ಬೆಂಗಳೂರು: ಇಂದಿನಿಂದ ಇಡೀ ಕರ್ನಾಟಕ ಕಂಪ್ಲೀಟ್ ಅನ್‍ಲಾಕ್ ಆಗ್ತಿದೆ. ಇಂದು ಬೆಳಗ್ಗೆ 5 ಗಂಟೆಯಿಂದ ಹೆಚ್ಚು ಕಡಿಮೆ ಇಡೀ ರಾಜ್ಯ ಸಂಪೂರ್ಣ ಅನ್‍ಲಾಕ್ ಆಗಿದೆ. ಬರೋಬ್ಬರಿ ಎರಡೂವರೆ ತಿಂಗಳ ಬಳಿಕ ರಾಜ್ಯ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ. ಕೊರೋನಾ ಎರಡನೇ ಅಲೆ ಇಳಿಕೆ ಬೆನ್ನಲ್ಲೇ ಲಾಕ್ ನಿಯಮಗಳನ್ನು ಸರ್ಕಾರ ಸಡಿಲ ಮಾಡಿದ್ದು, ಮಾರ್ಗಸೂಚಿ ಹೊರಡಿಸಿದೆ. ಅದರ ಅನ್ವಯ ಒಂದೆರಡನ್ನು ಬಿಟ್ರೆ ಬಹುತೇಕ ಎಲ್ಲಾ ರೀತಿಯ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿವೆ.
ಸತತ 2 ತಿಂಗಳ ಬಳಿಕ ಶಾಪಿಂಗ್ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಓಪನ್ ಆಗ್ತಿವೆ. ಮಾಲ್ ಸೇರಿದಂತೆ ಇತರೆ ಮಳಿಗೆಗಳನ್ನು ರಾತ್ರಿ 9 ಗಂಟೆವರೆಗೂ ತೆರೆಯಬಹುದಾಗಿದೆ. ಇತ್ತ ಬಾರ್, ರೆಸ್ಟೋರೆಂಟ್‍ಗಳಲ್ಲಿ ರಾತ್ರಿ 9 ಗಂಟೆವರೆಗೂ ಕುಳಿತು ಕುಡಿಯಲು ಸರ್ಕಾರ ಅನುಮತಿ ನೀಡಿದೆ. ಅಲ್ಲದೆ ಹೋಟೆಲ್‍ಗಳಲ್ಲೂ ರಾತ್ರಿ 9 ಗಂಟೆವರೆಗೂ ಕುಳಿತು ಅಲ್ಲೇ ಆಹಾರ ಸೇವಿಸಬಹುದಾಗಿದೆ.
ಇಂದಿನಿಂದ ಬೆಂಗಳೂರಿನ ಜೀವನಾಡಿ ಬಿಎಂಟಿಸಿಯ 4,500 ಬಸ್‍ಗಳು ರಸ್ತೆಗೆ ಇಳಿಯಲಿವೆ. ಸರ್ಕಾರ ಶೇ.100ರಷ್ಟು ಸೀಟ್ ಭರ್ತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆಗಂತ ಬಸ್ಸಿನಲ್ಲಿ ಸೀಟಿಲ್ಲ ಅಂತ ನಿಂತ್ಕೊಂಡು ಪ್ರಯಾಣ ಮಾಡುವಂತಿಲ್ಲ. ಎಷ್ಟು ಸೀಟ್ ಇದ್ಯೋ ಅಷ್ಟೆ ಪ್ರಯಾಣಿಕರಿಗೆ ಅವಕಾಶ. ಇತ್ತ ಮೆಟ್ರೋದಲ್ಲಿ 100 ಪರ್ಸೆಂಟ್ ಸೀಟ್ ಭರ್ತಿಗೆ ಒಪ್ಪಿಗೆ ಸಿಕ್ಕಿದೆ. ವಾರ ಪೂರ್ತಿ ಮೆಟ್ರೋ ಸೇವೆ ಸಿಗಲಿದೆ.
ಬೇಜಾರ್ ಆದ್ರೆ ಮನರಂಜನಾ ಪಾರ್ಕ್‍ಗಳಿಗೂ ಇಂದಿನಿಂದ ಹೋಗಬಹುದಾಗಿದೆ. ನೂರು ಮಂದಿ ಬಂಧು ಬಾಂಧವರನ್ನು ಕರೆಯಿಸಿ ಮದ್ವೆಗಳನ್ನು ಕೂಡ ಮಾಡಬಹುದಾಗಿದೆ. ಅಂತ್ಯಕ್ರಿಯೆಗೆ 20 ಜನರಷ್ಟೇ ಭಾಗಿಯಾಗಬಹುದಾಗಿದೆ. ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇ.100ರಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸಬಹುದಾಗಿದೆ. ಕೈಗಾರಿಕೆಗಳಲ್ಲೂ ಶೇ.100ರಷ್ಟು ಕಾರ್ಮಿಕರ ಬಳಕೆಗೆ ಅವಕಾಶವಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ನಿಧಿ ಔಟ್
ಎಲ್ಲಾ ವಲಯಗಳು ಅನ್‍ಲಾಕ್ ಆದ್ರೂ ಥಿಯೇಟರ್, ಪಬ್, ಶಾಲಾ-ಕಾಲೇಜು, ಕೋಚಿಂಗ್ ಸೆಂಟರ್, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸಭೆ-ಸಮಾರಂಭಗಳಿಗೆ ನಿರ್ಬಂಧವಿದೆ. ಈಜುಕೊಳಕ್ಕೂ ನಿರ್ಬಂಧ ಇದೆ. ಆದ್ರೆ ಕ್ರೀಡಾಪಟುಗಳು ಅಭ್ಯಾಸಕ್ಕೆ ಅನುಮತಿ ಇದೆ. ಅಲ್ಲದೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ ಇರಲಿದೆ. ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯಲಾಗಿದೆ.
ಒಟ್ಟಿನಲ್ಲಿ ಇಂದಿನಿಂದ ರಾಜ್ಯದಲ್ಲಿ ಒಂಥರಾ ಬಿಂದಾಸ್ ದುನಿಯಾ ಅನಾವರಣಗೊಳ್ಳಲಿದೆ. ಆಗಂತ ಮೈಮರೆತ್ರೆ ಕಂಟಕ ತಪ್ಪಿದ್ದಲ್ಲ. ಈಗಾಗಲೇ ಡೆಲ್ಟಾ ಹಾಗೂ 3ನೇ ಅಲೆಯ ಭೀತಿ ಕಾಡುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಬೇಡಿ. ಮಾಸ್ಕ್, ಸಾಮಾಜಿಕ ಅಂತರ ಪಾಲಿಸಿ. ಮಕ್ಕಳನ್ನು ಹೊರಗೆ ಕರ್ಕೊಂಡ್ ಹೋಗೋದು ಆದಷ್ಟು ಅವಾಯ್ಡ್ ಮಾಡಿ.