ಬೆಂಗಳೂರು: ಕೊರೊನಾ ಮಹಾಮಾರಿ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಲವರು ಗುಣಮುಖರಾಗುತ್ತಿದ್ದರು. ಆದರೆ ಇದೀಗ ಹೋಮ್ ಐಸೂಲೇಷನ್ ನಿಂದಾಗಿ ಸಾವಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗುತ್ತಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ಒಂದು ಕಡೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಅನುಮಾನವಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಒಡೆದು ಬಹುತೇಕರು ಗುಣಮುಖರಾಗುತ್ತಿದ್ದಾರೆ. ಅದರೆ ಹೋಮ್ ಐಸೋಲೇಶ್ ಆಗುತ್ತಿರುವವರಲ್ಲಿ ಹೆಚ್ಚು ಸಾವು ಸಂಭವಿಸುತ್ತಿದೆ. ಇದರಿಂದಾಗಿ ಆತಂಕ ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆರ ರಾಜ್ಯದಲ್ಲಿ ಹೋಮ್ ಐಸೂಲೇಷನ್ ಡೆತ್ ಹೆಚ್ಚುತ್ತಿದೆ.
ಸಾವು ಹೆಚ್ಚಲು ಕಾರಣವೇನು?
ಹೋಮ್ ಐಸೂಲೇಷನ್ ಡೆತ್ ಹೆಚ್ಚಲು ಕಾರಣವೇನು ಎಂಬುದನ್ನು ತಜ್ಞರು ತಿಳಿಸಿದ್ದು, ತಜ್ಞ ವೈದ್ಯ ಡಾ.ವಿಶಾಲ್ ರಾವ್ ಹೋಮ್ ಐಸೂಲೇಷನ್‍ಗೆ ಕಾರಣ ಬಿಚ್ಚಿಟ್ಟಿದ್ದಾರೆ. ಸೋಂಕು ಪತ್ತೆಯಾದ ಆರಂಭದ ಮೂರು ದಿನದಲ್ಲಿ ಆರೋಗ್ಯ ಸುಧಾರಣೆ ಆಗುತ್ತದೆ. ನಂತರ ನಾಲ್ಕನೇ ದಿನದ ಬಳಿಕ ಸೋಂಕಿತರಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆ ಆಗುತ್ತದೆ. ಆಕ್ಸಿಜನ್ ಕಡಿಮೆ ಆಗುವುದು ಸೊಂಕಿತರಿಗೆ ತಿಳಿಯುವುದಿಲ್ಲ. ಕೊನೇಯ ಹಂತಕ್ಕೆ ಬಂದಾಗ ಇದು ತಿಳಿಯುತ್ತದೆ. ಆಗ ಗುಣಮುಖರಾಗುವುದು ಕಷ್ಟ. ಹೀಗಾಗಿ ಸಾವು ಸಂಭವಿಸುತ್ತದೆ. ವೈದ್ಯರ ಸಲಹೆಗಳನ್ನು ಸರಿಯಾಗಿ ಪಾಲನೆ ಮಾಡದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.
ಪರಿಹಾರೋಪಾಯಗಳು
ಪ್ರತಿದಿನ ಆಕ್ಸಿಜನ್ ಲೆವೆಲ್ ಚೆಕ್ ಮಾಡಬೇಕು, ಆಕ್ಸಿಜನ್ ಲೆವೆಲ್ ಕಡಿಮೆ ಬಂದರೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು. ಆರೋಗ್ಯದ ಬಗ್ಗೆ ಪ್ರತಿ ದಿನ ವೈದ್ಯರಿಗೆ ಮಾಹಿತಿ ನೀಡಬೇಕು. ವೈದ್ಯರು ನೀಡಿರುವ ಮಾತ್ರೆಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಹೋಮ್ ಐಸೂಲೇಷನ್ ನಲ್ಲಿ ಇರುವವರು ಹೊರಗಡೆ ಎಲ್ಲೂ ಓಡಾಡಬಾರದು ಎಂಬುದನ್ನು ತಜ್ಞ ವೈದ್ಯ ಡಾ.ವಿಶಾಲ್ ರಾವ್ ತಿಳಿಸಿದ್ದಾರೆ.