– ಸಂಶೋಧಕರ ಜೊತೆ ನಿರಂತರ ಸಂಪರ್ಕವಿದೆ
ಮೈಸೂರು: ಎರಡು ತಿಂಗಳಲ್ಲಿ ಕೋವಿಡ್-19ಗೆ ವ್ಯಾಕ್ಸಿನ್ ಬರುತ್ತದೆ ಎಂದು ಮೈಸೂರಿನಲ್ಲಿ ವಿಜ್ಞಾನಿ ಪ್ರೊ ಕೆ.ಎಸ್ ರಂಗಪ್ಪ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಯುಕೆಯ ಆಕ್ಸ್ ಫರ್ಡ್ ವಿವಿಯ ಎಡ್ವರ್ಡ್ ಜನರಲ್ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ನಡೆದಿದೆ. ಸಂಶೋಧನೆ ಮೂರನೇ ಹಂತ ತಲುಪಿದೆ. ಅಲ್ಲಿಯ ಸಂಶೋಧಕರ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಸಂಶೋಧನೆ ತುಂಬಾ ಚೆನ್ನಾಗಿ ನಡೆದಿದೆ. ಇನ್ನೂ ಎರಡು ತಿಂಗಳಲ್ಲಿ ವಾಕ್ಸಿನ್ ಬರುವುದು ಖಚಿತವಾಗಿದೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
6 ಸಾವಿರ ಜನರಿಂದ ಸಂಶೋಧನೆ ನಡೆಯುತ್ತಿದೆ. ಪ್ರಯೋಗಾತ್ಮಕವಾಗಿ ಈಗಾಗಲೇ ಹಲವರಿಗೆ ವ್ಯಾಕ್ಸಿನ್ ನೀಡಲಾಗಿದೆ. ಗಾಳಿಯ ಮೂಲಕ ನೀರಿನ ಮೂಲಕ ಕೋವಿಡ್ ಬರುವುದಿಲ್ಲ. ಗಾಳಿ ಮತ್ತು ನೀರಿನಿಂದ ಶೇಕಡ 1ರಷ್ಟು ಸೋಂಕು ಬರುವ ಸಾಧ್ಯತೆ ಇಲ್ಲ. ಬರೀ ಕೋವಿಡ್‍ನಿಂದಲೇ ಜನರು ಸಾಯುತ್ತಿಲ್ಲ. ಬೇರೆ ಬೇರೆ ಆರೋಗ್ಯದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
Advertisement
Advertisement
ಈ ವೈರಸ್‍ಗೆ ವ್ಯಾಕ್ಸಿನ್ 2 ಸಾವಿರಕ್ಕಿಂತ ಕಡಿಮೆಗೆ ಸಿಗಲಿದೆ. ಯಾವುದೇ ಕಾರಣಕ್ಕೂ ಹೆಚ್ಚು ಬೆಲೆ ಆಗುವುದಿಲ್ಲ. ಕೊರೊನಾ ಪ್ರಾಣಿಗಳಿಂದಲೇ ಬಂದಿದೆ ಎಂಬುದು ಸಂಶೋಧನೆಯಿಂದ ಧೃಡಪಟ್ಟಿದೆ. ಇದು ಮ್ಯಾನ್ ಮೇಡ್ ಅಂತ ಹೇಳಲು ಸಾಧ್ಯವಿಲ್ಲ. ಚೀನಾದ ಲ್ಯಾಬ್‍ನಿಂದ ಹೊರ ಬಂದಿದ್ದು ಅಪರಾಧ, ಚೀನಾದಲ್ಲಿ ಅಮೆರಿಕಾದ ವಿಜ್ಞಾನಿಗಳೇ ಹೆಚ್ಚು ಇದ್ದಾರೆ ಎಂದು ರಂಗಪ್ಪ ತಿಳಿಸಿದ್ದಾರೆ.
ಭಾರತ-ಚೀನಾ ಗಡಿ ವಿವಾದ ಹಿನ್ನೆಲೆ 500 ಕೋಟಿಯ ಪ್ರಾಜೆಕ್ಟ್ ಅರ್ಧಕ್ಕೆ ನಿಂತಿದೆ. ಕ್ಯಾನ್ಸರ್ ಸಂಬಂಧಿತ ಸಂಶೊಧನೆಗೆ ಚೀನಾ ದೇಶದ ಜೊತೆ ಒಡಂಬಡಿಕೆಯನ್ನು ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರ ಹೇಳಿದರೆ ನಾನು ಮುಂದೆಯೂ ಅದನ್ನು ಮಾಡುವುದಿಲ್ಲ. ಆದರೆ ಸರ್ಕಾರ ಯಾವ ಸಂದರ್ಭದಲ್ಲೂ ಈ ರೀತಿ ಮಾಡುವುದಿಲ್ಲ ಎಂದು ಕೆಎಸ್ ರಂಗಪ್ಪ ಮಾಹಿತಿ ನೀಡಿದ್ದಾರೆ.