ಯಾದಗಿರಿ: ಪೆಟ್ರೋಲ್ ಮತ್ತು ಡೀಸೆಲ್ ದರ ದಿನೇ ದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಕಳ್ಳತನ ಮಾಡುವ ಗ್ಯಾಂಗ್ ನಗರದಲ್ಲಿ ಫುಲ್ ಆಕ್ಟಿವ್ ಆಗಿದೆ. ಒಂದೇ ರಾತ್ರಿಯಲ್ಲಿ ಎರಡು ಬಂಕ್ ನಲ್ಲಿನ ಬರೊಬ್ಬರಿ 5 ಸಾವಿರ ಲೀಟರ್ ಡೀಸೆಲ್ ಗೆ ಕನ್ನ ಹಾಕಿದೆ.
ಒಂದೇ ರಾತ್ರಿಯಲ್ಲಿ ಎರಡು ಬಂಕ್ ನಲ್ಲಿನ ಬರೊಬ್ಬರಿ 5 ಸಾವಿರ ಲೀಟರ್ ಡೀಸೆಲ್ ಗೆ ಕನ್ನ ಹಾಕಿದ್ದು, 5 ಲಕ್ಷ ರೂ.ಗೂ ಅಧಿಕ ಮೌಲ್ಯದ ಡಿಸೇಲ್ ಕದ್ದಿದ್ದಾರೆ. ರಾತ್ರಿ ಹೊತ್ತು ಫುಲ್ ಆಕ್ಟಿವ್ ಆಗುವ ಈ ಗ್ಯಾಂಗ್ ನಗರದ ಹೈದರಾಬಾದ್ ರಸ್ತೆಯಲ್ಲಿರುವ ಎಸ್ಸಾರ್ ಮತ್ತು ಗುರು ಪೆಟ್ರೋಲ್ ಬಂಕ್ ಗಳಲ್ಲಿ, ಮಧ್ಯ ರಾತ್ರಿ 12 ಗಂಟೆ ಸುಮಾರಿಗೆ ಈ ಕಳ್ಳತನ ಮಾಡಿದೆ. ಅಂಡರ್ ಗ್ರೌಂಡ್ ನಲ್ಲಿರುವ ಡೀಸೆಲ್ ಟ್ಯಾಂಕ್ ಕವರ್ ಓಪನ್ ಮಾಡಿ, ಅದಕ್ಕೆ ಪೈಪ್ ಹಾಕಿ, ಬಳಿಕ ಸುಮಾರು 30 ಮೀಟರ್ ದೂರದಲ್ಲಿ ಮೋಟರ್ ಹಚ್ಚಿ ಡೀಸೆಲ್ ಕಳ್ಳತನ ಮಾಡಿದೆ.
ಸಿಸಿಟಿವಿ ಕ್ಯಾಮೆರಾಗಳನ್ನು ಬಟ್ಟೆಯಿಂದ ಕವರ್ ಮಾಡಿ, ಕಳ್ಳತನ ಮಾಡಲಾಗಿದೆ. ಎರಡು ಬಂಕ್ ಗಳಲ್ಲಿ 12 ಸಿಸಿಟಿವಿ ಕ್ಯಾಮೆರಾಗಳಿದ್ದು, ಸ್ವಲ್ಪವೂ ಸುಳಿವು ಸಿಗದ ಹಾಗೆ ಕಳ್ಳತನ ಮಾಡಲಾಗಿದೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.