– ಮಾಂಸದಂಗಡಿಗಳಿಗೆ ನಗರಸಭೆಯಿಂದ ಬೀಗ
ಮಡಿಕೇರಿ: ನಾಡಿನಾದ್ಯಂತ ಮಹಾವೀರ ಜಯಂತಿಯನ್ನು ಅಚರಣೆ ಮಾಡುತ್ತಿರುವ ವೇಳೆಯಲ್ಲಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ನಗರಸಭೆಯ ಸಿಬ್ಬಂದಿ ದಾಳಿ ನಡೆಸಿ ಅಂಗಡಿಗಳಿಗೆ ಬೀಗ ಹಾಕಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.
Advertisement
ವಾರಾಂತ್ಯದ ಲಾಕ್‍ಡೌನ್ ಇರುವುದರಿಂದ ಇಂದು ಮಾಂಸ ಪ್ರಿಯರು ಚಿಕನ್ ಹಾಗೂ ಮಟನ್ ಅಂಗಡಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಮಾಂಸ ಮಾರಾಟ ಮಾಡುತ್ತಿರುವ ವ್ಯಾಪಾರಸ್ಥರು ಎಂದಿನಂತೆ ಬೆಳಗ್ಗೆ ಅಂಗಡಿಗಳನ್ನು ತೆರೆದಿದ್ದರು. ಅದರೆ ಮಹಾವೀರ ಜಯಂತಿ ಇದ್ದರೂ ಅದರ ಅರಿವು ಇಲ್ಲದೆ ಎಂದಿನಂತೆ ವ್ಯಾಪಾರಿಗಳು ವ್ಯಾಪಾರ ಮಾಡಲು ಮುಂದಾಗಿದ್ದ ವೇಳೆಯಲ್ಲಿ ನಗರಸಭೆಯ ಸಿಬ್ಬಂದಿಗಳು ದಾಳಿ ನಡೆಸಿದರು. ನಗರದ ಮಾರ್ಕೆಟ್ ಕೊಯಿನೂರ್ ರಸ್ತೆ. ಪೋಸ್ಟ್ ಅಫೀಸ್ ರಸ್ತೆ ಸೇರಿದಂತೆ 10 ಕ್ಕೂ ಹೆಚ್ಚು ಅಂಗಡಿಗಳಿಗೆ ದಾಳಿ ನಡೆಸಿ ಬೀಗ ಹಾಕಿ, ಅಂಗಡಿ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇಂದು ಭಾನುವಾರ ಅಗಿರುವುದರಿಂದ ಮಾಂಸ ತೆಗೆದುಕೊಂಡು ಹೋಗುವುದಕ್ಕೆ ಬಂದ ನಾನ್‍ವೆಜ್ ಪ್ರಿಯರು ನಿರಾಸೆಯಿಂದ ಮನೆ ವಾಪಸ್ ಹೋದರು.
Advertisement
Advertisement
ಕೊಡಗು ಸ್ತಬ್ಧ: ವಿಕೇಂಡ್ ಬಂತು ಅಂದ್ರೆ ದಕ್ಷಿಣ ಕಾಶ್ಮೀರ ಕೊಡಗಿನ ಪ್ರವಾಸಿ ತಾಣಗಳನ್ನು ನೋಡುವುದಕ್ಕೆ ಜನ ತುಂಬಿ ತುಳುಕುತ್ತಿದರು. ಆದರೆ ರಾಜ್ಯದಾದ್ಯಂತ ವಿಕೇಂಡ್ ಲಾಕ್‍ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎರಡನೇ ದಿನವಾದ ಭಾನುವಾರ ಕೊಡಗು ಸಂಪೂರ್ಣ ಸ್ಥಬ್ಧವಾಗಿದೆ. ಯಾವುದೇ ರಸ್ತೆಗಳಲ್ಲೂ ಒಂದೇ ಒಂದು ವಾಹನಗಳ ಓಡಾಟವಿಲ್ಲ. ಪ್ರವಾಸಿಗರ ಮಾತಿರಲಿ, ಸ್ಥಳೀಯರು ಸೇರಿದಂತೆ ವಾಹನ ಚಾಲಕರು ಕೂಡ ಮನೆಬಿಟ್ಟು ಹೊರಗೆ ಕಾಲಿಡಲಿಲ್ಲ. ಹೀಗಾಗಿ ಭಾನುವಾರದಂದು ಪ್ರವಾಸಿಗರ ಹಾಟ್ ಸ್ಪಾಟ್ ಎಂದು ಪ್ರಸಿದ್ಧಿಯಾಗಿರುವ ಮಡಿಕೇರಿ ಸಂಪೂರ್ಣ ಮೌನಕ್ಕೆ ಜಾರಿತ್ತು.
Advertisement
ನಿನ್ನೆ ಕೆಲ ಸಾರ್ವಜನಿಕರು ಕುತೂಹಲಕ್ಕೆಂದು ನಗರ ಪ್ರದೇಶಗಳಿಗೆ ಬಂದು ವೀಕ್ಷಣೆ ಮಾಡಿ ಹೋಗುತ್ತಿದ್ದರು. ಅದರೆ ಇಂದು ಒಬ್ಬರೆ ಒಬ್ಬರು ರಸ್ತೆಗೆ ಇಳಿಯಲಿಲ್ಲ. ಬೆಳಗ್ಗೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋದ ಸಾರ್ವಜನಿಕರು ಮತ್ತೆ ಮನೆಯಿಂದ ಹೊರ ಬಾರದೆ ಇರುವುದರಿಂದ ರಸ್ತೆಗಳೆಲ್ಲ. ಸಂಪೂರ್ಣವಾಗಿ ಖಾಲಿ ಖಾಲಿ ಯಾಗಿತ್ತು. ಕೊಡಗಿನ ವಾಣಿಜ್ಯ ನಗರಿ ಕುಶಾಲನಗರ. ಸೋಮವಾರಪೇಟೆ. ವಿರಾಜಪೇಟೆ. ಪೊನ್ನಂಪೇಟೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಂಪೂರ್ಣ ವಾರಾಂತ್ಯದ ಲಾಕ್‍ಡೌನ್ ಯಶಸ್ವಿಯಾಗಿದೆ.