– ಕಿಲೋ ಮೀಟರ್‌ಗಟ್ಟಲೇ ದಿನಸಿಗಾಗಿ ಕ್ಯೂ
ಬೆಂಗಳೂರು: ಕೊರೊನಾ ಭಯದಿಂದ ಈಗಾಗಲೇ ಜನರು ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ. ಇತ್ತ ನಾಳೆ ಸಂಜೆಯಿಂದ ಒಂದು ವಾರ ಲಾಕ್‍ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮದ್ಯದಂಗಡಿ, ದಿನಸಿ, ಬ್ಯಾಂಕ್ ಮತ್ತು ಎಟಿಎಂ ಮುಂದೆ ನೂರಾರು ಜನರು ಕ್ಯೂ ನಿಂತಿದ್ದಾರೆ.
ಮಂಗಳವಾರ ರಾತ್ರಿಯಿಂದ ಲಾಕ್‍ಡೌನ್ ಜಾರಿಯಾಗಲಿದೆ. ಹೀಗಾಗಿ ಇಂದೇ ಎಣ್ಣೆಗಾಗಿ ಮದ್ಯ ಪ್ರಿಯರು ಮುಗಿಬಿದ್ದಿದ್ದಾರೆ. ಹೋಲ್ ಸೇಲ್ ಅಂಗಡಿಗಳ ಮುಂದೆ ಎಣ್ಣೆಗಾಗಿ ಜನ ಕ್ಯೂ ನಿಂತಿದ್ದಾರೆ. ರಾಜಾಜಿನಗರದ ವಿಕ್ಟೋರಿಯಾ ವೈನ್ಸ್ ಮುಂಭಾಗ ಜನರು ಕ್ಯೂ ನಿಂತಿದ್ದು, ವಾರಕ್ಕಾಗುವಷ್ಟು ಎಣ್ಣೆ ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ. ಬಾಸ್ಕೆಟ್, ಬಾಕ್ಸ್, ಬ್ಯಾಗ್‍ಗಳಲ್ಲಿ ಎಣ್ಣೆ ತುಂಬಿಕೊಂಡು ಹೋಗುತ್ತಿದ್ದಾರೆ.
Advertisement
Advertisement
ಲಾಕ್‍ಡೌನ್ ವಾರ ಇರುತ್ತೊ, ತಿಂಗಳು ಇರುತ್ತೊ ಗೊತ್ತಿಲ್ಲ. ಹಣ ಇರುವವರು ಮದ್ಯ ಖರೀದಿ ಮಾಡಿ ಇಟ್ಟಿಕೊಳ್ಳುತ್ತಾರೆ. ಆ ಮೇಲೆ ಬ್ಲಾಕ್‍ನಲ್ಲಿ ಎಣ್ಣೆಯನ್ನು ಮಾರಿ ಹಣ ಮಾಡುತ್ತಾರೆ. ಮೊದಲೇ ಮೂರ್ನಾಲ್ಕು ತಿಂಗಳಿಂದ ಕೆಲಸ ಇಲ್ಲ. ಹೀಗಾಗಿ ಬ್ಲಾಕ್‍ನಲ್ಲಿ ಮದ್ಯ ಖರೀದಿ ಮಾಡಲು ಸಾಧ್ಯವಿಲ್ಲ. ಕಳೆದ ಲಾಕ್‍ಡೌನ್‍ನಲ್ಲಿ ಹಿಂಗೆ ಮಾಡಿದ್ದರು. ಹೀಗಾಗಿ ಎಷ್ಟು ಬೇಕೋ ಅಷ್ಟು ಸ್ಟಾಕ್ ಮಾಡಿಕೊಳ್ಳುತ್ತಿದ್ದೀವಿ ಎಂದು ಮದ್ಯ ಖರೀದಿಗೆ ಬಂದ ಗ್ರಾಹಕರು ಹೇಳಿದ್ದಾರೆ.
Advertisement
Advertisement
ದಿನಸಿಗಾಗಿ ಜನರ ಕ್ಯೂ:
ಇತ್ತ ಜನರ ಲಾಕ್‍ಡೌನ್ ಭಯದಿಂದ ದಿನಸಿ ಸ್ಟಾಕ್ ಮಾಡಿಕೊಳ್ಳಲು ಮುಂದಾಗಿದ್ದು, ಅತ್ಯಗತ್ಯ ದಿನಸಿ ಖರೀದಿಗಾಗಿ ಜನರು ಕ್ಯೂನಲ್ಲಿ ನಿಂತಿದ್ದಾರೆ. ಟೋಲ್ ಗೇಟ್ ಡಿ ಮಾರ್ಟ್ ಮುಂದೆ ಕಿಲೋ ಮೀಟರ್‌ಗಟ್ಟಲೇ ದಿನಸಿಗಾಗಿ ಜನರು ಕ್ಯೂ ನಿಂತಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜನರು ದಿನಸಿ ಖರೀದಿ ಮಾಡುತ್ತಿದ್ದಾರೆ.
ಇನ್ನೂ ಒಂದು ವಾರ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬ್ಯಾಂಕ್ ಮತ್ತು ಎಟಿಎಂಗಳ ಮುಂಭಾಗ ಫುಲ್ ಕ್ಯೂ ನಿಂತಿದ್ದಾರೆ. ಬನಶಂಕರಿ ಬ್ಯಾಂಕ್‍ನ ಮುಂಭಾಗ ಜನರು ನಿಂತಿದ್ದು, ಲಾಕ್‍ಡೌನ್ ಇರುವುದರಿಂದ ಬ್ಯಾಂಕ್‍ಗಳಲ್ಲಿ ತುರ್ತು ಕಾರ್ಯ ಮುಗಿಸಿಕೊಳ್ಳುತ್ತಿದ್ದಾರೆ. ಇತ್ತ ಎಟಿಎಂಗಳ ಮುಂದೆಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಜನರು ಸಾಲಾಗಿ ನಿಂತಿದ್ದಾರೆ.