ಮಡಿಕೇರಿ: ಎರಡನೇ ದಿನದ ಜನತಾ ಲಾಕ್‍ಡೌನ್‍ಗೆ ಕೊಡಗು ಸ್ತಬ್ಧವಾಗಿದ್ದು, ನಗರದ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ.
ಎರಡನೇ ದಿನದ ಜನತಾ ಲಾಕ್‍ಡೌನ್‍ಗೆ ರಾಜ್ಯದ ಪುಟ್ಟ ಜಿಲ್ಲೆ ಕೊಡಗಿನ ಜನರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮಂಜಿನ ನಗರಿ ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲೆಯ 5 ತಾಲೂಕುಗಳು ಸಂಪೂರ್ಣ ಸ್ತಬ್ಧವಾಗಿತ್ತು. ಬೆಳಗ್ಗೆ 10 ಗಂಟೆಯವರೆಗೆ ಕೆಲವೊಂದು ಅಗತ್ಯ ವಸ್ತುಗಳಿಗಾಗಿ ಕೆಲ ಜನ ಓಡಾಟ ನಡೆಸಿದರು. ಬಳಿಕ 10:30 ರ ಒಳಗೆ ಜನರು ಮನೆಯೊಳಗೆ ಲಾಕ್ ಆದರು.
ಕೊಡಗಿನ ಚೆಕ್‍ಪೋಸ್ಟ್ ಗಳಲ್ಲೂ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಅಲ್ಲದೆ ಹೆದ್ದಾರಿಗೆ ಬ್ಯಾರಿಕೇಡ್ ಹಾಕಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮಾಡಲಾಗಿದೆ. ಅನಗತ್ಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದು ಕೊಡಗು ಮೈಸೂರು ಗಡಿಯಲ್ಲಿ ಪೊಲೀಸರು ಅಲರ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಶಾಲನಗರದ ಚೆಕ್ ಪೋಸ್ಟ್ ನಲ್ಲಿ ಜಿಲ್ಲೆಯ ಒಳಗೆ ಮತ್ತು ಗಡಿಯಲ್ಲೂ ವಾಹನಗಳ ಸಂಚಾರಕ್ಕೆ ಬ್ರೇಕ್ ಜಿಲ್ಲೆಯಾದ್ಯಂತ ವಾಹನ ಜನ ಸಂಚಾರ ಸ್ತಬ್ಧವಾಗಿದೆ.
ಇಂದು ಮಡಿಕೇರಿ ನಗರದ ಪೊಲೀಸ್ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ದಿನ ನಿತ್ಯ ಸಾರ್ವಜನಿಕರ ಬದುಕಿನಲ್ಲಿ ಹೆಚ್ಚು ಕೆಲಸ ಮಾಡುವ ಪೊಲೀಸರು ಮನೆ ಕುಟುಂಬದ ಸದಸ್ಯರನ್ನು ಬಿಟ್ಟು ರಸ್ತೆ ಗಡಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೊರೊನಾ ವೈರಸ್ ಹರಡುವ ಭೀತಿಯಿಂದ ಇದೀಗ ಪೊಲೀಸರಿಗೆ ಕೊರೊನಾ ಟೆಸ್ಟ್ ಮಾಡಿಸಲು ಮುಂದಾಗಿದ್ದಾರೆ. ಇಂದು ನಗರದ ಒಟ್ಟು 120 ಪೊಲೀಸರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ವರದಿಗಾಗಿ ಪೊಲೀಸ್ ಸಿಬ್ಬಂದಿ ಕಾಯುತ್ತಿದ್ದಾರೆ.