– ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಸಾವು
ಕೋಲಾರ: ಎದೆಯುರಿ ಎಂದು ಆಸ್ಪತ್ರೆಗೆ ಬಂದ ವ್ಯಕ್ತಿಗೆ ನರ್ಸ್ ಒಬ್ಬರು ವೈದ್ಯರಿಗೆ ಕರೆ ಮಾಡಿ ಇಂಜೆಕ್ಷನ್ ಕೊಟ್ಟಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪವೊಂದು ಆಸ್ಪತ್ರೆ ವಿರುದ್ಧ ಕೇಳಿಬಂದಿದೆ.
Advertisement
ಮೃತನನ್ನು ಕದಿರಪ್ಪ(38) ಎಂದು ಗುರುತಿಸಲಾಗಿದ್ದು, ಕೋಲಾರ ತಾಲೂಕು ಸುಗುಟೂರು ಗ್ರಾಮದ ನಿವಾಸಿ. ಕದೀರಪ್ಪ ಇಂದು ಬೆಳ್ಳಂಬೆಳಗ್ಗೆ ತನ್ನ ಸ್ನೇಹಿತರ ಜೊತೆಗೆ ಟೀ ಕುಡಿಯುತ್ತಿದ್ದ ಸಂದರ್ಭದಲ್ಲಿ ಎದೆ ಉರಿ ಕಾಣಿಸಿಕೊಂಡಿದೆ. ಕೂಡಲೇ ಸ್ನೇಹಿತರು ಕದೀರಪ್ಪರನ್ನು ನಗರದ ಶ್ರೇಯಾ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
Advertisement
Advertisement
ಇಂದು ಬಂದ್ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಜನರು ಅಷ್ಟೇನೂ ಇರಲಿಲ್ಲ. ಜೊತೆಗೆ ಆಸ್ಪತ್ರೆಯಲ್ಲಿ ವೈದ್ಯರು ಕೂಡ ಇರಲಿಲ್ಲ. ಆದರೆ ಆಸ್ಪತ್ರೆಯಲ್ಲಿದ್ದ ನರ್ಸ್ ಬಂದು ಕದಿರಪ್ಪನ ಅನಾರೋಗ್ಯದ ಬಗ್ಗೆ ವಿಚಾರಿಸಿ ವೈದ್ಯರಿಗೆ ಫೋನ್ ಮಾಡಿದ್ದಾರೆ. ನಂತರ ಅವರು ಹೇಳಿದಂತೆ ಒಂದು ಇಂಜೆಕ್ಷನ್ ಕೊಟ್ಟಿದ್ದಾರೆ. ಇದಾದ ಬಳಿಕ ಕದಿರಪ್ಪ ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದ ಬಳಿಕ ಆಸ್ಪತ್ರೆಯ ಸಿಬ್ಬಂದಿ ಇಲ್ಲಿ ಆಗೋದಿಲ್ಲ. ನೀವು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಅಂಬುಲೆನ್ಸ್‍ಗೆ ಹೇಳಿದ್ದಾರೆ. ಆದರೆ ಕದಿರಪ್ಪನನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.
Advertisement
ಕೇವಲ ಎದೆ ಉರಿ ಎಂದು ಬಂದವನಿಗೆ ಆಸ್ಪತ್ರೆಯ ಸಿಬ್ಬಂದಿ ನೀಡಿದ ಇಂಜೆಕ್ಷನ್‍ನಿಂದಲೇ ಕದಿರಪ್ಪ ಮೃತಪಟ್ಟಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಮೃತನ ಸಂಬಂಧಿಕರು ಹಾಗೂ ಸ್ನೇಹಿತರು ಶ್ರೇಯ ಆಸ್ಪತ್ರೆಗೆ ಬಂದು ವಿಚಾರಿಸಿದ್ದಾರೆ. ಈ ವೇಳೆ ಸಿಬ್ಬಂದಿ ತಮಗೇನು ಸಂಬಂಧವೇ ಇಲ್ಲ ಎಂಬ ಹಾರಿಕೆ ಉತ್ತರ ಕೊಟ್ಟರು. ಇದರಿಂದ ರೊಚ್ಚಿದ್ದ ಜನ ಆಸ್ಪತ್ರೆಯ ಕಿಟಕಿ ಗಾಜು ಒಡೆದು ಆಕ್ರೋಶ ಹೊರ ಹಾಕಿದ್ರು. ಜೊತೆಗೆ ಕೆಲವು ದಲಿತ ಸಂಘಟನೆಗಳ ಮುಖಂಡರು ಕೈಜೋಡಿಸಿ ಆಸ್ಪತ್ರೆ ಎದುರು ಪ್ರತಿಭಟನೆ ಮಾಡಿದ್ರು.
ಸಾವಿಗೆ ಕಾರಣವಾದ ಖಾಸಗಿ ಆಸ್ಪತ್ರೆಗೆ ಬೀಗ ಹಾಕಬೇಕು. ಮೃತ ಕುಟುಂಬಕ್ಕೆ ಆಸ್ಪತ್ರೆಯವರು ಪರಿಹಾರ ನೀಡುವಂತೆ ಆಗ್ರಹ ಮಾಡಿದರು. ಈ ವೇಳೆ ಸ್ಥಳಕ್ಕೆ ಬಂದ ಕೋಲಾರ ನಗರ ಠಾಣಾ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನ ಮಾಡಿದರೂ ಅದು ಪ್ರಯೋಜನವಾಗಲಿಲ್ಲ. ನಂತರ ಸ್ಥಳಕ್ಕೆ ಬಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯ್ ಕುಮಾರ್ ಹಾಗೂ ಖಾಸಗಿ ಆಸ್ಪತ್ರೆಗಳ ಸಂಘದ ಪದಾಧಿಕಾರಿಗಳು ಹಾಗೂ ಕುಟುಂಬಸ್ಥರ ಜೊತೆಗೆ ಮಾತುಕಥೆ ನಡೆಸಲಾಯಿತು. ಮೃತ ವ್ಯಕ್ತಿಗೆ ನೀಡಲಾಗಿದ್ದ ಇಂಜೆಕ್ಷನ್ ಪರಿಶೀಲನೆ ನಡೆಸಿ ಮೃತನ ಮರಣೋತ್ತರ ಪರೀಕ್ಷೆ ನಡೆಸಿ, ವರದಿ ಬಂದ ನಂತರ ಆಸ್ಪತ್ರೆಯ ಸಿಬ್ಬಂದಿ ತಪ್ಪಿದ್ದರೆ ಕ್ರಮ ಕೈಗೊಳ್ಳುವುದಾಗಿ ಡಿಹೆಚ್‍ಓ ತಿಳಿಸಿದ್ರು.