ಜಿನೀವಾ: ಬೇರೆ ಬೇರೆ ಕೋವಿಡ್ ಲಸಿಕೆಗಳನ್ನು ಮಿಶ್ರಣ ಮಾಡುವುದು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಬೇರೆ ಬೇರೆ ಉತ್ಪಾದಕರು ಅಭಿವೃದ್ಧಿ ಪಡಿಸಿದ ಲಸಿಕೆಗಳನ್ನು ಮಿಶ್ರಣ ಮಾಡುವುದು ಅಪಾಯಕಾರಿ ಬೆಳವಣಿಗೆ. ಇದರ ಬಗ್ಗೆ ಕಡಿಮೆ ಮಾಹಿತಿ ಇದೆ. ಹೆಚ್ಚಿನ ಡೇಟಾಗಳು ಲಭ್ಯವಿಲ್ಲ ಎಂದು ಡಬ್ಲ್ಯೂಎಚ್‍ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ಎರಡನೇ, ಮೂರನೇ ಮತ್ತು ನಾಲ್ಕನೇ ಡೋಸ್ ಅನ್ನು ದೇಶದ ಜನರೇ ನಿರ್ಧರಿಸಿದರೆ ಇದು ಅಸ್ತವ್ಯಸ್ತಕ್ಕೆ ಕಾರಣವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚೀನಿ ಲಸಿಕೆ ಪಡೆದವರಿಗೆ ಸೌದಿ ನಿರ್ಬಂಧ – ಪಾಕ್ ಜನತೆಗೆ ಶಾಕ್
ಎರಡು ಉತ್ಪಾದಕರು ಅಭಿವೃದ್ಧಿ ಪಡಿಸಿದ ಲಸಿಕೆಯನ್ನು ಮಿಶ್ರಣ ಮಾಡಿ ನೀಡಿದರೆ ಹೆಚ್ಚು ರೋಗ ನಿರೋಧಕ ಶಕ್ತಿ ಬರಬಹುದು ಎಂಬ ಕಾರಣ ನೀಡಿ ಕೆಲವು ಕಡೆ ಈ ಪ್ರಯೋಗಗಳು ನಡೆಯುತ್ತಿದೆ.