– ದ್ವೇಷ ಸಾಧನೆಗೆ ಕಂಡಿದ್ದು 6ರ ಹುಡುಗ
ಮುಂಬೈ: ಮನೆಯಲ್ಲಿ ಎಮ್ಮೆ ಸತ್ತಿದ್ದಕ್ಕೆ ಪಕ್ಕದ ಮನೆಯ ಬಾಲಕನನ್ನು ಹೊಡೆದು ಕೊಂದಿರುವ ದಂಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈನ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
ರೋಹಿದಾಸ್ ಸಪ್ಕಲ್ ಮತ್ತು ಆತನ ಪತ್ನಿ ದೇವೀಬಾಯಿಯನ್ನು ಬಂಧಿಸಲಾಗಿದೆ. ಈ ದಂಪತಿ ಸಾಕಿದ್ದ ಎಮ್ಮೆ ಸಾವನ್ನಪ್ಪಿತ್ತು. ಈ ವಿಚಾರದಿಂದ ಮನನೊಂದ ದಂಪತಿ ನಮ್ಮ ಎಮ್ಮೆಯನ್ನು ಪಕ್ಕದ ಮನೆಯವರು ಮಾಟ ಮಂತ್ರ ಮಾಡಿಕೊಂದಿದ್ದಾರೆ ಎಂದು ಅವರ ಮನೆಯ ಬಾಲಕನನ್ನು ಕೊಲೆ ಮಾಡಿದ್ದಾರೆ.
ಮನೆಯಲ್ಲಿ ಸಾಕಿದ್ದ ಎಮ್ಮೆ ಯಾವುದೋ ಕಾಯಿಲೆಯಿಂದ ಸಾವನ್ನಪ್ಪಿದೆ. ಆಗ ಎಮ್ಮೆ ಮಾಲೀಕರು ಎಮ್ಮೆಗೆ ಮಾಟ ಮಂತ್ರ ಮಾಡಿದ್ದರಿಂದಲೇ ಸಾವನ್ನಪ್ಪಿದೆ ಎಂದು ಭಾವಿಸಿದ್ದಾರೆ. ಎಮ್ಮೆ ಸಾಕಿದ್ದ ಮಾಲೀಕರಿಗೆ ಊರಲ್ಲಿ ಇರುವ ಒಂದು ಕುಟುಂಬಕ್ಕೆ ಮೊದಲಿನಿಂದಲು ಆಗುತ್ತಿರಲ್ಲಿಲ್ಲ. ಅವರೇ ಮಾಟ ಮಂತ್ರ ಮಾಡಿ ನಮ್ಮ ಎಮ್ಮೆಯನ್ನು ಕೊಂದಿದ್ದಾರೆ ಎಂದು ದ್ವೇಷ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಪಕ್ಕದ ಮನೆಯವರ ಮೇಲೆ ದ್ವೇಷ ಸಾಧನೆಗಾಗಿ ಕಾದಿದ್ದ ದಂಪತಿಗಳ ಕಣ್ಣಿಗೆ ಬಿದ್ದಿದ್ದು ಆ ಮನೆಯ 6 ವರ್ಷದ ಬಾಲಕ.
ಒಂದು ದಿನ ಅಪ್ರಾಪ್ತ ಬಾಲಕ ಬೀದಿಯಲ್ಲಿ ಆಟವಾಡುತ್ತಿದ್ದನು. ಎಮ್ಮ ಮಾಲೀಕರಾದ ದಂಪತಿ ಬಾಲಕನನ್ನು ಅಪಹರಿಸಿ ಬಾಲಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಈ ಕೊಲೆ ಯಾರಿಗೂ ತಿಳಿಯಬಾರದು ಎಂದು ನಿರ್ಜನ ಪ್ರದೇಶದಲ್ಲಿ ಬಾಲಕನ ಶವವನ್ನು ಎಸೆದು ಮುಗ್ಧರಂತೆ ಊರಲ್ಲಿ ಓಡಾಡಿಕೊಂಡು ಇದ್ದರು. ಬಾಲಕನ ಶವ ಪೊಲೀಸರಿಗೆ ಸಿಕ್ಕ ಬಳಿಕ ತನಿಖೆಯನ್ನು ಚುರುಕುಗೊಳಿಸಲಾಗಿತ್ತು. ತನಿಖೆ ವೇಳೆ ದಂಪತಿ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.