ಬೆಂಗಳೂರು: ಕೆಎಸ್ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಅವರ ಕೋವಿಡ್ 19 ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
ಕೆಎಸ್ಆರ್ ಪಿ ಪಡೆಯಲ್ಲಿ ಹಲವು ಸಿಬ್ಬಂದಿಗೆ ಸೋಂಕು ಹರಡಿದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಆತ್ಮಸ್ಥೈರ್ಯ ಹೆಚ್ಚಿಸಲು ಅಲೋಕ್ ಕುಮಾರ್ ಹಲವು ಜಿಲ್ಲೆಗಳಿಗೆ ಭೇಟಿದ್ದರು.
Advertisement
Advertisement
ಕೆಎಸ್ಆರ್‌ಪಿ ಸಿಬ್ಬಂದಿ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಇದೇ 25 ರಂದು ಮಧ್ಯಾಹ್ನ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಇಂದು ಬೆಳಗ್ಗೆ ಫಲಿತಾಂಶ ನೆಗೆಟಿವ್ ಬಂದಿದೆ.
Advertisement
ಕಳೆದ ವಾರ ಬೆಂಗಳೂರಿನಲ್ಲಿ ಪೊಲೀಸರು ಮಹಾಮಾರಿ ವಿರುದ್ಧ ಹೋರಾಡಲು ಸಹಾಯವಾಗುವಂತೆ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಸಿಬ್ಬಂದಿಗೆ ಯೋಗ, ಪ್ರಾಣಯಾಮದ ಬಗ್ಗೆ ಪಾಠ ಮಾಡಿದ್ದರು.
Advertisement
ನಾಲ್ಕು ಬೆಟಾಲಿಯನ್ ಕ್ವಾರಂಟೈನ್ ಸೆಂಟರ್ ನಲ್ಲಿ ಅಲೋಕ್ ಕುಮಾರ್ ಯೋಗ ಹೇಳಿಕೊಟ್ಟಿದ್ದು, ಕಪಾಲಬಾತಿ, ಭಸ್ತ್ರಿಕ ಪ್ರಾಣಾಯಾಮ ಮಾಡುವಂತೆ ಸೂಚಿಸಿದ್ದರು. ಅಲ್ಲದೆ ಸ್ವತಃ ತಾವೇ ಯೋಗ, ಪ್ರಾಣಾಯಾಮ ಮಾಡಿ ತೋರಿಸುವ ಮೂಲಕ ಸಿಬ್ಬಂದಿ ಕುರಿತು ಕಾಳಜಿ ತೋರಿದ್ದಾರೆ.
ಕ್ವಾರಂಟೈನ್ ಸೆಂಟರ್ ನಲ್ಲಿ ಇರುವವರು ಯಾರೂ ಭಯಪಡಬಾರದು, ಧೈರ್ಯವಾಗಿ ಕೊರಿನಾ ಎದುರಿಸಬೇಕು. ಯಾರೂ ಹೆದರುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಸಾಕು ಎಂದು ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಇದೇ ರೀತಿ ಕ್ವಾರಂಟೈನ್ ಕೇಂದ್ರದಲ್ಲಿರುವ ಎಲ್ಲ ಬೆಟಾಲಿಯನ್ ಸಿಬ್ಬಂದಿ ಯೋಗ ಹಾಗೂ ಪ್ರಾಣಾಯಾಮ ಮಾಡುವಂತೆ ಸಲಹೆ ನೀಡಿದರು.