ಮಂಡ್ಯ: ಸ್ನೇಹಿತರಿಬ್ಬರು ಒಟ್ಟಿಗೆ ಎಣ್ಣೆ ಪಾರ್ಟಿ ನಂತರ ಇಬ್ಬರ ಮಧ್ಯೆ ಜಗಳ ಉಂಟಾಗಿ ಕೊನೆಗೆ ಕೊಲೆಯ ಮೂಲಕ ಜಗಳ ಅಂತ್ಯವಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಚೆನ್ನನಹಳ್ಳಿ ಗ್ರಾಮದ ಕುಮಾರ್(30) ಮೃತ ಯುವಕ. ಅದೇ ಗ್ರಾಮದ ಮಹದೇವು ಎಂಬ ಸ್ನೇಹಿತ ಕುಮಾರ್‌ನನ್ನು ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ನಿನ್ನೆ ರಾತ್ರಿ ಕುಮಾರ್ ಹಾಗೂ ಮಹದೇವು ಇಬ್ಬರು ಮದ್ಯ ಸೇವನೆ ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಈ ವೇಳೆ ಮಹದೇವು ನಮ್ಮ ಮನೆಯಲ್ಲಿ ಯಾರೂ ಇಲ್ಲ, ಇಲ್ಲೇ ಪಾರ್ಟಿ ಮಾಡೋಣ ಬಾ ಎಂದು ಕುಮಾರನನ್ನು ಮನೆಗೆ ಕರೆದೊಯ್ಯುತ್ತಾನೆ.
ನಂತರ ಮಹದೇವು ಹಾಗೂ ಕುಮಾರ್ ಇಬ್ಬರು ಚೆನ್ನಾಗಿ ಮದ್ಯ ಸೇವನೆ ಮಾಡಿದ್ದಾರೆ. ಬಳಿಕ ಯಾವುದೋ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ಉಂಟಾಗುತ್ತದೆ. ಈ ವೇಳೆ ಇಬ್ಬರ ನಡುವಿನ ಜಗಳ ತಾರಕಕ್ಕೆ ಏರುತ್ತದೆ. ನಂತರ ಮಹದೇವು ಕುಮಾರ್‌ಗೆ ಬಾಟಲಿ ಹಾಗೂ ರಾಡಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸದ್ಯ ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೋವಿಡ್ ರೂಲ್ಸ್ ಬ್ರೇಕ್ ಮಾಡಿ ಪಾರ್ಟಿ – 37 ಮಂದಿ ಬಂಧನ