ಮಡಿಕೇರಿ: ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡರೆ ಎಣ್ಣೆ ಕುಡಿಯೋದಕ್ಕೆ ಕಂಟಕವಾಗುತ್ತದೆ ಎಂದು ಕೊಡಗಿನಲ್ಲಿ ಕೊರೊನಾ ವಾರಿಯರ್ಸ್ ವ್ಯಾಕ್ಸಿನ್ ಪಡೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಸತ್ಯ ಇದೀಗ ಬಹಿರಂಗವಾಗಿದೆ.
Advertisement
ಕೊರೊನಾ ಮಹಾಮಾರಿಯನ್ನು ಬಗ್ಗು ಬಡಿಯಲು ಈಗಾಗಲೇ ಕೋವ್ಯಾಕ್ಸಿನ್ ಸಿದ್ಧಗೊಳಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಫ್ರಂಟ್ ಲೈನ್ ವರ್ಕರ್ಸ್ ಗೆ ವಿತರಣೆ ಮಾಡಲಾಗುತ್ತಿದೆ. ಆದರೆ ವ್ಯಾಕ್ಸಿನ್ ಪಡೆದುಕೊಂಡರೆ ಎಣ್ಣೆಕುಡಿಯಲು ಸಾಧ್ಯವಾಗುವುದಿಲ್ಲ ಎಂದು ಅದನ್ನು ಪಡೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
Advertisement
ಕೊಡಗು ಜಿಲ್ಲೆಯಲ್ಲಿ ಪೋಲೀಸ್, ಹೋಂಗಾಡ್ರ್ಸ್ ಸೇರಿದಂತೆ ಫ್ರಂಟ್ ಲೈನ್ ನಲ್ಲಿ ಕೆಲಸ ಮಾಡುವ 6 ಸಾವಿರ ಸಿಬ್ಬಂದಿ ಇದ್ದಾರೆ. ಇವರಲ್ಲಿ ಕೇವಲ 1800 ಜನರು ಮಾತ್ರವೇ ಇದುವರೆಗೆ ವ್ಯಾಕ್ಸಿನ್ ಪಡೆದಿದ್ದಾರೆ. ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಹಲವು ಬಾರಿ ಹೇಳಿದರೂ ವ್ಯಾಕ್ಸಿನ್ ಪಡೆದುಕೊಳ್ಳಲು ಫ್ರಂಟ್ ಲೈನ್ ವರ್ಕರ್ಸ್ ಮುಂದಾಗುತ್ತಿಲ್ಲ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ. ವ್ಯಾಕ್ಸಿನ್ ಪಡೆದುಕೊಳ್ಳುವುದಕ್ಕೆ ಒತ್ತಾಯ ಮಾಡುವಂತಿಲ್ಲ. ಹೀಗಾಗಿ ಫ್ರಂಟ್ ಲೈನ್ ವರ್ಕರ್ಸ್ ಕೂಡ ಸ್ವಯಂಪ್ರೇರಿತವಾಗಿ ವ್ಯಾಕ್ಸಿನ್ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ.
Advertisement
Advertisement
ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಶೇ.50 ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಫ್ರಂಟ್ ಲೈನ್ ವರ್ಕ್‍ರ್ಸ್ ವ್ಯಾಕ್ಸಿನ್ ಪಡೆದುಕೊಂಡಿಲ್ಲ ಎಂದಿದ್ದಾರೆ. ಕಾರಣವೇನು ಎಂದು ಕೇಳಿದರೆ ನಮ್ಮ ವೈಯಕ್ತಿಕ ಕಾರಣದಿಂದ ವ್ಯಾಕ್ಸಿನ್ ಪಡೆದುಕೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಡಿಎಚ್‍ಓ ಹೇಳಿದ್ದಾರೆ. ಆರೋಗ್ಯ ಇಲಾಖೆಯಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಕ್ಸಿನ್ ವಿತರಣೆಯ ಗುರಿ ತಲುಪಿಲ್ಲ. ಇಲ್ಲಿ ಕೂಡ ಶೇ.65 ರಷ್ಟು ಸಿಬ್ಬಂದಿ ಮಾತ್ರ ವ್ಯಾಕ್ಸಿನ್ ಪಡೆದುಕೊಂಡದ್ದಾರೆ. ಉಳಿದವರು ವ್ಯಾಕ್ಸಿನ್ ಪಡೆದುಕೊಂಡಿಲ್ಲ ಎನ್ನೋದು ಸ್ವತಃ ಆರೋಗ್ಯ ಇಲಾಖೆ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.
ಕೊಡಗಿನಲ್ಲಿ ಸಹಜವಾಗಿ ಮದ್ಯಪ್ರಿಯರ ಸಂಖ್ಯೆ ಹೆಚ್ಚಾಗಿದ್ದು, ವ್ಯಾಕ್ಸಿನ್ ಪಡೆದುಕೊಳ್ಳುವುದರ ಮೇಲೆ ಇದು ಪರಿಣಾಮ ಬೀರಿದೆ. ಆದರೆ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಫ್ರಂಟ್ ಲೈನ್ ವರ್ಕರ್ಸ್ ವ್ಯಾಕ್ಸಿನ್ ಪಡೆದುಕೊಳ್ಳುವುದಕ್ಕೆ ಹಿಂದೇಟು ಹಾಕಿದರೆ, ಜನಸಾಮಾನ್ಯರು ಹೇಗೆ ವ್ಯಾಕ್ಸಿನ್ ಪಡೆದುಕೊಳ್ಳುತ್ತಾರೆ ಎನ್ನೋದು ಸಾಮಾಜಿಕ ಕಾರ್ಯಕರ್ತರ ಪ್ರಶ್ನೆಯಾಗಿದೆ.