ಗದಗ: ಎಸ್‍ಬಿಐ ಬ್ಯಾಂಕಿನ ಎಟಿಎಂನಲ್ಲಿ, ಕಳೆದ ಒಂದು ತಿಂಗಳಿನಿಂದ ಬರೀ ಹರಿದ ನೋಟುಗಳು ಬರುತ್ತಿವೆ ಎಂದು ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಜನರು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2000 ಕೋಟಿ ನೀರಾವರಿ ಕಿಕ್‍ಬ್ಯಾಕ್ ಆರೋಪ, ತನಿಖೆ ಯಾಕಿಲ್ಲ? ಸರ್ಕಾರಕ್ಕೆ ಹೆಚ್‍ಡಿಕೆ ಪ್ರಶ್ನೆ
Advertisement
ಎಟಿಎಂನಲ್ಲಿ ಬರುತ್ತಿರುವ ಈ ಹರಿದ ನೋಟುಗಳು ಗ್ರಾಮಸ್ಥರಿಗೆ ತಲೆನೋವಾಗಿದೆ ಪರಿಣಮಿಸಿದೆ. ಪ್ರತಿ ಬಾರಿ ಹಣ ಡ್ರಾ ಮಾಡುವಾಗ 500 ರೂಪಾಯಿ ಮುಖ ಬೆಲೆಯ ಹರಿದ, ತುಂಡಾದ ಅಥವಾ ತೇಪೆ ಹಚ್ಚಿದ ನೋಟುಗಳು ಬರುತ್ತಿವೆ. ಹರಿದ ನೋಟುಗಳಿಂದ ಗ್ರಾಹಕರು ಕಂಗಾಲಾಗಿದ್ದು, ಕೈಯಲ್ಲಿ ಹಣವಿದ್ದರೂ ಪುನಃ ಬ್ಯಾಂಕಿಗೆ ಹೋಗಿ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ-ಮಲೆನಾಡು ಭಾಗದಲ್ಲಿ ಮನೆ ಕುಸಿತ
Advertisement
Advertisement
ಸುತ್ತಲಿನ ಏಳೆಂಟು ಹಳ್ಳಿಯ ನಡುವೆ ಇದೊಂದೆ ಎಟಿಎಂ ಇರೋದರಿಂದ ಅದೆಷ್ಟೇ ಬಾರಿ ಈ ಬಗ್ಗೆ ಬ್ಯಾಂಕ್‍ನವರಿಗೆ ಹೇಳಿದರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳಿಯರು ಹೇಳುತ್ತಿದ್ದಾರೆ. ಡಂಬಳ ಎಟಿಎಂ ಹೊರತು ಪಡಿಸಿದರೆ 27 ಕಿಲೋಮೀಟರ್ ಗದಗ ಬರಬೇಕು ಇಲ್ಲವೇ 24 ಕಿಲೋಮೀಟರ್ ಮುಂಡರಗಿಗೆ ಹೋಗಬೇಕು. ಹೀಗಾಗಿ ಗ್ರಾಮೀಣ ಜನರಿಗಾಗುವ ಈ ಸಮಸ್ಯೆ ಬಗೆಹರಿಸಿ ಅಂತ ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ವಿಶ್ವ ನಾಯಕರ ಪೈಕಿ ಶೇ.66 ಅಂಕದೊಂದಿಗೆ ಮೋದಿ ನಂಬರ್ 1
Advertisement