ಚೆನ್ನೈ: ಕೊರೊನಾ ನಿಯಂತ್ರಣಕ್ಕೆ ಸಿಎಂ ಎಂ.ಕೆ.ಸ್ಟಾಲಿನ್ ಎರಡು ವಾರಗಳ ತಮಿಳುನಾಡು ಲಾಕ್‍ಡೌನ್ ಮಾಡಿಕೊಂಡಿದ್ದಾರೆ. ಮೇ 10 ರಿಂದ ಮೇ 24ರವರೆಗೆ 14 ದಿನ ತಮಿಳುನಾಡು ಸ್ತಬ್ಧವಾಗಲಿದೆ.
ದಿನಸಿ ಅಂಗಡಿಗಳು, ಟೀ ಶಾಪ್ ಗಳು ಮಧ್ಯಾಹ್ನ 12ವರೆಗೆ ತೆರಯಬಹುದು. ಉಳಿದಂತೆ ಹೋಟೆಲ್, ರೆಸ್ಟೊರೆಂಟ್ ಗಳಲ್ಲಿ ಕೇವಲ ಪಾರ್ಸೆಲ್ ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮಾಲ್ ಸೇರಿದಂತೆ ಬೃಹತ್ ವ್ಯಾಪಾರ ಮಳಿಗೆಗಳ ಮೇಲೆ ನಿರ್ಬಂಧ ಮುಂದುವರಿಯಲಿದೆ. ರಾಜ್ಯದ ಬಹುತೇಕ ಮಾರುಕಟ್ಟೆಗಳು ಮುಚ್ಚಲಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಅಂತರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ಹಾಕಲಾಗಿದ್ದು, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ನಿಗದಿತ ರೈಲು/ವಿಮಾನಗಳ ಮೂಲಕ ಮಾತ್ರ ಸಂಚರಿಸಬಹುದಾಗಿದೆ. ಬ್ಯುಟಿ ಪಾರ್ಲರ್, ಸಲೂನ್, ಅಡಿಟೋರಿಯಂ, ಬಾರ್, ಪಾರ್ಕ್, ಮೀಟಿಂಗ್ ಹಾಲ್ ಸೇರಿದಂತೆ ಹೆಚ್ಚು ಜನಸಂದಣಿ ಸೇರುವ ಸ್ಥಳಗಳನ್ನು ಮುಚ್ಚುವಂತೆ ಸರ್ಕಾರ ತಿಳಿಸಿದೆ. ಅಗತ್ಯ ಸೇವೆಗಳು ಹೊರತುಪಡಿಸಿ ಇನ್ನುಳಿದ ಎಲ್ಲ ಚಟುವಟಿಕೆಗಳ ಮೇಲೆ ಸರ್ಕಾರ ನಿರ್ಬಂಧ ಹಾಕಿದೆ.
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಎಂ.ಕೆ.ಸ್ಟಾಲಿನ್ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಜನತೆಗೆ ಭರ್ಜರಿ ಗಿಫ್ಟ್ ನೀಡಿದ್ದು, ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ 2 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
Tamil Nadu government announces complete lockdown for two weeks starting May 10 to control the spread of COVID-19 pic.twitter.com/h6QcZHE0nH
— ANI (@ANI) May 8, 2021
ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಮಹತ್ವದ ಘೋಷಣೆ ಹೊರಡಿಸಿದ್ದು, ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಕ್ಕೆ ಕೊರೊನಾ ಸಂಕಷ್ಟದ ಪರಿಹಾರವಾಗಿ ಮೊದಲ ಕಂತಿನಲ್ಲಿ 2 ಸಾವಿರ ರೂ. ಪರಿಹಾರ ಧನ ನೀಡಲಾಗುವುದು. ಇದಕ್ಕಾಗಿ ಒಟ್ಟು 4,153.39 ಕೋಟಿ ರೂ. ಮೀಸಲಿರಿಸಲಾಗಿದ್ದು, 2.07 ಕೋಟಿ ರೇಷನ್ ಕಾರ್ಡ್ ಹೊಂದಿದ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ.