ಪುಣೆ: ದೇಶೀಯ ಮಾರುಕಟ್ಟೆಗೆ ಎಪ್ರಿಲಿಯಾ ಎಸ್ಎಕ್ಸ್ಆರ್ 160 ಮ್ಯಾಕ್ಸಿ-ಸ್ಕೂಟರ್ ಬಿಡುಗಡೆಯಾಗಿದೆ. ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ 160.03 ಸಿಸಿ , ಮೂರು ವಾಲ್ವ್ , ಫ್ಯೂಯೆಲ್ ಇಂಜೆಕ್ಟ್ ಎಂಜಿನ್ ಹೊಂದಿದ್ದು 7,600 ಆರ್ಪಿಎಂನಲ್ಲಿ 11 ಹೆಚ್ಪಿ ಪವರ್ ಮತ್ತು 6,000 ಆರ್ಪಿಎಂನಲ್ಲಿ 11.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಎಪ್ರಿಲಿಯಾ ಎಸ್ಎಕ್ಸ್ಆರ್ 160 ಮ್ಯಾಕ್ಸಿ-ಸ್ಕೂಟರಿನ ಪುಣೆ ಎಕ್ಸ್-ಶೋರೂಮ್ ಬೆಲೆ 1.26 ಲಕ್ಷ ರೂ. ಇದೆ
Advertisement
Advertisement
ಹೊಸ ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್ಎಲ್ಗಳು, ಸ್ಪ್ಲಿಟ್ ಎಲ್ಇಡಿ ಹೆಡ್ಲ್ಯಾಂಪ್, ಸ್ಕೂಟರ್ ಮುಂಭಾಗದಲ್ಲಿ ವಿಂಡ್ಸ್ಕ್ರೀನ್, ದೊಡ್ಡ ಸಿಂಗಲ್-ಪೀಸ್ ಸೀಟ್, ಎಲ್ಇಡಿ ಟೈಲ್ ಲೈಟ್ಸ್ ಮತ್ತು ಇತರೆ ವೈಶಿಷ್ಟ್ಯಗಳನ್ನು ಹೊಂದಿದೆ.
Advertisement
ಎಸ್ಎಕ್ಸ್ಆರ್ 160ರ ಮುಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 140 ಎಂಎಂ ಡ್ರಮ್ ಬ್ರೇಕ್ನೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ವ್ಯವಸ್ಥೆಯನ್ನು ಪಡೆಯುತ್ತದೆ. ಮುಂಭಾಗ ಮತ್ತು ಹಿಂಭಾಗದ ಟೈರ್ಗಳು ಒಂದೇ ಗಾತ್ರದಲ್ಲಿದ್ದು (120 / 70-12) ಕುತೂಹಲಕಾರಿಯಾಗಿದೆ. ಎಸ್ಎಕ್ಸ್ಆರ್ 7-ಲೀಟರ್ ಇಂಧನ ಟ್ಯಾಂಕ್ ಹೊಂದಿದೆ.
Advertisement
ಎಪ್ರಿಲಿಯಾ ಎಸ್ಎಕ್ಸ್ಆರ್ 160 ಬಹುಕ್ರಿಯಾತ್ಮಕ ಪೂರ್ಣ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ನೊಂದಿಗೆ ಬರುತ್ತದೆ. ಇದು ಮೈಲೇಜ್ ಸೂಚಕ, ಆರ್ಪಿಎಂ ಮೀಟರ್, ಇಂಧನ ಎಷ್ಟಿದೆ ಮತ್ತು ಇತರ ಮಾಹಿತಿಯನ್ನು ತೋರಿಸುತ್ತದೆ. ಎಸ್ಎಕ್ಸ್ಆರ್ 160 ಐಚ್ಚಿಕ ಸಂಪರ್ಕಿತ ತಂತ್ರಜ್ಞಾನದೊಂದಿಗೆ ಬರುತ್ತದೆ. ಸವಾರರು ತಮ್ಮ ಸ್ಮಾರ್ಟ್ಫೋನ್ಗಳನ್ನು ಸ್ಕೂಟರ್ಗೆ ಸಂಪರ್ಕಿಸಲು ಇದು ಅನುವು ಮಾಡಿಕೊಡುತ್ತದೆ.