. ಆದರೆ ದಿವ್ಯಾ ಸುರೇಶ್ ಮಾತ್ರ ಎಲ್ಲರ ಹೇಳಿಕೆಗಿಂತಲೂ ವಿಭಿನ್ನವಾಗಿ ಉತ್ತರಿಸುವ ಮೂಲಕ ನಿರ್ಮಲಗೆ ಲೈಕ್ ಬ್ಯಾಡ್ಜ್ ನೀಡಿದರು.
ಮೊದಲಿಗೆ ನಾನು ಡಿಸ್ ಲೈಕ್‍ನನ್ನು ನೀಡಲು ಇಚ್ಛಿಸುತ್ತೇನೆ. ಇದು ಡಿಸ್ ಲೈಕ್ ಎಂದಲ್ಲಾ. ನನಗೆ ಆ ವ್ಯಕ್ತಿ ಜೊತೆ ಹೆಚ್ಚಾಗಿ ಬೆರೆಯಲು ಆಗಲಿಲ್ಲ. ಮಾತಾನಾಡಿದ್ದೇನೆ, ಆದರೆ ಅಷ್ಟಾಗಿ ಮಾತನಾಡಿಲ್ಲ. ಡಿಸ್ ಲೈಕ್ ಬ್ಯಾಡ್ಜ್ ನೀಡುತ್ತಿದ್ದೇನೆ ಎಂದ ಮಾತ್ರಕ್ಕೆ ನಾನು ಆ ವ್ಯಕ್ತಿಯನ್ನು ದೂಷಿಸುತ್ತಿಲ್ಲ ಅಷ್ಟೇ ಎಂದು ಕ್ಷಮಿಸಿ ನಾನು ನಿಮಗೆ ಡಿಸ್ ಲೈಕ್ ಬ್ಯಾಡ್ಜ್ ನೀಡುತ್ತಿದ್ದೇನೆ ಅಂತ ಶಂಕರ್‍ಗೆ ಡಿಸ್‍ಲೈಕ್ ಬ್ಯಾಡ್ಜ್ ನೀಡಿದರು.
ಬಳಿಕ ಲೈಕ್ ಬ್ಯಾಡ್ಜ್ ಅನ್ನು ನಿರ್ಮಲರಿಗೆ ನೀಡಲು ಇಷ್ಟಪಡುತ್ತೇನೆ. ಇಲ್ಲಿ ಕೆಲವರು ಗುಂಪಿನಲ್ಲಿ ಗೋವಿಂದ ಆಗುತ್ತಿದ್ದಾರೆ. ಅದರಲ್ಲಿ ನಾನು ಕೂಡ ಇರಬಹುದು. ಆದರೆ ನಿರ್ಮಲರಿಗೆ ಲೈಕ್ ಬ್ಯಾಡ್ಜ್ ಕೊಡಲು ಕಾರಣವೆಂದರೆ ನಾನು ಒಬ್ಬ ಮನುಷ್ಯಳು, ನನಗೂ ಭಾವನೆಗಳಿವೆ. ನನಗೂ ಸ್ವಲ್ಪ ನನ್ನದೇ ಆದ ಟೈಮ್ ನೀಡಬೇಕೆಂದು ಏಕಾಂಗಿಯಾಗಿ ಕುಳಿತುಕೊಳ್ಳುವುದು ಅಥವಾ ನಾನು ಈ ವಾರ ಎಲಿಮಿನೆಟ್ ಆಗುತ್ತಿದ್ದೇನೆ, ನಾನು ಅವರೊಂದಿಗೆ ಮಾತನಾಡಬೇಕು. ನಾನು ಕ್ಯಾಮೆರಾ ಕಣ್ಣೆದುರಿಗೆ ಕಾಣಿಸಿಕೊಳ್ಳಬೇಕು. ಎಲ್ಲರೊಂದಿಗೆ ನಾನು ಸೇರಿ ಜೋರಾಗಿ ನಗಬೇಕು ಎನ್ನುವ ಆಲೋಚನೆಯನ್ನು ಬಿಟ್ಟು, ನಾನು ಒಬ್ಬಳು ಮನುಷ್ಯಳು, ನಾನು ಒಬ್ಬಳು ಸ್ಪರ್ಧಿಯೇ ಎಂದು ನನಗೆ ನನ್ನದೇಯಾದಂತಹ ಸ್ಪೇಸ್ ಬೇಕು. ನಾನು ನಾನಾಗಿ ಇರುತ್ತೇನೆ ಎಂದು ತಾನಾಗಿಯೇ ಇರುವುದು ನಿರ್ಮಲರವರು ಎಂದು ನನ್ನ ಅಭಿಪ್ರಾಯ. ಹಾಗಾಗಿ ನಾನು ಲೈಕ್ ಬ್ಯಾಡ್ಜ್ ನನ್ನು ಅವರಿಗೆ ನೀಡುತ್ತೇನೆ ಎಂದು ವಿವರಿಸಿದರು.
ಒಟ್ಟಾರೆ ಮನೆಮಂದಿಯೆಲ್ಲ ಡಿಸ್ ಲೈಕ್ ಬ್ಯಾಡ್ಜ್ ನೀಡಿದ ನಿರ್ಮಲಗೆ ದಿವ್ಯಾ ಲೈಕ್ ನೀಡಿದ್ದನ್ನು ನೋಡಿ ಸ್ಪರ್ಧಿಗಳೆಲ್ಲರೂ ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು.