ರಾಯಚೂರು: ಎಪಿಎಲ್ ಪಡಿತರ ಕಾರ್ಡ್‍ನ್ನು ಬಿಪಿಎಲ್‍ಗೆ ಪರಿವರ್ತಿಸುತ್ತಿದ್ದ ಆರೋಪಿಗಳನ್ನು ಸಿಂಧನೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಸಿಂಧನೂರು ನಗರದ ಕಂಪ್ಯೂಟರ್ ಕೇಂದ್ರದಲ್ಲಿ ಘಟನೆ ನಡೆದಿದ್ದು, ಎಪಿಎಲ್ ಕಾರ್ಡ್ ಅನ್ನು ಬಿಪಿಎಲ್ ಆಗಿ ಮಾಡುತ್ತಿದ್ದ ಕಂಪ್ಯೂಟರ್ ಆಪರೇಟರ್ ಬಸವರಾಜ್ ಹಾಗೂ ಕಾರ್ಡ್ ಹೊಂದಿದ್ದ ಮಹಿಳೆ ಪತಿ ಬಸಪ್ಪ ಬಂಧಿತ ಆರೋಪಿಗಳು. ಬಾದರ್ಲಿ ಗ್ರಾಮದ ಹುಲಿಗೆಮ್ಮಳ ಎಪಿಎಲ್ ಕಾರ್ಡನ್ನ ಬಿಪಿಎಲ್ ಗೆ ಪರಿವರ್ತಿಸಲಾಗಿತ್ತು. ಈ ಕುರಿತು ಸಿಂಧನೂರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಹಾರ ನಿರೀಕ್ಷಕ ಅಮರೇಶ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ತಪ್ಪಿನಲ್ಲಿ ಭಾಗಿಯಾದ ಎಪಿಎಲ್ ಕಾರ್ಡದಾರಳಾದ ಹುಲಿಗೆಮ್ಮ ಹಾಗೂ ಪತಿ ಬಸಪ್ಪ ವಿರುದ್ಧವೂ ದೂರು ದಾಖಲಾಗಿದೆ. ಎಪಿಎಲ್ ಕಾರ್ಡ್ ಅನ್ನು fcjsdit ಲಾಗಿನ್ ನಿಂದ ಬಿಪಿಎಲ್ ಕಾರ್ಡ್ ಆಗಿ ಆರೋಪಿಗಳು ಪರಿವರ್ತಿಸಿದ್ದಾರೆ. ಪರಿವರ್ತನೆಯಾದ ಕಾರ್ಡ್‍ಗಳ ಬಗ್ಗೆ ತನಿಖೆ ಮುಂದುವರೆದಿದೆ.