ರಾಯಚೂರು: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹುಟ್ಟು ಹಬ್ಬವನ್ನು ರಾಯಚೂರಿನ ಅಭಿಮಾನಿಯೊಬ್ಬ ವಿಭಿನ್ನ ರೀತಿಯಲ್ಲಿ ಆಚರಿಸುವ ಮೂಲಕವಗಿ ಸುದ್ದಿಯಗಿದ್ದಾರೆ.
Advertisement
ಜುಲೈ 7 ಕ್ಕೆ 39 ವರ್ಷ ಪೂರೈಸಿ 40 ಕ್ಕೆ ಕಾಲಿಡುತ್ತಿರುವ ಧೋನಿಗೆ ನೇರವಾಗಿ ಉಡುಗೊರೆ ಕೊಡಲು ಆಗುತ್ತಿಲ್ಲ. ಹೀಗಾಗಿ ಧೋನಿ ಚಿತ್ರವನ್ನ ಕೈಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ವಿಜಯನಗರ ಜಿಲ್ಲೆ ಕೂಡ್ಲಿಗಿಯ ವೆಂಕಟೇಶ್ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಅಪ್ಪಟ ಅಭಿಮಾನಿಯಾಗಿದ್ದಾರೆ. ರಾಯಚೂರಿನ ಸಿಂಧನೂರು ಮೂಲದ ಟ್ಯಾಟೂ ಕಲಾವಿದ ಶಂಕರ್ ಬದಿ ಧೋನಿ ಚಿತ್ರವನ್ನೂ ಟ್ಯಾಟೂ ಹಾಕಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಜೊತೆ ಪ್ರೀತಿ, ಗರ್ಭಿಣಿಯಾದ ಬಳಿಕ ತಾಳಿ ಕಟ್ಟಿದವಗೆ 10 ವರ್ಷ ಜೈಲು ಶಿಕ್ಷೆ
Advertisement
ಈ ಹಿಂದೆ ಮೋದಿ, ಉಪೇಂದ್ರ, ಯಶ್ ಸೇರಿದಂತೆ ನಾನಾ ಗಣ್ಯ ವ್ಯಕ್ತಿಗಳ ಸುಂದರ ಟ್ಯಾಟೂಗಳ ಮೂಲಕ ಪ್ರಸಿದ್ಧಿಯಾಗಿರುವ ಶಂಕರ್ ಬದಿಯನ್ನ ಹುಡುಕಿಕೊಂಡು ಬಂದು ಬೆಂಗಳೂರಿನ ಸ್ವಾಗತ್ ಟ್ಯಾಟೂ ಸ್ಟುಡಿಯೋದಲ್ಲಿ ವೆಂಕಟೇಶ್ ಧೋನಿಯ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
Advertisement
Advertisement
ಧೋನಿ ಹುಟ್ಟು ಹಬ್ಬವನ್ನ ಕೇವಲ ಕೇಕ್ ಕತ್ತರಿಸುವ ಮೂಲಕ ಆಚರಿಸದರೆ ಮುಗಿಯುವುದಿಲ್ಲ. ಹೀಗಾಗಿ ಕೊನೆಯವರೆಗೂ ಧೋನಿ ಜೊತೆಯಲ್ಲಿರಬೇಕು ಅಂತ ಅಭಿಮಾನಿ ವೆಂಕಟೇಶ್ ತಮ್ಮ ಬಲ ಗೈ ಮೇಲೆ ಎಂ.ಎಸ್.ಧೋನಿ ಟ್ಯಾಟೂ ಹಾಕಿಸಿಕೊಂಡೆ. ಧೋನಿ ಕೇವಲ ಉತ್ತಮ ನಾಯಕ ಮಾತ್ರವಲ್ಲ ಉತ್ತಮ ಗೇಮ್ ಫಿನಿಶರ್ ಆಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಗೆದ್ದಿದೆ. ಟೀಂ ಇಂಡಿಯಾ ಟಿ20 ವಲ್ರ್ಡ್ ಕಪ್ ಗೆದ್ದಿದೆ. ಹೀಗಾಗಿ ಧೋನಿ ಮೇಲಿನ ಅಭಿಮಾನಕ್ಕೆ ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದಾಗಿದೆ ವೆಂಕಟೇಶ್ ಹೇಳಿದ್ದಾರೆ.