ಅದ್ಯಾಕೋ ಗೊತ್ತಿಲ್ಲ ಶಮಂತ್ ಬ್ರೊ ಗೌಡಗೆ ಆರಂಭದಿಂದಲೂ ಅದೃಷ್ಟ ಅನ್ನೋದು ಬೆನ್ನಿಗಂಟಿಕೊಂಡೇ ಇದೆ. ಸತತವಾಗಿ ನಾಮಿನೇಟ್ ಆಗುತ್ತಿದ್ದರೂ, ಮನೆಯಿಂದ ಅವರು ಆಚೆ ಮಾತ್ರ ಬರುತ್ತಿಲ್ಲ. ಅದಕ್ಕೆ ಕಾರಣವೇನು ಎಂಬುದು ಮಾತ್ರ ನಿಗೂಢವಾಗಿದೆ.
ಬಿಗ್‍ಬಾಸ್ ಮನೆಯಲ್ಲಿರುವ ವೀಕ್ ಕಂಟೆಸ್ಟಂಟ್ ಎಂದರೆ ಶಮಂತ್ ಎಂದು ಹೇಳಬಹುದು. ಮನೆಯಲ್ಲಿರುವ ಸ್ಪರ್ಧಿಗಳು, ಬಿಗ್‍ಬಾಸ್ ವೀಕ್ಷರು ಮನೆಯಿಂದ ಶಮಂತ್ ಅವರನ್ನು ಹೊರಗೆ ಕಳುಹಿಸಲು ಪ್ರಯತ್ನಿಸಿದರು. ಶಮಂತ್ ಅವರ ಅದೃಷ್ಟ ಮಾತ್ರ ಚೆನ್ನಾಗಿದೆ ಎಂದು ಅನ್ನಿಸುತ್ತದೆ. ಬಿಗ್‍ಬಾಸ್‍ಮನೆಯಲ್ಲಿ ಇನ್ನು ಹೆಚ್ಚಿನ ಸಮಯವನ್ನು ಕೇಳುವ ಅವಕಾಶ ಮತ್ತೆ ಮತ್ತೆ ಬಂದೊದಗುತ್ತಿದೆ.
ಶಮಂತ್ ಅದೃಷ್ಟ ಕಂಡು ಮನೆಯವರು ಶಾಕ್!
ಈ ವಾರ ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ಅರವಿಂದ್, ದಿವ್ಯಾ ಸುರೇಶ್, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ರಾಜೀವ್ ನಾಮಿನೇಟ್ ಆಗಿದ್ದರು. ಆ ಪೈಕಿ ಶನಿವಾರದ ಎಪಿಸೋಡ್‍ನಲ್ಲಿ ನಿಧಿ ಮತ್ತು ಅರವಿಂದ್ ಸೇಫ್ ಆಗಿದ್ದರು. ಶಮಂತ್, ಪ್ರಶಾಂತ್, ದಿವ್ಯಾ ಸುರೇಶ್, ಶುಭಾ, ರಾಜೀವ್ ಅವರಲ್ಲಿ ಯಾರು ಹೊರಗೆ ಹೋಗೋದು ಅನ್ನೋ ವಿಚಾರ ಚರ್ಚೆ ಆಯ್ತು. ಈ ಐವರಲ್ಲಿ ರಾಜೀವ್, ದಿವ್ಯಾ, ಶುಭಾ ಅವರನ್ನು ಸೇಫ್ ಎಂದು ಸುದೀಪ್ ಘೋಷಿಸಿದರು. ಅಂತಿಮವಾಗಿ ಪ್ರಶಾಂತ್ ಮತ್ತು ಶಮಂತ್ ಉಳಿದುಕೊಂಡರು. ಅವರಿಬ್ಬರಲ್ಲಿ ಶಮಂತ್‍ಗೆ ಕಮ್ಮಿ ವೋಟ್ ಬಂದಿದ್ದರಿಂದ, ಅವರನ್ನು ಮನೆಯಿಂದ ಎಲಿಮಿನೇಟ್ ಎಂದು ಸುದೀಪ್ ಘೋಷಿಸಿದರು. ಆಗ ವೈಜಯಂತಿ ಅಡಿಗ ತಮ್ಮದೇ ಆಗಿರುವ ಕಾರಣವನ್ನು ಕೊಟ್ಟು ನಾನು ಶಮಂತ್‍ಅವರನ್ನು ಸೇಫ್ ಮಾಡಿ ನಾನು ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಹೇಳಿದರು.
ಶಮಂತ್‍ಗೆ ಸುದೀಪ್ ಹೇಳಿದ್ದೇನು
ಶಮಂತ್ ಸೇಫ್ ಆಗಿದ್ದು, ಸುದೀಪ್ ಅವರಿಗೂ ಕೂಡಾ ಶಾಕ್ ಆಗಿದೆ. ನೀವು ಇಲ್ಲಿಗೆ ಬರುತ್ತೀರಾ ಎಂದು ನಾನು ಸಂತೋಷ ಪಡುತ್ತಿದ್ದೇನು. ಏನ್ರೀ ನಿಮ್ಮ ಲಕ್. ನೀವು ವೈಜಯಂತಿ ಅವರಿಂದ ಸೇಪ್ ಆಗಿದ್ದೀರಾ. ನೀವು ಜನರ ಮನಸ್ಸನ್ನು ಗೆಲ್ಲಬೇಕು. ನಿಮಗೆ ಸಮಯ ಇದೆ. ಚೆನ್ನಾಗಿ ಆಡಿ ಇದೊಂದು ಅವಕಾಶ ನಿಮಗೆ ಸಿಕ್ಕಿದೆ. ಆದರೆ ಮುಂದಿನ ವಾರಕ್ಕೆ ನೇರವಾಗಿ ನಿಮ್ಮನ್ನು ನಾಮಿನೇಟ್ ಮಾಡುತ್ತಿದ್ದೇವೆ ಎಂದು ಸುದೀಪ್ ಶಮಂತ್‍ಗೆ ಹೇಳಿದ್ದಾರೆ.
ಈ ವಾರ ಸೇಪ್ ಆಗಿದ್ದೇನೆ ಎಂದು ಶಮಂತ್ ಸಂತೋಷಪಡುವಲ್ಲಿ ಸುದೀಪ್ ಅವರು ನೀಡಿದ ಶಾಕ್‍ಗೆ ಮತ್ತೆ ಶಮಂತ್ ಮುಂದಿನವಾರ ಹೊರ ಹೋಗುವವರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳು ಕೂಡಾ ಶಮಂತ್ ಅವರಿಗೆ ಕಿವಿಮಾತನ್ನು ಹೇಳಿದ್ದಾರೆ. ಎಂದೂ ಆಗದ ಒಂದು ಘಟನೆ ಮಾತ್ರ ಬಿಗ್‍ಬಾಸ್ ಮನೆಯಲ್ಲಿ ನಡೆದಿದೆ. ಈ ಘಟನೆ ಬಿಗ್‍ಬಾಸ್ ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟುಮಾಡಿದೆ.