– ಪೊಲೀಸರಿಗೆ ತಲೆನೋವಾದ ಕಳ್ಳನ ನಿಗೂಢ ಹೆಜ್ಜೆ
– 40ಕ್ಕೂ ಹೆಚ್ಚು ಸರಗಳ್ಳತನ
ಬೆಂಗಳೂರು: ನಗರ ಪೊಲೀಸರು ಕಳೆದ ಎರಡು ವರ್ಷಗಳಿಂದ ಸರಗಳ್ಳನ ಬಂಧನಕ್ಕೆ ಬಲೆ ಬೀಸಿದ್ದು, ಚಾಲಾಕಿ ಕಳ್ಳ ಪದೇ ಪದೇ ಚಳ್ಳೆಹಣ್ಣು ತಿನ್ನಿಸಿ ಕ್ಷಣಾರ್ಧದಲ್ಲಿ ಮಾಯವಾಗ್ತಿದ್ದಾನೆ,
ಕಳೆದ ಎರಡು ವರ್ಷದಿಂದ ಬೆಂಗಳೂರಿಗೆ ತನ್ನ ಈ ಕಪ್ಪು ಪಲ್ಸರ್ ಬೈಕ್ ನಲ್ಲಿ ಕಳ್ಳ ಬರುತ್ತಿದ್ದಾನೆ. ಹೀಗೆ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಡುವ ಈ ಕಳ್ಳ ವಾಯುವಿಹಾರಕ್ಕೆ ಬಂದಿರುವ ಮಹಿಳೆಯರ ಚಿನ್ನದ ಸರ ಕದ್ದು ಪರಾರಿಯಾಗುತ್ತಿದ್ದಾನೆ. ಇದುವರೆಗೂ 70ಕ್ಕೂ ಹೆಚ್ಚು ಸರಗಳ್ಳತನ ಇವನೇ ನಡೆಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸರಗಳ್ಳ ಪ್ರತಿ ಬಾರಿಯೂ ತನ್ನ ಬೈಕ್ ನ ನಂಬರ್ ಪ್ಲೇಟನ್ನ ಬದಲಾಯಿಸಿಕೊಳ್ಳುತ್ತಿದ್ದಾನೆ.
Advertisement
Advertisement
50 ವರ್ಷ ಮೇಲ್ಪಟ್ಟವರು ರಸ್ತೆಯಲ್ಲಿ ಓಡಾಡ್ತಾರೋ ಅಂತವರನ್ನ ಸೂಕ್ಷ್ಮವಾಗಿ ಗಮನಿಸಿ ಫಾಲೋ ಮಾಡ್ತಾನೆ. ನಂತರ ನೇರವಾಗಿ ಹತ್ತಿರಕ್ಕೆ ಹೋಗಿ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದಾನೆ. ಬೆಂಗಳೂರಿನ ಗಿರಿನಗರ, ಹನುಮಂತನಗರ, ಬನಶಂಕರಿ, ಕೆಂಗೇರಿ ಸೇರಿದಂತೆ ನಲವತ್ತಕ್ಕೂ ಹೆಚ್ಚು ಠಾಣೆಯಲ್ಲಿ ಸರಗಳ್ಳತನ ಮಾಡಿದ್ದಾನೆ. ಈತನ ಜಾಡನ್ನ ಹಿಡಿದು ಹೊರಟ ಪೊಲೀಸರಿಗೆ ಒಂದೆರಡು ಬಾರಿ ಕಳ್ಳ ಬಳಸುತ್ತಿದ್ದ ಮೊಬೈಲ್ ಸಿಮ್ ನ ಲೊಕೇಶನ್ ಕೂಡ ದೊರೆತಿತ್ತು. ಆದ್ರೆ ಆ ಮೊಬೈಲ್ ನೀಡಿದ ಸುಳಿವನ್ನ ಕೂಡ ಕಳ್ಳ ಹುಸಿ ಮಾಡಿದ್ದಾನೆ. ಇದನ್ನೂ ಓದಿ: ಯೂಟ್ಯೂಬ್‍ನಿಂದ ಸರಗಳ್ಳತನ ಕಲಿತ- ಕೋಟೆನಾಡಲ್ಲಿನ ಖತರ್ನಾಕ್ ಗ್ಯಾಂಗ್ ಅಂದರ್
Advertisement
ಕಳ್ಳ ಸಿಟಿಗೆ ಬರುವ ಎಂಟ್ರಿ ಹಾಗೂ ಎಕ್ಸಿಟ್ ಪ್ರತೀ ಬಾರಿಯೂ ಬೇರೆ ಬೇರೆಯೇ ಆಗಿರುತ್ತಿದ್ದರಿಂದ ಪೊಲೀಸರ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಬೆಂಗಳೂರು ಸಿಟಿ ಪೊಲೀಸರು ಈ ಒಂಟಿ ಸರಗಳ್ಳನ ಬೆನ್ನ ಬಿದ್ದಿದ್ದು ಶತಾಯಗತಾಯ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಸರಗಳ್ಳತನ ಮಾಡ್ತಿದ್ದ ದಂಡುಪಾಳ್ಯದ ನಟೋರಿಯಸ್ ಮರಿ ರಾಕ್ಷಸ ಅರೆಸ್ಟ್