ಹಾವೇರಿ: ಕಳೆದ ಮೂರು ದಿನಗಳ ಹಿಂದೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಣನತಂಬಗಿ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿದೆ.
ಮೃತ ಯುವಕರನ್ನು ಜಗದೀಶ ಅಣ್ಣೇರ (24), ಬೆಟ್ಟಪ್ಪ ಮಿಳ್ಳಿ (23) ಎಂದು ಗುರುತಿಸಲಾಗಿದೆ. ಇಬ್ಬರು ಯುವಕರ ಮೃತದೇಹ ಘಟನೆ ನಡೆದ ಸ್ಥಳದಿಂದ ಎರಡ್ಮೂರು ಕಿ.ಮೀ ದೂರವಿರುವ ಸೋಮಲಾಪುರ ಗ್ರಾಮದ ಬಳಿ ಪತ್ತೆಯಾಗಿದೆ.
ಮೂರು ದಿನಗಳ ಹಿಂದೆ ಎತ್ತಿನ ಮೈ ತೊಳೆಯಲು ನದಿಗೆ ತೆರಳಿದ್ದ ವೇಳೆ ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಎರಡು ಎತ್ತುಗಳ ಮೃತದೇಹ ಅದೇ ದಿನ ಪತ್ತೆಯಾಗಿದ್ದವು. ಇಂದು ಇಬ್ಬರು ಯುವಕರ ಮೃತದೇಹ ಪತ್ತೆಯಾಗಿವೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.